Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಲಸಿಕೆ ಪಡೆದ ಬಳಿಕ ರಕ್ತ ಹೆಪ್ಪುಗಟ್ಟುತ್ತಾ? ಅಲರ್ಜಿ ಹೊಂದಿರುವವರು ಲಸಿಕೆ ಪಡೆಯಬಹುದೇ? – ಅನುಮಾನಗಳಿಗೆ ಇಲ್ಲಿದೆ ಉತ್ತರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಲಸಿಕೆ ಪಡೆದ ಬಳಿಕ ರಕ್ತ ಹೆಪ್ಪುಗಟ್ಟುತ್ತಾ? ಅಲರ್ಜಿ ಹೊಂದಿರುವವರು ಲಸಿಕೆ ಪಡೆಯಬಹುದೇ? – ಅನುಮಾನಗಳಿಗೆ ಇಲ್ಲಿದೆ ಉತ್ತರ

Districts

ಲಸಿಕೆ ಪಡೆದ ಬಳಿಕ ರಕ್ತ ಹೆಪ್ಪುಗಟ್ಟುತ್ತಾ? ಅಲರ್ಜಿ ಹೊಂದಿರುವವರು ಲಸಿಕೆ ಪಡೆಯಬಹುದೇ? – ಅನುಮಾನಗಳಿಗೆ ಇಲ್ಲಿದೆ ಉತ್ತರ

Public TV
Last updated: June 8, 2021 4:24 pm
Public TV
Share
5 Min Read
FotoJet 9 2
SHARE

ಈಗಾಗಲೇ ದೇಶದಲ್ಲಿ 23 ಕೋಟಿಯಷ್ಟು ಕೊರೊನಾ ಲಸಿಕೆಯನ್ನು ವಿತರಣೆ ಮಾಡಲಾಗಿದೆ. ಹೀಗಿದ್ದರೂ ಲಸಿಕೆ ತೆಗೆದುಕೊಂಡವರಿಗೆ ಮತ್ತು ಲಸಿಕೆ ತೆಗೆದುಕೊಳ್ಳುವ ಮಂದಿಗೆ ಹಲವು ಅನುಮಾನ, ಗೊಂದಲಗಳಿವೆ. ಈ ಅನುಮಾನವನ್ನು ಪರಿಹರಿಸುವ ನಿಟ್ಟಿನಲ್ಲಿ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ. ಪಾಲ್ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಎದ್ದಿರುವ ಗೊಂದಲಗಳಿಗೆ ಉತ್ತರವನ್ನು ನೀಡಿದ್ದಾರೆ.

ಅಲರ್ಜಿ ಹೊಂದಿರುವ ಜನರು ಲಸಿಕೆ ಪಡೆಯಬಹುದೇ?
ಡಾ. ಪಾಲ್: ಯಾರಿಗಾದರೂ ಗಂಭೀರವಾದ ಅಲರ್ಜಿ ಸಮಸ್ಯೆ ಇದ್ದರೆ, ಅಂಥವರು ವೈದ್ಯಕೀಯ ಸಲಹೆಯ ನಂತರವೇ ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳಬೇಕು. ಆದರೆ, ಇದು ಸಾಮಾನ್ಯ ಶೀತ, ಚರ್ಮದ ಅಲರ್ಜಿ ಮುಂತಾದ ಸಣ್ಣ ಅಲರ್ಜಿಗಳ ಪ್ರಶ್ನೆಯಾಗಿದ್ದರೆ, ಲಸಿಕೆಯನ್ನು ತೆಗೆದುಕೊಳ್ಳಲು ಹಿಂಜರಿಯಬಾರದು.

ಡಾ. ಗುಲೇರಿಯಾ: ಅಲರ್ಜಿಗಾಗಿ ಮೊದಲಿನಿಂದಲೂ ಔಷಧ ತೆಗೆದುಕೊಳ್ಳುತ್ತಿರುವವರು ಅವುಗಳನ್ನು ನಿಲ್ಲಿಸಬಾರದು, ಅವರು ತಮ್ಮನ್ನು ಲಸಿಕೆ ಪಡೆಯುವಾಗ ನಿಯಮಿತವಾಗಿ ಔಷಧ ಸೇವನೆ ಮುಂದುವರಿಸಬೇಕು. ಲಸಿಕೆಯಿಂದಾಗಿ ಉದ್ಭವಿಸುವ ಅಲರ್ಜಿಗಳ ನಿರ್ವಹಣೆಗಾಗಿ ಎಲ್ಲಾ ಲಸಿಕೆ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಆದ್ದರಿಂದ, ನೀವು ತೀವ್ರ ಅಲರ್ಜಿಯನ್ನು ಹೊಂದಿದ್ದರೂ, ಔಷಧ ತೆಗೆದುಕೊಳ್ಳುವುದನ್ನು ಮುಂದುವರಿಸಿ ಮತ್ತು ಹೋಗಿ ಲಸಿಕೆ ಹಾಕಿಸಿಕೊಳ್ಳಿ ಎಂಬುದು ನಮ್ಮ ಸಲಹೆ.

Nelamangala Corona Vaccine Center 4

ಗರ್ಭಿಣಿಯರು ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳಬಹುದೇ?
ಡಾ. ಪಾಲ್: ನಮ್ಮ ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ಗರ್ಭಿಣಿಯರಿಗೆ ಲಸಿಕೆನೀಡಬಾರದು. ಏಕೆಂದರೆ, ಲಸಿಕೆ ಪ್ರಯೋಗಗಳಿಂದ ಪ್ರಸ್ತುತ ಲಭ್ಯವಿರುವ ದತ್ತಾಂಶದ ಆಧಾರದ ಮೇಲೆ ಗರ್ಭಿಣಿ ಮಹಿಳೆಯರಿಗೆ ಲಸಿಕೆಯನ್ನು ಶಿಫಾರಸು ಮಾಡಬಹುದೇ ಎಂಬ ಬಗ್ಗೆ ವೈದ್ಯರು ಮತ್ತು ವೈಜ್ಞಾನಿಕ ಸಮುದಾಯವು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಹೊಸ ವೈಜ್ಞಾನಿಕ ಮಾಹಿತಿಗಳ ಆಧಾರದ ಮೇಲೆ ಕೆಲವೇ ದಿನಗಳಲ್ಲಿ ಭಾರತ ಸರಕಾರವು ಈ ಬಗ್ಗೆ ಸ್ಪಷ್ಟತೆ ಒದಗಿಸಲಿದೆ.

ಅನೇಕ ಕೋವಿಡ್-19 ಲಸಿಕೆಗಳು ಗರ್ಭಿಣಿಯರಿಗೆ ಸುರಕ್ಷಿತವೆಂದು ಕಂಡುಬಂದಿವೆ. ನಮ್ಮ ಎರಡು ಲಸಿಕೆಗಳಿಗೂ ಈ ಮಾರ್ಗವನ್ನು ಮುಕ್ತಗೊಳಿಸಬೇಕು ಎಂಬುದು ನಮ್ಮ ಭಾವನೆ. ನಾವು ಸಾರ್ವಜನಿಕರನ್ನು ಸ್ವಲ್ಪ ಹೆಚ್ಚು ತಾಳ್ಮೆಯಿಂದಿರಿ ಎಂದು ವಿನಂತಿಸುತ್ತೇವೆ, ಏಕೆಂದರೆ, ಈಗಿನ ಲಸಿಕೆಗಳನ್ನು ಬಹಳ ಕಡಿಮೆ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಸುರಕ್ಷತಾ ಕಾಳಜಿಗಳಿಂದಾಗಿ ಗರ್ಭಿಣಿಯರನ್ನು ಮಹಿಳೆಯರನ್ನು ಆರಂಭಿಕ ಪ್ರಯೋಗಗಳಲ್ಲಿ ಬಳಸಿಕೊಂಡಿಲ್ಲ.

corona vaccine 1 medium

ಡಾ. ಗುಲೇರಿಯಾ: ಅನೇಕ ದೇಶಗಳು ಗರ್ಭಿಣಿಯರಿಗೆ ಲಸಿಕೆಯನ್ನು ಪ್ರಾರಂಭಿಸಿವೆ. ಅಮೆರಿಕದ ಎಫ್‍ಡಿಎ’ ಫೈಝರ್ ಮತ್ತು ಮಾಡರ್ನಾ ಲಸಿಕೆಗಳಿಗೆ ಅನುಮೋದನೆ ನೀಡಿದೆ. ಕೋವಾಕ್ಸಿನ್ ಮತ್ತು ಕೋವಿಶೀಲ್ಡ್‍ಗೆ ಸಂಬಂಧಿಸಿದ ದತ್ತಾಂಶವೂ ಶೀಘ್ರದಲ್ಲೇ ಹೊರಬೀಳಲಿದೆ. ಈಗಾಗಲೇ ಕೆಲವೊಂದು ದತ್ತಾಂಶಗಳು ಲಭ್ಯವಿದ್ದು, ಕೆಲವೇ ದಿನಗಳಲ್ಲಿ ಭಾರತದಲ್ಲಿಯೂ ಗರ್ಭಿಣಿಯರಿಗೆ ಲಸಿಕೆ ಹಾಕಲು ಅಗತ್ಯವಿರುವ ಸಂಪೂರ್ಣ ದತ್ತಾಂಶವನ್ನು ಪಡೆಯಲು ಮತ್ತು ಅನುಮೋದಿಸಲು ಸಾಧ್ಯವಾಗಲಿದೆ ಎಂದು ನಾವು ಆಶಿಸುತ್ತೇವೆ.

ಹಾಲುಣಿಸುವ ತಾಯಂದಿರು ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳಬಹುದೇ?
ಡಾ. ಪಾಲ್: ಈ ಬಗ್ಗೆ ಒಂದು ಸ್ಪಷ್ಟ ಮಾರ್ಗಸೂಚಿ ಇದೆ, ಹಾಲುಣಿಸುವ ತಾಯಂದಿರಿಗೆ ಲಸಿಕೆಯು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಯಾವುದೇ ಭಯದ ಅಗತ್ಯವಿಲ್ಲ. ಲಸಿಕೆಯ ಮೊದಲು ಅಥವಾ ನಂತರ ಸ್ತನ್ಯಪಾನವನ್ನು ನಿಲ್ಲಿಸುವ ಅಥವಾ ವಿರಮಿಸುವ ಅಗತ್ಯವಿಲ್ಲ.

corona vaccine students 1

ಲಸಿಕೆ ಪಡೆದ ನಂತರ ನನ್ನ ದೇಹದಲ್ಲಿ ಸಾಕಷ್ಟು ಪ್ರತಿಕಾಯಗಗಳು ಉತ್ಪತ್ತಿಯಾಗುತ್ತವೆಯೇ?
ಡಾ. ಗುಲೇರಿಯಾ: ಲಸಿಕೆಗಳ ಪರಿಣಾಮಕಾರಿತ್ವವನ್ನು ನಾವು ಕೇವಲ ಪ್ರತಿಕಾಯಗಳು ಉತ್ಪತ್ತಿಯಾಗುವ ಪ್ರಮಾಣದಿಂದ ಮಾತ್ರ ನಿರ್ಣಯಿಸಬಾರದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಲಸಿಕೆಗಳು ಅನೇಕ ರೀತಿಯ ರಕ್ಷಣೆಯನ್ನು ನೀಡುತ್ತವೆ – ಉದಾಹರಣೆಗೆ ಪ್ರತಿಕಾಯಗಳ ಮೂಲಕ, ಜೀವಕೋಶ-ಮಧ್ಯಸ್ಥಿಕೆಯ ರೋಗನಿರೋಧಕತೆ ಮೂಲಕ ಮತ್ತು ಸ್ಮರಣೆ ಜೀವಕೋಶಗಳ ಮೂಲಕ (ಇದರಿಂದ ನಾವು ಸೋಂಕಿಗೆ ಒಳಗಾದಾಗ ಹೆಚ್ಚು ಪ್ರತಿಕಾಯಗಳು ಉತ್ಪಾದನೆಯಾಗುತ್ತವೆ) ಹೀಗೆ. ಅಲ್ಲದೆ, ಇಲ್ಲಿಯವರೆಗೆ ಬಂದಿರುವ ಎಲ್ಲಾ ಪರಿಣಾಮಕಾರಿತ್ವದ ಫಲಿತಾಂಶಗಳು ಪ್ರಾಯೋಗಿಕ ಅಧ್ಯಯನಗಳನ್ನು ಆಧರಿಸಿವೆ, ಅಲ್ಲಿ ಪ್ರತಿ ಪ್ರಯೋಗದ ಅಧ್ಯಯನ ವಿನ್ಯಾಸವು ಸ್ವಲ್ಪ ಭಿನ್ನವಾಗಿದೆ.

Vaccine 6 medium

ಇಲ್ಲಿಯವರೆಗೆ ಲಭ್ಯವಿರುವ ದತ್ತಾಂಶವು ಎಲ್ಲಾ ಲಸಿಕೆಗಳ – ಕೋವಾಕ್ಸಿನ್, ಕೋವಿಶೀಲ್ಡ್ ಅಥವಾ ಸ್ಪುಟ್ನಿಕ್ ವಿ – ಪರಿಣಾಮಕಾರಿತ್ವವು ಹೆಚ್ಚು ಕಡಿಮೆ ಸಮಾನವಾಗಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಆದ್ದರಿಂದ ಈ ಲಸಿಕೆಯನ್ನು ತೆಗೆದುಕೊಳ್ಳಿ ಅಥವಾ ಆ ಲಸಿಕೆಯನ್ನು ತೆಗೆದುಕೊಳ್ಳಿ ಎಂದು ನಾವು ಹೇಳಿದರೆ ತಪ್ಪಾಗುತ್ತದೆ, ನಿಮ್ಮ ಪ್ರದೇಶದಲ್ಲಿ ಯಾವ ಲಸಿಕೆ ಲಭ್ಯವಿದ್ದರೂ ದಯವಿಟ್ಟು ಅದನ್ನು ತೆಗೆದುಕೊಳ್ಳಿ. ಇದರಿಂದ ನೀವು ಮತ್ತು ನಿಮ್ಮ ಕುಟುಂಬ ಸುರಕ್ಷಿತವಾಗಿರುತ್ತೀರಿ.

ಡಾ. ಪಾಲ್: ಲಸಿಕೆಯ ನಂತರ ಪ್ರತಿಕಾಯ ಪರೀಕ್ಷೆಯನ್ನು ಮಾಡಿಸಲು ಕೆಲವರು ಯೋಚಿಸುತ್ತಿದ್ದಾರೆ. ಆದರೆ ಕೇವಲ ಪ್ರತಿಕಾಯಗಳು ಮಾತ್ರ ವ್ಯಕ್ತಿಯ ರೋಗನಿರೋಧಕತೆಯನ್ನು ಸೂಚಿಸುವುದಿಲ್ಲ. ಈ ಕಾರಣಕ್ಕಾಗಿ ಇಂತಹ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ. ಅಲ್ಲದೆ, ಟಿ-ಕೋಶಗಳು ಅಥವಾ ಸ್ಮರಣೆ ಕೋಶಗಳೂ ಸಹ ದೇಹದ ಪ್ರತಿರೋಧಕ ಶಕ್ತಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಾವು ಲಸಿಕೆಯನ್ನು ಪಡೆದಾಗ ಇವು ಕೆಲವು ಬದಲಾವಣೆಗಳಿಗೆ ಒಳಗಾಗುತ್ತವೆ, ಅವು ಬಲಗೊಳ್ಳುತ್ತವೆ ಮತ್ತು ಪ್ರತಿರೋಧ ಶಕ್ತಿಯನ್ನು ಪಡೆಯುತ್ತವೆ. ಆದರೆ, ಪ್ರತಿಕಾಯ ಪರೀಕ್ಷೆ ವೇಳೆ ಟಿ-ಜೀವಕೋಶಗಳು ಪತ್ತೆವಾಗುವುದಿಲ್ಲ. ಏಕೆಂದರೆ ಇವು ಇರುವುದು ಮೂಳೆ ಮಜ್ಜೆಯಲ್ಲಿ. ಆದ್ದರಿಂದ, ಲಸಿಕೆ ಪಡೆಯುವ ಮೊದಲು ಅಥವಾ ನಂತರ ಪ್ರತಿಕಾಯ ಪರೀಕ್ಷೆಗಳನ್ನು ಮಾಡಿಸುವ ಪ್ರವೃತ್ತಿ ಬೇಡ. ಲಭ್ಯವಿರುವ ಲಸಿಕೆಯನ್ನು ತೆಗೆದುಕೊಳ್ಳಿ, ಸರಿಯಾದ ಸಮಯದಲ್ಲಿ ಎರಡೂ ಡೋಸ್‍ಗಳನ್ನು ತೆಗೆದುಕೊಳ್ಳಿ ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಿ ಎಂಬುದು ನಮ್ಮ ಮನವಿ. ಅಷ್ಟೇ ಅಲ್ಲ, ಕೋವಿಡ್-19 ಸೋಂಕಿಗೆ ಒಳಗಾಗದವರಿಗೆ ಲಸಿಕೆಯ ಅಗತ್ಯವಿಲ್ಲ ಎಂಬ ತಪ್ಪು ಕಲ್ಪನೆಯಿಂದಲೂ ಜನರು ಹೊರಬರಬೇಕು.

VACCINE 4

ಲಸಿಕೆಯ ಡೋಸ್‍ಗಳನ್ನು ತೆಗೆದುಕೊಂಡ ನಂತರ ರಕ್ತ ಹೆಪ್ಪುಗಟ್ಟುವುದು ಸಾಮಾನ್ಯವೇ?
ಡಾ. ಪಾಲ್: ವಿಶೇಷವಾಗಿ ಆಸ್ಟ್ರಾಜೆನೆಕಾ’ ಲಸಿಕೆಗೆ ಸಂಬಂಧಿಸಿದಂತೆ ಇಂತಹ ಸಮಸ್ಯೆಯ ಕೆಲವು ಪ್ರಕರಣಗಳು ಗಮನ ಸೆಳೆದಿವೆ. ಈ ಸಮಸ್ಯೆ ಯುರೋಪಿನಲ್ಲಿ, ಅದರಲ್ಲೂ ಕೊಂಚ ಮಟ್ಟಿಗೆ ಯುವ ಜನರಲ್ಲಿ ಕಾಣಿಸಿಕೊಂಡಿದೆ. ಅಲ್ಲಿ ಅವರ ಜೀವನಶೈಲಿ, ದೇಹ ಮತ್ತು ಆನುವಂಶಿಕ ರಚನೆ ಇದಕ್ಕೆ ಕಾರಣ. ಆದರೆ, ನಾವು ಭಾರತದಲ್ಲಿ ಈ ದತ್ತಾಂಶವನ್ನು ವ್ಯವಸ್ಥಿತವಾಗಿ ಪರಿಶೀಲಿಸಿದ್ದೇವೆ. ಅಂತಹ ರಕ್ತ ಹೆಪ್ಪುಗಟ್ಟುವ ಘಟನೆಗಳು ಇಲ್ಲಿ ಬಹುತೇಕ ನಗಣ್ಯವಾಗಿವೆ. ಅದರ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲವೆಂಬ ಭರವಸೆಯನ್ನು ನಾನು ನಿಮಗೆ ನೀಡಲು ಬಯಸುತ್ತೇನೆ. ಯುರೋಪಿಯನ್ ದೇಶಗಳಲ್ಲಿ, ಈ ಸಮಸ್ಯೆ ನಮ್ಮ ದೇಶಕ್ಕಿಂತಲೂ ಸುಮಾರು 30 ಪಟ್ಟು ಹೆಚ್ಚಾಗಿರುವುದು ಕಂಡುಬಂದಿದೆ.

mdk vaccine web

ಡಾ. ಗುಲೇರಿಯಾ: ಅಮೆರಿಕ ಮತ್ತು ಯುರೋಪಿಯನ್ ಜನರಿಗೆ ಹೋಲಿಸಿದರೆ ಶಸ್ತ್ರಚಿಕಿತ್ಸೆಯ ನಂತರವೂ ಭಾರತೀಯರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಡಿಮೆ ಎಂದು ಈ ಮೊದಲೇ ಕಂಡು ಬಂದಿದೆ. ವ್ಯಾಕ್ಸಿನ್ ಪ್ರೇರಿತ ಥ್ರಾಂಬೋಸಿಸ್’ ಅಥವಾ ಥ್ರಾಂಬೋಸೈಟೊಪೆನಿಯಾ ಎಂದು ಹೆಸರಿಸಲಾದ ಈ ಅಡ್ಡ ಪರಿಣಾಮವು ಭಾರತದಲ್ಲಿ ಬಹಳ ವಿರಳವಾಗಿದ್ದು, ಭಾರತದಲ್ಲಿ ಇದರ ಪ್ರಮಾಣ ಯುರೋಪ್‍ಗಿಂತ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿದೆ. ಆದ್ದರಿಂದ, ಈ ಬಗ್ಗೆ ಭಯಪಡುವ ಅಗತ್ಯವಿಲ್ಲ. ಇದಕ್ಕಾಗಿ ಚಿಕಿತ್ಸೆಗಳು ಸಹ ಲಭ್ಯವಿದ್ದು, ಬೇಗನೆ ಸಮಸ್ಯೆ ಪತ್ತೆ ಮಾಡಿದರೆ ಇದರ ಮೊರೆ ಹೋಗಲು ಅವಕಾಶವಿದೆ.

ನಾನು ಕೋವಿಡ್ ಸೋಂಕಿಗೆ ತುತ್ತಾಗಿದ್ದರೆ, ಎಷ್ಟು ದಿನಗಳ ನಂತರ ನಾನು ಲಸಿಕೆ ಪಡೆಯಬಹುದು?
ಡಾ. ಗುಲೇರಿಯಾ: ಕೋವಿಡ್-19 ಸೋಂಕಿಗೆ ಒಳಗಾದ ವ್ಯಕ್ತಿಯು ಚೇತರಿಸಿಕೊಂಡ ದಿನದಿಂದ ಮೂರು ತಿಂಗಳ ಬಳಿಕ ಲಸಿಕೆಯನ್ನು ತೆಗೆದುಕೊಳ್ಳಬಹುದು ಎಂದು ಇತ್ತೀಚಿನ ಮಾರ್ಗಸೂಚಿಗಳು ಸ್ಪಷ್ಟವಾಗಿ ಹೇಳುತ್ತವೆ. ಹೀಗೆ ಮಾಡುವುದರಿಂದ ದೇಹವು ಬಲವಾದ ರೋಗನಿರೋಧಕಶಕ್ತಿಯನ್ನು ಅಭಿವೃದ್ಧಿಪಡಿಸಲು ಸಹಾಯಕವಾಗುತ್ತದೆ ಮತ್ತು ಲಸಿಕೆಯ ಪರಿಣಾಮವು ಉತ್ತಮವಾಗಿರುತ್ತದೆ.

Vaccine

 

ನಮ್ಮ ಲಸಿಕೆಗಳು ಇದುವರೆಗೂ ಭಾರತದಲ್ಲಿ ಕಂಡುಬರುವ ರೂಪಾಂತರಿ ವೈರಾಣುವಿನ ವಿರುದ್ಧ ಪರಿಣಾಮಕಾರಿಯಾಗಿವೆ ಎಂದು ತಜ್ಞರಾದ ಡಾ. ಪಾಲ್ ಮತ್ತು ಡಾ. ಗುಲೇರಿಯಾ ಇಬ್ಬರೂ ಪ್ರತಿಪಾದಿಸಿದ್ದಾರೆ. ಲಸಿಕೆಗಳನ್ನು ತೆಗೆದುಕೊಂಡ ನಂತರ ನಮ್ಮ ರೋಗನಿರೋಧಕ ವ್ಯವಸ್ಥೆ ದುರ್ಬಲವಾಗುತ್ತದೆ ಅಥವಾ ಲಸಿಕೆಗಳನ್ನು ತೆಗೆದುಕೊಂಡ ನಂತರ ಜನರು ಸಾಯುತ್ತಾರೆ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳನ್ನು ಅವರು ಸುಳ್ಳು ಮತ್ತು ಆಧಾರರಹಿತ ಎಂದು ತಳ್ಳಿಹಾಕಿದರು. ಇದು ಗ್ರಾಮೀಣ ಪ್ರದೇಶಗಳು ಮತ್ತು ದೂರ ಪ್ರದೇಶಗಳಲ್ಲಿರುವ ಕೆಲವರು ಹೊಂದಿರುವ ತಪ್ಪು ನಂಬಿಕೆ ಎಂದು ಹೇಳಿದ್ದಾರೆ.

TAGGED:CoronaCorona VaccineCorona VirusCovid 19indiaಕೊರೊನಾಕೊರೊನಾ ವೈರಸ್ಕೋವಿಡ್ 19ಗರ್ಭಿಣಿಭಾರತ
Share This Article
Facebook Whatsapp Whatsapp Telegram

Cinema news

Sudeep
ರೂಮಿನಲ್ಲಿ ಕೆಟ್ಟ ವಾಸನೆ ಬಂದ್ರೆ ಬಿಟ್ಟಿದ್ದು ಯಾರು ಅನ್ನೋದು ಬಿಟ್ಟವನಿಗೆ ಮಾತ್ರ ಗೊತ್ತಿರುತ್ತೆ: ಸುದೀಪ್‌
Cinema Karnataka Latest Main Post National Sandalwood South cinema
Dhurandhar
600 ಕೋಟಿಯತ್ತ ಧುರಂಧರ್ ಕಲೆಕ್ಷನ್ – FA9LA ಸಾಂಗ್‌ಗೆ ಹೆಜ್ಜೆ ಹಾಕಿದ ಶಿಲ್ಪಾ ಶೆಟ್ಟಿ
Bollywood Cinema Latest Top Stories
Sudeep
`ಯುದ್ಧಕ್ಕೆ ಸಿದ್ಧ.. ನಾವು ನಮ್ಮ ಮಾತಿಗೆ ಬದ್ಧ’ – ಸುದೀಪ್ `ಯುದ್ಧ’ ಸಾರಿದ್ದು ಯಾರ ವಿರುದ್ಧ..?
Bengaluru City Cinema Dharwad Districts Karnataka Latest Main Post Sandalwood
chandrachuda
ಪೈರಸಿ ವಿರುದ್ಧ ಕಿಚ್ಚನ ನಡೆ, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳೋದು ಯಾಕೆ? – ಚಕ್ರವರ್ತಿ ಚಂದ್ರಚೂಡ್
Cinema Latest Sandalwood Top Stories

You Might Also Like

Mysuru ARREST
Crime

ಅಪಘಾತವಾಗಿ ಬಿದ್ದಿದ್ದವನ ಮೊಬೈಲ್‌ನಿಂದ 80 ಸಾವಿರ ದೋಚಿದ್ದ ಖದೀಮರು ಅರೆಸ್ಟ್‌!

Public TV
By Public TV
29 minutes ago
Chocolate Walnut Brownie
Food

ಕ್ರಿಸ್ಮಸ್ ಹಬ್ಬಕ್ಕೆ ಸ್ಪೆಷಲ್ಲಾಗಿ ಮಾಡಿ ಚಾಕೋಲೆಟ್ ವಾಲ್ನಟ್ ಬ್ರೌನಿ

Public TV
By Public TV
35 minutes ago
Basavaraj Bommai
Bidar

ಗಾಂಧಿಯನ್ನು ಕಾಂಗ್ರೆಸ್ ಒಂದಲ್ಲ ಹಲವಾರು ಬಾರಿ ಕೊಲೆ ಮಾಡಿದೆ: ಬೊಮ್ಮಾಯಿ

Public TV
By Public TV
35 minutes ago
Viral video claiming to be of Krishna Statue of a gatekeeper found in Malpe beach
Karnataka

ಕೃಷ್ಣನದ್ದು ಎಂಬ ವೈರಲ್ ವಿಡಿಯೋ – ಮಲ್ಪೆಯಲ್ಲಿ ಸಿಕ್ಕಿದ್ದು ದ್ವಾರಪಾಲಕನ ಮೂರ್ತಿ!

Public TV
By Public TV
1 hour ago
Cyber Crime
Crime

ಹಣ ಹೂಡಿ ಅಧಿಕ ಲಾಭಗಳಿಸಿ – ಆಸೆಗೆ ಬಿದ್ದು 76 ಲಕ್ಷ ಪಂಗನಾಮ ಹಾಕಿಸಿಕೊಂಡ ವ್ಯಕ್ತಿ!

Public TV
By Public TV
2 hours ago
The Elephant that came to Hirekerur town after Byadagi and Ranebennuru
Districts

ಬ್ಯಾಡಗಿ, ರಾಣೆಬೆನ್ನೂರಿನ ಬಳಿಕ ಹಿರೇಕೆರೂರು ಪಟ್ಟಣಕ್ಕೆ ಬಂದ ಕಾಡಾನೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?