– ಕೊರೊನಾ ವಾರಿಯರ್ಸ್ ನೆನೆದು ಮೋದಿ ಭಾವುಕ
– ನಮ್ಮ ಲಸಿಕೆ ಸುರಕ್ಷಿತ, ಕಡಿಮೆ ಬೆಲೆ
ನವದೆಹಲಿ: ಕೊರೊನಾ ಲಸಿಕೆ ಕಂಡು ಹಿಡಿಯಲು ನಮ್ಮ ವಿಜ್ಞಾನಿಗಳು ಸತತ ಪರಿಶ್ರಮ ಪಟ್ಟಿದ್ದಾರೆ. ವಿಜ್ಞಾನಿಗಳು ಹಬ್ಬ, ಸಂತೋಷಕೂಟದಲ್ಲಿ ಭಾಗಿಯಾಗದೇ ಲಸಿಕೆಗಾಗಿ ಶ್ರಮ ವಹಿಸಿದ್ದರು ಎಂದು ಲಸಿಕೆ ಸಂಶೋಧಕರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಸಲ್ಲಿಸಿದರು.
ಮೊದಲ ಡೋಸ್ ತೆಗೆದುಕೊಂಡವರು ಎರಡನೇ ಡೋಸ್ ಪಡೆದುಕೊಳ್ಳುವದನ್ನ ಮರೀಯಬೇಡಿ. ಎರಡನೇ ಡೋಸ್ ಪಡೆದ ನಂತರವೇ ನಿಮ್ಮ ದೇಹದಲ್ಲಿ ಕೊರೊನಾ ವಿರುದ್ಧದ ಶಕ್ತಿ ಹೆಚ್ಚಾಗಲಿದೆ. ಕೊರೊನಾ ಪಡೆದು ನಂತರ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಕೊರೊನಾ ನಿಯಮಗಳನ್ನ ಮರೆಯಬೇಡಿ. ಭಾರತ ಸರ್ಕಾರ ಮೊದಲ ಹಂತದಲ್ಲಿ ಮೂರು ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ ಈ ಸಂಖ್ಯೆ 30ಕೋಟಿ ತಲುಪುವ ಗುರಿಯನ್ನ ಭಾರತ ಹೊಂದಿದೆ. ಎರಡನೇ ಹಂತದಲ್ಲಿ ವೃದ್ಧರು, ರೋಗಿಗಳಿಗೆ ಆದ್ಯತೆ ನೀಡಲಾಗುವುದು.
Advertisement
Advertisement
ಆತ್ಮನಿರ್ಭರ ಭಾರತದಡಿಯಲ್ಲಿ ಲಸಿಕೆ: ಈ ದೊಡ್ಡ ಅಭಿಯಾನ ಇಡೀ ವಿಶ್ವದ ಗಮನ ಸೆಳೆಯುವ ಮೂಲಕ ನಮ್ಮ ಶಕ್ತಿ ಪ್ರದರ್ಶನವಾಗುತ್ತಿದೆ. ಲಸಿಕೆಗೆ ಸಂಬಂಧಿಸಿದ ಸುಳ್ಳು ಸುದ್ದಿಗಳಿಂದ ದೂರ ಉಳಿದುಕೊಳ್ಳಿ. ನಮ್ಮ ಲಸಿಕೆಯ ವಿಶ್ವಾಸದಿಂದಲೇ ಇತರೆ ದೇಶಗಳು ನಮಗೆ ಬೇಡಿಕೆ ಇಡುತ್ತಿವೆ. ಎರಡು ಲಸಿಕೆಗಳು ಸದ್ಯಕ್ಕೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಲಸಿಕೆಗಳನ್ನ ನಮ್ಮ ವಿಕ್ಞಾನಿಗಳು ಕಂಡು ಹಿಡಿಯಲಿದ್ದಾರೆ. ಆತ್ಮನಿರ್ಭರ ಭಾರತದಡಿಯಲ್ಲಿ ಸಂಶೋಧನೆ ಆಗುತ್ತಿರುವ ಲಸಿಕೆಗಳ ಕ್ಷಮತೆ ಗುಣಮಟ್ಟವಾದಗಿದ್ದು, ಕಡಿಮೆ ಬೆಲೆಯನ್ನ ಹೊಂದಿವೆ ಎಂದರು.
Advertisement
Advertisement
ಕೊರೊನಾ ವಿರುದ್ಧ ಹೋರಾಟದಲ್ಲಿ ಆತ್ಮವಿಶ್ವಾಸ ಕಡಿಮೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಕೊರೊನಾ ಬಂದಾಗ ದೇಶದಲ್ಲಿ ಒಂದೇ ಟೆಸ್ಟಿಂಗ್ ಲ್ಯಾಬ್ ಇತ್ತು. ಇಂದು 23 ಸಾವಿರಕ್ಕೂ ಅಧಿಕ ಲ್ಯಾಬ್ ಗಳಿವೆ. ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಇನ್ನಿತರ ವೈದ್ಯಕೀಯ ವಸ್ತುಗಳಿಗಾಗಿ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದ್ರೆ ಇಂದು ಆತ್ಮನಿರ್ಭರ ಭಾರತದಡಿಯಲ್ಲಿ ಸ್ವಾವಲಂಬನೆ ಹೊಂದಿದ್ದು, ನಿರ್ಯಾತ ಸಹ ಮಾಡಲಾಗುತ್ತಿದೆ. ಇದಕ್ಕೆಲ್ಲ ಭಾರತೀಯರ ಆತ್ಮನಿರ್ಭರದ ಆತ್ಮವಿಶ್ವಾಸ ಕಾರಣ.
ಭಾವುಕರಾದ ಪ್ರಧಾನಿ ಮೋದಿ: ಕೊರೊನಾ ಲಸಿಕೆ ಕಾರ್ಯಕ್ರಮ ಮಾನವೀಯ ಮತ್ತು ಮಹತ್ವದ ಸಿದ್ಧಾಂತಗಳಡಿಯಲ್ಲಿದೆ. ಈ ಕೊರೊನಾ ಎಷ್ಟೋ ಜನರನ್ನ ಏಕಾಂಗಿಯನ್ನಾಗಿ ಮಾಡಿತು. ಮಗುವನ್ನ ತಾಯಿಯಿಂದ ದೂರು ಮಾಡಿತು. ವೃದ್ಧರು ಒಂಟಿಯಾಗಿ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದರು. ಈ ವೈರಸ್ ನಿಂದ ಅಗಲಿದೆ ಜನರಿಗೆ ಸಂಪ್ರದಾಯಬದ್ಧವಾಗಿ ಕಳುಹಿಸಿಕೊಡಲು ಸಾಧ್ಯವಾಗಲಿಲ್ಲ. ಇದನ್ನೆಲ್ಲ ನೋಡಿದ ಮನಸ್ಸು ಭಾರವಾಗುತ್ತೆ ಎಂದು ಭಾವುಕರಾದರು.
ಕೊರೊನಾ ಮಹಾಮಾರಿ ವಿರುದ್ಧ ಸಂಜೀವಿನಿ ಲಸಿಕೆಗೆ ಮೋದಿ ಚಾಲನೆhttps://t.co/M8FK2ru9FY#PMModi #CoronaVirus #COVID19 #KannadaNews #Karnataka #Covishield #Covaxin #CoronaVaccine
— PublicTV (@publictvnews) January 16, 2021
ಸರಿಯಾದ ಸಮಯಲ್ಲಿ ತೆಗೆದುಕೊಂಡ ಸೂಕ್ತ ನಿರ್ಧಾರಗಳನ್ನ ತೆಗೆದುಕೊಂಡಿತು. ಜನತಾ ಕಫ್ರ್ಯೂ ಜನರನ್ನ ಲಾಕ್‍ಡೌನ್ ಗೆ ಸಿದ್ಧಗೊಳಿಸಿತು. ಕೊರೊನಾ ಆಕ್ರಮಣ ತಡೆಯಲು ದೊಡ್ಡ ಅಸ್ತ್ರವೇ ಲಾಕ್‍ಡೌನ್ ಆಗಿತ್ತು. ಈ ನಿರ್ಧಾರ ಅಷ್ಟು ಸರಳವಾಗಿರಲಿಲ್ಲ. ಆದರೂ ಭಾರತ ಸರ್ಕಾರ ಕೊರೊನಾ ತಡೆಗಾಗಿ ಲಾಕ್‍ಡೌನ್ ಸೇರಿದಂತೆ ಕಟ್ಟು ನಿಟ್ಟಿನ ಕ್ರಮಗಳನ್ನ ತೆಗೆದುಕೊಂಡಿತು. ಮೂಲಭೂತ ಸೇವೆಗಳು, ರೇಷನ್, ಔಷಧಿ, ಗ್ಯಾಸ್ ನೀಡುವ ಕೆಲಸ ಮಾಡಲಾಯ್ತು. ವಿದೇಶದಲ್ಲಿ ಸಿಲುಕಿದ ಭಾರತೀಯರನ್ನ ನಾವು ಕರೆ ತಂದಿದ್ದೇವೆ. ವಂದೇ ಭಾರತ್ ಮಿಷನ್ ಅಡಿ ಸುಮಾರು 35 ಲಕ್ಷ ಭಾರತೀಯರು ತಾಯ್ನಾಡಿಗೆ ಮರಳಿದರು. ಭಾರತ ತೆಗೆದುಕೊಂಡ ನಿರ್ಧಾರಗಳನ್ನ ಇಂದು ಇಡೀ ವಿಶ್ವ ಪಾಲನೆ ಮಾಡುತ್ತಿದೆ.
#WATCH | PM Narendra Modi gets emotional while talking about the hardships faced by healthcare and frontline workers during the pandemic. pic.twitter.com/B0YQsqtSgW
— ANI (@ANI) January 16, 2021
ಮಾನವ ಸಂಕುಲಕ್ಕೆ ಒಳ್ಳೆಯದಾಗಲಿದೆ: ಕೊರೊನಾ ತಡೆಗಾಗಿ ದೇಶ ಹೇಗೆ ಒಗ್ಗಟ್ಟಾಗಿ ನಿಂತಿತು ಅನ್ನೋದನ್ನ ಇಡೀ ವಿಶ್ವ ಆಶ್ಚರ್ಯಚಕಿತದಿಂದ ನೋಡುತ್ತಿದ್ದೇವೆ. ಕೊರೊನಾ ಮರಣ ಪ್ರಮಾಣ ದರ ಸಹ ಕಡಿಮೆಯಾಗಿದ್ದು, ಸೋಂಕಿತರು ಗುಣಮುಖರಾಗಿ ಮನೆ ಸೇರುತ್ತಿದ್ದಾರೆ. ಭಾರತ 150ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ನೆರೆವು ನೀಡಿದೆ. ಇಂದು ನಾವು ನನ್ನ ಲಸಿಕೆಯನ್ನ ಕಂಡು ಹಿಡಿದಿದ್ದೇವೆ. ನಮ್ಮ ಲಸಿಕೆ ಇಡೀ ಮಾನವ ಕುಲಕ್ಕೆ ಒಳ್ಳೆಯದಾಗಲಿದೆ ಎಂದು ಹೇಳಿದರು.
#WATCH live: PM Modi launches nation-wide COVID-19 vaccination drive via video conference. https://t.co/ZS0oJofkVl
— ANI (@ANI) January 16, 2021