ಬೆಂಗಳೂರು: ಕೊರೊನಾ ಲಸಿಕೆ ಬಳಕೆಗೆ ಇಂದು ಚಾಲನೆ ಸಿಕ್ಕಿರುವ ಕುರಿತು ನಟ ಧ್ರುವ ಸರ್ಜಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಕೊರೊನಾ ಲಸಿಕೆ ಚಾಲನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಟ ಧ್ರುವ ಸರ್ಜಾ, ಲಸಿಕೆ ಬಳಕೆಗೆ ಬಂದಿರುವ ವಿಚಾರವಾಗಿ ಸಂತೋಷವಾಗಿದೆ. ಇಡೀ ಮಾನವ ಕುಲಕ್ಕೆ ಇದರ ಊಪಯೋಗವಾಗಲಿದೆ. ಪ್ರತಿಯೊಬ್ಬರಿಗೂ ಇದರಿಂದ ಉಪಯೋಗ ಆಗಲಿದೆ, ಊಪಯೋಗ ಪಡೆದುಕೊಳ್ಳೋಣ ಎಂದು ಹೇಳಿದ್ದಾರೆ.
ಕೊರೊನಾ ಲಸಿಕೆಯಿಂದ ಮಕ್ಕಳು ಮತ್ತೆ ಶಾಲೆಗಳಿಗೆ ಹೋಗಲು ಸಹಾಯ ಆಗಲಿದೆ. ಆನ್‍ಲೈನ್ ಕ್ಲಾಸ್ ನಿಂದ ಕಲಿಕೆ ಸರಿಯಾದ ರೀತಿಯಲ್ಲಿ ಸಾಧ್ಯವಾಗುವುದಿಲ್ಲ. ಶಾಲೆಗೆ ಹೋಗಿ ಎಲ್ಲರೊಂದಿಗೆ ಬೆರೆತು ಕಲಿತರೆ ಶಿಕ್ಷಣ ಚೆನ್ನಾಗಿರುತ್ತದೆ. ಆಗ ಮಾತ್ರ ಮಕ್ಕಳಿಗೆ ಲೋಕಜ್ಞಾನದ ಅರಿವು ಬರುತ್ತದೆ. ಲಸಿಕೆ ಬಂದಿರುವುದರಿಂದ ಮುಖ್ಯವಾಗಿ ಮಕ್ಕಳು ಖುಷಿಯಿಂದ ಶಾಲೆಗೆ ಹೋಗಬಹುದಾಗಿದೆ. ಕಾರ್ಮಿಕರಿಗೂ ಕೂಡ ಇದರಿಂದ ಸಹಾಯ ಆಗಲಿದೆ. ಪ್ರತಿಯೊಬ್ಬರಿಗೂ ಇದರ ಉಪಯೋಗ ಆಗಲಿದೆ ಎಂದು ಹೇಳಿದ್ದಾರೆ.