– ಸೀರಮ್ ಲ್ಯಾಬ್ ಭೇಟಿ ನೀಡಲಿದ್ದಾರೆ ಪ್ರಧಾನಿ
– ಆಕ್ಸ್‍ಫರ್ಡ್ ಕೋವಿಶೀಲ್ಡ್ ಲಸಿಕೆ ಯಶಸ್ವಿಯಾದ ಬೆನ್ನಲ್ಲೇ ಭೇಟಿ
ನವದೆಹಲಿ: ಲಸಿಕೆ ತಯಾರಿ ಹಾಗೂ ವಿತರಣಾ ವ್ಯವಸ್ಥೆಯ ಕುರಿತು ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹ ವಿತರಣೆ ಭರ್ಜರಿ ತಯಾರಿ ನಡೆಸಿವೆ. ಪ್ರಧಾನಿ ನರೇಂದ್ರ ಮೋದಿ ವಿವಿಧ ರಾಜ್ಯಗಳ ಸಿಎಂ ಹಾಗೂ ಅಧಿಕಾರಿಗಳೊಂದಿಗೆ ಆಗಾಗ ಸಭೆ ನಡೆಸುತ್ತಲೇ ಇದ್ದಾರೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಲಸಿಕೆ ತಯಾರಿಸುತ್ತಿರುವ ಲ್ಯಾಬ್‍ಗೆ ಭೇಟಿ ನೀಡಲಿದ್ದಾರೆ.
ಕೇಂದ್ರ ಸರ್ಕಾರದ ಸೂಚನೆಯಂತೆ ಲಸಿಕೆ ವಿತರಣೆಗೆ ಸಿದ್ಧತೆ ಕೈಗೊಳ್ಳಲಾಗಿದ್ದು, ರಾಜ್ಯಾದ್ಯಂತ 29,451 ಲಸಿಕೆ ವಿತರಣೆ ಕೇಂದ್ರಗಳು, 10,000 ವ್ಯಾಕ್ಸಿನೇಟರ್ ಸಿಬ್ಬಂದಿಗಳನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ 2,855 ಕೋಲ್ಡ್ ಚೇನ್ ಕೇಂದ್ರಗಳು ಲಭ್ಯವಿದ್ದು, ಪಶು ಸಂಗೋಪನೆ ಇಲಾಖೆ, ಖಾಸಗಿ ಆಸ್ಪತ್ರೆಗಳ ಸೌಲಭ್ಯಗಳನ್ನೂ ಬಳಸಲಾಗುವುದು. (2/2) pic.twitter.com/Jt5HAhiHto
— Dr Sudhakar K (@mla_sudhakar) November 24, 2020
ಆಕ್ಸ್‌ಫರ್ಡ್ ಮತ್ತು ಅಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಕೋವಿಶೀಲ್ಡ್ ಹೆಸರಿನ ಲಸಿಕೆಯ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಜತೆಗೂಡಿ ಸೀರಮ್ ಭಾರತದಲ್ಲಿ ಕೋವಿಡ್ ವೈರಸ್ ನಿಯಂತ್ರಣದ ಲಸಿಕೆ ತಯಾರಿಕೆಗೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಪುಣೆಯ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‍ಐಐ)ದ ಲ್ಯಾಬ್‍ಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪ್ರತಿ ನಿಮಿಷಕ್ಕೆ 500, ಪ್ರತಿ ಗಂಟೆಗೆ 30 ಸಾವಿರ ಸೀಸೆ ಲಸಿಕೆ ಉತ್ಪಾದಿಸುತ್ತೇವೆ: ಸೀರಮ್ ಸಿಇಓ
ಆರಂಭದಲ್ಲಿ ಎಷ್ಟು ಜನರಿಗೆ ವ್ಯಾಕ್ಸಿನ್ ನೀಡಬಹುದು, ಬಿಡುಗಡೆ ಹೇಗೆ, ಉತ್ಪಾದನೆ ಹಾಗೂ ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಕುರಿತು ಸೀರಮ್ ಇನ್‍ಸ್ಟಿಟಿಟ್ಯೂಟ್ ಆಫ್ ಇಂಡಿಯಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಟ್ಟು ಏಳು ಸಂಸ್ಥೆಗಳಿಗೆ ಪ್ರಿ ಕ್ಲಿನಿಕಲ್ ಟೆಸ್ಟ್, ಮರುಪರಿಶೀಲನೆ ಹಾಗೂ ವಿಶ್ಲೇಷಣೆಗಾಗಿ ಕೊರೊನಾ ಲಸಿಕೆ ತಯಾರಿಸಲು ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆ ಅನುಮತಿ ನೀಡಿದೆ. ಇವುಗಳ ಪೈಕಿ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‍ಐಐ)ಹಾಗೂ ಜೆನ್ನೋವಾ ಬಯೋಫಾರ್ಮಾಸಿಟಿಕಲ್ಸ್ ಸಹ ಸೇರಿವೆ.
1 ಸಾವಿರ ರೂ.
ಕೊರೊನಾ ಲಸಿಕೆ ಕುರಿತು ಎಸ್‍ಐಐ ಸಿಇಓ ಆದರ್ ಪೂನಾವಾಲ ಗುರುವಾರ ಮಾಹಿತಿ ನೀಡಿದ್ದು, ಆಕ್ಸ್‌ಫರ್ಡ್ ನ ಈ ಕೊರೊನಾ ಲಸಿಕೆ ಮುಂದಿನ ವರ್ಷ ಫೆಬ್ರವರಿ ವೇಳೆಗೆ ಆರೋಗ್ಯ ಸಿಬ್ಬಂದಿ ಹಾಗೂ ಹಿರಿಯ ನಾಗರಿಕರಿಗೆ ಸಿಗಲಿದೆ. ಏಪ್ರಿಲ್ ವೇಳೆಗೆ ಸಾಮಾನ್ಯ ಜನರಿಗೂ ಸಿಗಲಿದೆ. ಅಗತ್ಯ 2 ಡೋಸ್‍ಗೆ 1 ಸಾವಿರ ರೂ.ಗೆ ವ್ಯಾಕ್ಸಿನ್ ಸಿಗಬಹುದು. ಇದು ಅಂತಿಮ ಪ್ರಯೋಗದ ಫಲಿತಾಂಶ ಹಾಗೂ ನಿಯಂತ್ರಕ ಅನುಮೋದನೆಗಳನ್ನು ಅವಲಂಬಿಸಿರುತ್ತದೆ ಎಂದು ವಿವರಿಸಿದ್ದಾರೆ.
ವಿಶೇಷ ಎಂಬಂತೆ ಎರಡು ಯುಎಸ್ ಲಸಿಕೆಗಳಾದ ಫೀಜರ್ ಹಾಗೂ ಮಾಡರ್ನಾ ಸಂಸ್ಥೆಗಳು ತಮ್ಮ 3ನೇ ಹಂತದ ಪ್ರಯೋಗಗಳಿಂದ ಕ್ರಮವಾಗಿ ಶೇ.95 ಹಾಗೂ ಶೇ.94.5 ಯಶಸ್ಸಿನ ಪ್ರಮಾಣವನ್ನು ತೋರಿಸಿವೆ.