ಧಾರವಾಡ: ಲಾಕ್‍ಡೌನ್ ಘೋಷಿಸಿದ್ದರಿಂದ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಶೇ.35 ಪಾಸಿಟಿವಿಟಿ ಹೋಗಿತ್ತು. ಆದರೆ ಈಗ ಶೇ. 14ಕ್ಕೆ ಇಳಿದಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
Advertisement
Advertisement
ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇವತ್ತು ಶೇ.14ರಷ್ಟು ಪಾಸಿಟಿವಿಟಿ ಬರಬಹುದು. ಪ್ರತಿ ಹಂತದಲ್ಲಿ ಕೊರೊನಾ ಇಳಿಕೆಯಾಗುತ್ತಿದೆ. ಲಾಕ್‍ಡೌನ್‍ನಿಂದ ಇದೆಲ್ಲಾ ಸಾಧ್ಯವಾಗಿದೆ. ಇನ್ನೂ ಏಳು ದಿನ ಲಾಕ್‍ಡೌನ್ ಇದೆ. ಜೂ. 5 ಅಥವಾ 6 ರಂದು ಬರುವ ಪಾಸಿಟಿವಿಟಿ ರೇಟ್ ನೋಡಿ ಸಿಎಂ ಲಾಕ್ ಡೌನ್ ಬಗ್ಗೆ ನಿರ್ಧಾರ ಮಾಡುತ್ತಾರೆ. ಶೇ. 5 ರಷ್ಟು ಪಾಸಿಟಿವಿಟಿ ಬಂದರೆ ಲಾಕ್‍ಡೌನ್ ಸಡಿಲಕೆ ಮಾಡುತ್ತೇವೆ ಎಂದು ನುಡಿದರು.
Advertisement
Advertisement
ಯತ್ನಾಳ್ ಸಿಎಂ ಬಗ್ಗೆ ಮಾತನಾಡಿರುವುದು ಅವರ ವೈಯಕ್ತಿಕ ವಿಚಾರ. ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ. ಸಿಎಂ ಬದಲಾವಣೆ ಗೊಂದಲನೇ ನನಗೆ ಅರ್ಥ ಆಗುತ್ತಿಲ್ಲ. ಈಗ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಇದ್ದವರೇ ಮುಂದುವರೆತ್ತಾರೆ ಎಂದರು. ಸಹಿ ಸಂಗ್ರಹದ ವಿಚಾರವೂ ನನಗೆ ಗೊತ್ತಿಲ್ಲ. ಈ ಬೆಳವಣಿಗೆ ಬಗ್ಗೆ ಎಲ್ಲಿ ಏನು ಮಾತಾಡಬೇಕು ಆ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು. ಇದನ್ನು ಓದಿ:ಕೈಗಾರಿಕಾಭಿವೃದ್ಧಿಗೆ ಪೂರಕವಾದ ರಾಷ್ಟ್ರೀಯ ಶಿಕ್ಷಣ ನೀತಿ ಈ ವರ್ಷದಿಂದಲೇ ಜಾರಿ: ಡಿಸಿಎಂ