ಬೀದರ್: ವಾಕ್ಸಿನ್ ಪಡೆದರೆ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ ಎಂಬ ವದಂತಿ ಹಿನ್ನಲೆಯಲ್ಲಿ ಬಸವಕಲ್ಯಾಣದ ಮುಸ್ಲಿಂ ಬಾಂಧವರು ಲಸಿಕೆ ಪಡೆಯಲು ಭಯದಲ್ಲಿ ಹಿಂದೇಟು ಹಾಕಿದ್ದಾರೆ. ವದಂತಿಗಳಿಂದ ಲಸಿಕೆ ಹಾಕಿಕೊಳ್ಳಲು ಭಯಗೊಂಡು ಹಿಂದೇಟು ಹಾಕಿದ ಮುಸ್ಲಿಂ ಬಾಂಧವರಲ್ಲಿ ಬಸವಕಲ್ಯಾಣ ಬಿಜೆಪಿ ನೂತನ ಶಾಸಕ ಶರಣು ಸಲಗಾರ ಜಾಗೃತಿ ಮೂಡಿಸಿದ್ದಾರೆ.
ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ ಲಸಿಕೆ ಪಡೆಯಲು ಹಿಂದೇಟು ಹಾಕಿದಾಗ ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಸಿಎಂ ಇಬ್ರಾಹಿಂಗೆ ವೀಡಿಯೋ ಕಾಲ್ ಮಾಡಿ ಮುಸ್ಲಿಂ ಸಮುದಾಯದ ಜೊತೆ ಮಾತನಾಡಿಸಿ ಶಾಸಕರು ಮನವೊಲಿಸುವುದರ ಜೊತೆ ಲಇಕೆ ಕುರಿತಾಗಿ ಜಾಗೃತಿಯನ್ನು ಮೂಡಿಸಿದ್ದಾರೆ.
ಮುಸ್ಲಿಂ ಬಾಂಧವರಲ್ಲಿ ಲಸಿಕೆ ಬಗ್ಗೆ ಇದ್ದ ತಪ್ಪು ಕಲ್ಪನೆಯನ್ನು ಶಾಸಕರು ಜಾಗೃತಿ ಮೂಡಿಸುವ ಮೂಲಕ ಬಗೆಹರಿಸಿ ಮುಸ್ಲಿಂ ಬಾಂಧವರಿಗೆ ಲಸಿಕೆ ಕೊಡಿಸಿದ ಕಲ್ಯಾಣ ಶಾಸ ಬಿಜೆಪಿ ಶಾಸಕ ಶರಣು ಸಲಗಾರ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡೆಡ್ಲಿ ಕೊರೊನಾವನ್ನು ಗೆದ್ದ ಶತಾಯುಷಿ ಅಜ್ಜ- ಪಟಾಕಿ ಸಿಡಿಸಿ ಸಂಭ್ರಮಿಸಿದ ಕುಟುಂಬಸ್ಥರು
ಮುಸ್ಲಿಂ ಬಾಂಧವರು ಲಸಿಕೆ ಹಾಕಿಸಿಕೊಳ್ಳಲು ಹೆದರುತ್ತಿರುವ ವಿಷಯ ತಿಳಿದು ಅವರಿಗೆ ಜಾಗೃತಿ ಮೂಡಿಸಿದೆ, ಜೊತೆಗೆ ಸಮುದಾಯದ ಹಿರಿಯ ಮುಖಂಡ ಸಿಎಂ ಇಬ್ರಾಹಿಂ ಜೊತೆ ಮಾತನಾಡಿಸಿ ಲಸಿಕೆ ಕೊಡಿಸಿದ್ದೆನೆ ಎಂದು ನೂತನ ಬಿಜೆಪಿ ಶಾಸಕ ಶರಣು ಸಲಗಾರ ಹೇಳಿದ್ದಾರೆ.