ಲಸಿಕೆ ಪಡೆದಿದ್ದ ಪರೇಶ್ ರಾವಲ್‍ಗೆ ಕೊರೊನಾ ಸೋಂಕು

Public TV
1 Min Read
paresh rawal

ನವದೆಹಲಿ: ಕೊರೊನಾ ಮೊದಲ ಡೋಸ್ ಲಸಿಕೆ ಪಡೆದ ನಂತರ ಲೋಕಸಭಾ ಸದಸ್ಯ, ಬಾಲಿವುಡ್ ನಟ ಪರೇಶ್ ರಾವಲ್ ಅವರಿಗೆ ಕೋವಿಡ್ 19 ದೃಢಪಟ್ಟಿದೆ.

ದುರಾದೃಷ್ಟವಶಾತ್, ನಾನು ಕೊರೊನಾ ಪರೀಕ್ಷೆಯನ್ನು ಮಾಡಿಕಸಿಕೊಂಡಾಗ ನನಗೆ ಸೋಂಕು ಇರುವುದು ಖಚಿತವಾಗಿದೆ. ಕಳೆದ 10 ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ದಯವಿಟ್ಟು ತಮ್ಮನ್ನು ತಾವೇ ಪರೀಕ್ಷಿಸಿಕೊಳ್ಳಿ ಎಂದು ಪರೇಶ್ ರಾವಲ್ ಟ್ವೀಟ್ ಮಾಡಿದ್ದಾರೆ.

ಪರೇಶ್ ರಾವಲ್(65) ಅವರು ಮಾರ್ಚ್ 9 ರಂದು ಮೊದಲ ಲಸಿಕೆ ಪಡೆದಿದ್ದರು. ಲಸಿಕೆ ಪಡೆದಿರುaವ ವಿಚಾರವನ್ನು ಟ್ವೀಟ್‍ನಲ್ಲಿ ತಿಳಿಸಿದ್ದರು. ಲಸಿಕೆಗಾಗಿ ಎಲ್ಲಾ ವೈದ್ಯರು ಮತ್ತು ದಾದಿಯರು ಮತ್ತು ಮುಂಚೂಣಿಯ ಆರೋಗ್ಯ ಕಾರ್ಯಕರ್ತರು ಮತ್ತು ವಿಜ್ಞಾನಿಗಳಿಗೆ ಧನ್ಯವಾದಗಳು. ಧನ್ಯವಾದಗಳು, ನರೇಂದ್ರ ಮೋದಿ ಎಂದು ಬೆರೆದುಕೊಂಡು ಲಸಿಕೆ ಕೇಂದ್ರದಲ್ಲಿ ಕ್ಲಿಕ್ ಮಾಡಿದ ಫೆÇೀಟೋವನ್ನು ಹಂಚಿಕೊಂಡಿದ್ದರು.

ಕಳೆದ 24 ಗಂಟೆಗಳಲ್ಲಿ ಭಾರತವು 62,258 ಹೊಸ ಕರೋನ ವೈರಸ್ ಪ್ರಕರಣಗಳನ್ನು ದಾಖಲಾಗಿವೆ. ಇತ್ತೀಚಿನ ದಿನಗಳಲ್ಲಿ, ಮಿಲಿಂದ್ ಸೋಮನ್, ಆರ್ ಮಾಧವನ್, ಅಮೀರ್ ಖಾನ್, ರಣಬೀರ್ ಕಪೂರ್, ಕಾರ್ತಿಕ್ ಆರ್ಯನ್, ರೋಹಿತ್ ಸರಫ್, ಸಿದ್ಧಾಂತ್ ಚತುರ್ವೇದಿ, ಮನೋಜ್ ಬಾಜಪೇಯಿ, ರಣವೀರ್ ಶೋರೆ ಮುಂತಾದ ಗಣ್ಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಲ್ಮಾನ್ ಖಾನ್, ಸಂಜಯ್ ದತ್, ಧಮೇರ್ಂದ್ರ, ನಾಗಾರ್ಜುನ, ನೀನಾ ಗುಪ್ತಾ ಮುಂತಾದ ನಟರು ಈಗಾಗಲೇ ಲಸಿಕೆಯ ಮೊದಲ ಪ್ರಮಾಣವನ್ನು ಸ್ವೀಕರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *