ರಾಯಚೂರು: ಕೊರೊನಾ ಲಾಕ್‍ಡೌನ್ ಶುರುವಾದಗಿನಿಂದ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೇ ನಷ್ಟ ಅನುಭವಿಸುತ್ತಿದ್ದಾರೆ. ಇದೀಗ ಲಾಕ್‍ಡೌನ್‍ನಿಂದ ಈರುಳ್ಳಿ ಬೆಲೆ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದಾರೆ.
ಜಿಲ್ಲೆಯ ಮಸ್ಕಿ ತಾಲೂಕಿನ ಕೋಟೆಕಲ್ಲು ಗ್ರಾಮದಲ್ಲಿ ಈರುಳ್ಳಿ ಬೆಳೆದ ಸುಮಾರು 15 ರೈತರು ತಮ್ಮ ಬೆಳೆಯನ್ನ ಜಮೀನಿಗೆ ಅರ್ಪಿಸುತ್ತಿದ್ದಾರೆ. ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದರಿಂದ ಅದನ್ನ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಇನ್ನೂ ನಷ್ಟ ಹೆಚ್ವಾಗುತ್ತೆ ಅಂತ ಜಮೀನಿನಲ್ಲೆ ಬಿಟ್ಟಿದ್ದಾರೆ.
Advertisement
Advertisement
ಸುಮಾರು 400 ಕ್ವಿಂಟಾಲ್ ಈರುಳ್ಳಿ ಬೆಲೆಯಿಲ್ಲದೆ ಹಾಳಾಗಿ ಹೋಗುತ್ತಿದೆ. ರೈತರಲ್ಲಿ ಬರುವ ಖರೀದಿದಾರರು ಕ್ವಿಂಟಾಲ್‍ಗೆ 60 ರೂಪಾಯಿ ಕೊಡುವುದಾಗಿ ಹೇಳುತ್ತಿದ್ದಾರೆ. ಇನ್ನೂ ಸಗಟು ಮಾರುಕಟ್ಟೆಯಲ್ಲಿ 100 ರಿಂದ 150 ರೂ. ಕ್ವಿಂಟಾಲ್ ಇದೆ. ಹೀಗಾಗಿ ರೈತರು ತಾವು ಬೆಳೆದ ಬೆಳೆಗೆ ಸರಿಯಾಗಿ ಬೆಲೆ ಸಿಗದಿದ್ದರಿಂದ ಕಂಗಾಲಾಗಿದ್ದಾರೆ.
Advertisement
ಬೆಳೆಗೆ ಉತ್ತಮ ಬೆಲೆ ಬಂದರೆ ಮಾರಾಟ ಮಾಡುವುದು ಇಲ್ಲದಿದ್ದರೆ ಜಮೀನಿನಲ್ಲೇ ಕೊಳೆತುಹೋಗಲಿ ಅಂತ ಬಿಟ್ಟಿದ್ದಾರೆ. ಲಾಕ್‍ಡೌನ್ ನಿಂದ ಮಾರ್ಚ್ ತಿಂಗಳಲ್ಲೆ ಗ್ರಾಮಗಳಿಗೆ ಬಂದಿರುವ ಕೂಲಿ ಕಾರ್ಮಿಕರು ತಮ್ಮ ಜಮೀನುಗಳಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದಾರೆ. ಆದರೆ ಬೆಲೆ ಪಾತಾಳಕ್ಕೆ ಕುಸಿದಿದ್ದರಿಂದ ಕೆಲಸವೂ ಇಲ್ಲ, ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆಯೂ ಇಲ್ಲದಂತಾಗಿದೆ. ಹೀಗಾಗಿ ಸರ್ಕಾರ ನಮ್ಮ ಕಡೆ ಗಮನಹರಿಸಬೇಕು ಅಂತ ರೈತರು ಒತ್ತಾಯಿಸಿದ್ದಾರೆ.