ಬೀದರ್: ಕೊರೊನಾ ಲಸಿಕೆ ಪಡೆಯದೇ ಜಿಲ್ಲಾಧಿಕಾರಿಗಳ ಕಾಲಿಗೆ ಬಿದ್ದು ವಯೋವೃದ್ಧೆ ಹೈಡ್ರಾಮಾ ಮಾಡಿದ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದಲ್ಲಿ ನಡೆದಿದೆ.
Advertisement
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮದಡಿ ಬೀದರ್ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯಕ್ಕೆ ಹಳ್ಳಿಖೇಡ್ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಗ್ರಾಮದಲ್ಲಿ ಲಸಿಕೆ ಪಡೆಯದವರಿಗೆ ಲಸಿಕೆ ನೀಡಲು ಮುಂದಾದಾಗ ಲಸಿಕೆ ಪಡೆಯಲು ವಯೋವೃದ್ಧೆ ಮತ್ತು ಕೆಲವು ಮಹಿಳೆಯರು ಹಿಂದೇಟು ಹಾಕಿದ್ದಾರೆ. ಇದನ್ನೂ ಓದಿ: ತೋಟದ ಮನೆಯಲ್ಲಿ ಕೋವಿಡ್ ಲಸಿಕಾ ಕೇಂದ್ರ -ರೈತರಿಗೆ ವ್ಯಾಕ್ಸಿನ್ ಹಾಕಿದ ಸಿಬ್ಬಂದಿ
Advertisement
Advertisement
ವಯೋವೃದ್ಧೆ ಸರೋಜಾ (65) ಅವರು, ನನಗೆ ಲಸಿಕೆ ಬೇಡ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಅವರ ಕಾಲಿಗೆ ಬಿದ್ದು, ಈಗಾಗಲೆ ನನಗೆ ಜ್ವರ ಮತ್ತು ಕೈ ನೋವು ಇದೆ. ನಾನು ಸತ್ತರೆ ಏನು ಮಾಡೋದು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ, ಹಾಗೂ ಡಿಎಚ್‍ಓ ಮುಂದೆ ಹೈಡ್ರಾಮಾ ಮಾಡಿದ್ದಾರೆ. ಈ ವೇಳೆ ವೃದ್ಧೆಯ ಮನೆಯ ನೆಲದ ಮೇಲೆ ಕುಳಿತು ಜಿಲ್ಲಾಧಿಕಾರಿ, ಜಿಪಂ ಸಿಇಓ ಹಾಗೂ ಡಿಎಚ್‍ಓ ಎಷ್ಟೇ ಮನವೊಲಿಸಿದರು ಲಸಿಕೆ ಪಡೆಯಲು ವಯೋವೃದ್ಧೆ ಹಿಂದೇಟು ಹಾಕಿದ್ರು. ನಂತರ ಸತತ 30 ನಿಮಿಷಗಳ ಬಳಿಕ ಜಿಲ್ಲಾಧಿಕಾರಿಗಳ ಮಾತಿಗೆ ಒಪ್ಪಿದ ವಯೋವೃದ್ಧೆ ಲಸಿಕೆ ಪಡೆದರು. ಇದನ್ನೂ ಓದಿ: ಲಸಿಕೆ ಪಡೆಯಲು ಹೇಳಿದ್ದಕ್ಕೆ ಪೊಲೀಸರಿಗೆ ಬೆದರಿಕೆ ಹಾಕಿದ ವೃದ್ಧೆ
Advertisement
ನನಗೆ ಏನಾದರು ಆದರೆ ನೋಡಿಕೊಳ್ಳಲು ಯಾರು ಇಲ್ಲ. ಜೊತೆಗೆ ಲಸಿಕೆ ಪಡೆದರೆ ಜ್ವರ ಹಾಗೂ ಕೈ ನೋವು ಬರುತ್ತೆ ಎಂದು ವೈಯೋ ವೃದ್ಧೆ ಪಬ್ಲಿಕ್ ಟಿವಿಗೆ ತನ್ನ ಅತಂಕ ವ್ಯಕ್ತಪಡಿಸಿದರು.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ರಾಮಚಂದ್ರನ್ ತಪ್ಪು ಕಲ್ಪನೆಯಿಂದಾಗಿ ಅಜ್ಜಿ ಲಸಿಕೆ ಪಡೆಯಲು ಹಿಂದೇಟು ಹಾಕಿದ್ರು, ಈಗ ನಾವು ಸತತ ಮನವೊಲಿಸಿದ ಬಳಿಕ ಲಸಿಕೆ ಪಡೆದಿದ್ದಾರೆ. ಯಾರು ಲಸಿಕೆ ಪಡೆಯಲು ಭಯ ಪಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಇದನ್ನೂ ಓದಿ: ನಂಗೆ ಇಂಜೆಕ್ಷನ್ ಬೇಡ, ನನ್ನ ಮಕ್ಕಳಿಗೆ ಅನ್ನ ಮಾಡಿಕೊಡೋರು ಯಾರೂ ಇಲ್ಲ- ಲಸಿಕೆ ಹೈಡ್ರಾಮ