ಮೈಸೂರು: ಜಿಲ್ಲೆಯಲ್ಲಿ ಲಾಕ್‍ಡೌನ್ ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಸೇಫ್ ವೀಲ್ ಟ್ರಾವೆಲ್ಸ್ ಸಂಸ್ಥೆ ಮುಂದಾಗಿದ್ದು, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದೆ.
ಮೈಸೂರು ನಗರ ವ್ಯಾಪ್ತಿಯ ಜನರಿಗೆ ಕಾರ್ ವ್ಯವಸ್ಥೆ ಮಾಡಿದ್ದು, 15 ಕಾರುಗಳನ್ನು ಇದಕ್ಕಾಗಿ ಮೀಸಲಿಟ್ಟಿದೆ. ಲಸಿಕೆ ಪಡೆಯಲು ತೆರಳುವ ಹಿರಿಯ ನಾಗರೀಕರನ್ನು ಅವರ ಮನೆಯಿಂದ ಕಾರಿನಲ್ಲಿ ಕರೆದುಕೊಂಡು ಹೋಗಿ ಅವರು ವ್ಯಾಕ್ಸಿನ್ ಪಡೆದ ನಂತರ ವಾಪಸ್ ಮನೆಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ.
ಒಂದು ಕಾರಿನಲ್ಲಿ ಇಬ್ಬರಿಗೆ ಮಾತ್ರ ಅವಕಾಶವಿದೆ. ಇಂದಿನಿಂದ ಲಾಕ್‍ಡೌನ್ ಅವಧಿ ಮುಗಿಯುವವರೆಗೂ ಈ ಸೇವೆ ಲಭ್ಯವಿದ್ದು, ದೂರವಾಣಿ ಸಂಖ್ಯೆ 0821 4001100 ಕರೆ ಮಾಡಿ ಒಂದು ದಿನ ಮುಂಚಿತವಾಗಿ ಬುಕ್ ಮಾಡಬೇಕು. ಮರುದಿನ ನಿಮ್ಮ ಮನೆ ಬಾಗಿಲಿಗೆ ಕಾರು ಬಂದು ವ್ಯಾಕ್ಸಿನ್ ಹಾಕಿಸಿ ಮನೆಗೆ ವಾಪಸ್ ಮಾಡಲಿದೆ.