– ನೆಲಮಂಗಲ ಟೋಲ್‍ನಲ್ಲಿ ನಡೆಯುತ್ತಿಲ್ಲ ವಾಹನಗಳ ತಪಾಸಣೆ
ನೆಲಮಂಗಲ: ಲಾಕ್‍ಡೌನ್‍ಗೂ ಕ್ಯಾರೆ ಎನ್ನದೆ ವಾಹನಗಳು ಬೆಂಗಳೂರಿನತ್ತ ಹೆಚ್ಚು ವಾಹನಗಳು ಆಗಮಿಸುತ್ತಿದ್ದು, ಸಿಬ್ಬಂದಿ ಸಹ ತಪಾಸಣೆ ನಡೆಸದೆ ಬಿಡುತ್ತಿದ್ದಾರೆ. ಇದರಿಂದಾಗಿ ಎಂದಿನಂತೆ ನೆಲಮಂಗಲ ಟೋಲ್‍ನಲ್ಲಿ ವಾಹನ ಸಂಚಾರ ಜೋರಾಗಿಯೇ ನಡೆಯುತ್ತಿದೆ.
ನೆಲಮಂಗಲ ಟೋಲ್‍ನಲ್ಲಿ ವಾಹನಗಳ ತಪಾಸಣೆ ನಡೆಸಿ, ವಾಹನಗಳ ಸಂಚಾರಕ್ಕೆ ಸಿಬ್ಬಂದಿ ಹಾಗೂ ಪೊಲೀಸರು ಬ್ರೇಕ್ ಹಾಕಿಲ್ಲ. ಹೀಗಾಗಿ ಟೋಲ್‍ನಲ್ಲಿ ವಾಹನಗಳ ಸಂಚಾರ ಎಂದಿನಂತೆ ಜೋರಾಗಿದೆ. ಲಾಕ್‍ಡೌನ್ ಸಮಯದಲ್ಲೂ ಬರೋರು ಬರಬಹುದು, ಹೋಗೋರು ಹೋಗಬಹುದು ಎನ್ನವಂತಾಗಿದೆ. ಟೋಲ್‍ನ ಮುಖ್ಯರಸ್ತೆಗಳನ್ನು ಬಂದ್ ಮಾಡಿರುವುದನ್ನು ಬಿಟ್ರೆ ಪೊಲೀಸರು ಇನ್ನಾವುದೇ ರೀತಿಯ ತಪಾಸಣೆಯನ್ನು ನಡೆಸುತ್ತಿಲ್ಲ.
Advertisement
Advertisement
ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಓಪನ್ ಇರುವುದರಿಂದ ಹೆಚ್ಚುವ ವಾಹನಗಳು ಬೆಂಗಳೂರಿನತ್ತ ಆಗಮಿಸುತ್ತಿವೆ. ಕಾರ್, ಬೈಕ್, ಆಟೋ, ಟ್ರಕ್, ಗೂಡ್ಸ್ ಗಾಡಿಗಳ ಓಡಾಟ ಜೋರಾಗಿದ್ದು, ಪೊಲೀಸರು ಯಾವುದೇ ತಪಾಸಣೆ ನಡೆಸುತ್ತಿಲ್ಲ. ಲಾಕ್‍ಡೌನ್ ಜಾರಿಯಾದ ಮೇಲೆ ಯಾರು ಹೋಗೋ ಹಾಗಿಲ್ಲ, ಬರೋ ಹಾಗಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ ಅದೆಲ್ಲ ಮಾತಿಗಷ್ಟೆ ಎನ್ನುವಂತಾಗಿದೆ.