ಚಿಕ್ಕೋಡಿ: ಕೋವಿಡ್ 19 ಲಾಕ್‌ಡೌನ್ ಸಮಯದಲ್ಲಿ ಜಿಲ್ಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬ ವಿದ್ಯುತ್ ಚಾಲಿತ ಬೈಕ್ ತಯಾರಿಸಿ ಸುದ್ದಿಯಾಗಿದ್ದಾನೆ.
ನಿಪ್ಪಾಣಿ ನಗರದ ನಿವಾಸಿ ಪ್ರಥಮೇಶ ಸುತಾರ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಚಾರ್ಜಿಂಗ್ ನಿಂದ ಬೈಕ್ ಅನ್ನು ಮನೆಯಲ್ಲಿ ತಯಾರಿಸಿದ್ದಾನೆ. ಕುಟುಂಬಸ್ಥರ ಸಹಕಾರದಿಂದ ಹಳೆಯ ನಿರುಪಯುಕ್ತ ಬೈಕ್‌ಗಳ ಬಿಡಿ ಭಾಗಗಳನ್ನು ಉಪಯೋಗಿಸಿ ಈ ಬೈಕ್ ನಿರ್ಮಿಸಿದ್ದಾನೆ.
Advertisement
Advertisement
ಲೆಡ್ ಆಸಿಡ್ 48 ವೋಲ್ಟೇಜ್ ಬ್ಯಾಟರಿ, 48 ವೋಲ್ಟ್ ಮೋಟಾರ್, 750 ವ್ಯಾಟ್ ಮೋಟಾರ್ ಬಳಕೆ ಮಾಡಿದ್ದಾನೆ. ಮೋಟಾರ್ ಮತ್ತು ಬ್ಯಾಟರಿ ನಿಯಂತ್ರಣ ಯಂತ್ರ ಬಳಸಿ 25 ಸಾವಿರ ರೂ. ವೆಚ್ಚದಲ್ಲಿ ಬೈಕ್ ತಯಾರಾಗಿರುವುದು ವಿಶೇಷ.
Advertisement
ಒಮ್ಮೆ ಫುಲ್ ಚಾರ್ಜಿಂಗ್ ಮಾಡಿದರೆ ಬೈಕ್ ಸುಮಾರು 35 ಕಿ.ಮೀ ಕ್ರಮಿಸುತ್ತದೆ. ಗಂಟೆಗೆ 40 ಕಿಮೀ ವೇಗದಲ್ಲಿ ಓಡುವ ಈ ಬೈಕ್‌ನ ವಿಶೇಷ ಎಂದರೆ ರಿವರ್ಸ್ ಕೂಡ ಚಲಿಸುತ್ತದೆ.
Advertisement
ಪ್ರಥಮೇಶನ ಈ ಸಾಧನೆಗೆ ಕುಟುಂಬಸ್ಥರು ಸಹಕಾರ ನೀಡಿದ್ದು ಇವರ ತಂದೆ ಪ್ರಕಾಶ ಸುತಾರ ಕೂಡ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಾರೆ. ಲಾಕ್‌ಡೌನ ವೇಳೆ ತಮ್ಮ ಮಗ ಈ ಎಲೆಕ್ಟ್ರಿಕ್ ಬೈಕ್ ತಯಾರಿಸಿದ್ದು, ಮಗನ ಸಾಧನೆಗೆ ಸಂತಸ ವ್ಯಕ್ತ ಪಡಿಸಿದ್ದಾರೆ.