ಬೆಂಗಳೂರು: ಕೊರೊನಾ ಲಸಿಕೆ ಫಲಾನುವಿಗಳಿಗೆ ನೀಡಿದ್ದ ಟಾರ್ಗೆಟ್ ರೀಚ್ ಆಗಿದ್ಯಾ ಎಂಬ ಲೆಕ್ಕವಿಡುವುದೇ ಬಿಬಿಎಂಪಿಗೆ ದೊಡ್ಡ ತಲೆಬಿಸಿಯಾಗಿದೆ. ಅಂತೂ ಇಂತೂ ಬೆಂಗಳೂರಿನಲ್ಲಿ 20 ಸಾವಿರ ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ.
ಇಂದು ಕೊರೋನಾ ಲಸಿಕೆ ಅಭಿಯಾನಕ್ಕೆ ಆರನೇ ದಿನವಾಗಿದೆ. ನಗರ ವ್ಯಾಪ್ತಿಯಲ್ಲಿ 5 ದಿನಕ್ಕೆ 20,336 ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ. 5 ದಿನಗಳಲ್ಲಿ 44,498 ಮಂದಿಗೆ ಲಸಿಕೆ ನೀಡಬೇಕೆಂಬ ಟಾರ್ಗೆಟ್ ಇತ್ತು.
ಈ ಲಸಿಕೆ ಪಡೆದವರು, ಪಡೆಯದವರ ನಡುವಿನ ಲೆಕ್ಕಚಾರವೇ ದೊಡ್ಡ ತಲೆ ಬಿಸಿಯಾಗಿದೆ. ನಗರದಲ್ಲಿ ಅಧಿಕಾರಿಗಳ ಸಿದ್ಧತೆ ಲೋಪ, ಫಲಾನುಭವಿಗಳು ಕಾದು ನೋಡುವ ತಂತ್ರ, ಕೋವಿನ್ ವೆಬ್ ಪೋರ್ಟಲ್‌ನಲ್ಲಿರುವ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಟಾರ್ಗೆಟ್ ರೀಚ್ ಆಗಲು ಪಾಲಿಕೆ ನಿತ್ಯ ಹರಸಾಹಸ ಪಡುತ್ತಿದೆ.
ಸದ್ಯ ಹೆಲ್ತ್ ವರ್ಕರ್ಸ್ ಮಾತ್ರ ಲಸಿಕೆ ಪಡೆಯುತ್ತಿದ್ದು, 1 ಲಕ್ಷ 85 ಸಾವಿರ ಮಂದಿ ಲಸಿಕೆ ಪಡೆಯಬೇಕಿದೆ. ಮುಂದಿನ ಮೂರು ದಿನಗಳಲ್ಲಿ ಎರಡನೇ ಹಂತದ ಫಲಾನುಭವಿಗಳ ಪಟ್ಟಿ ಕೇಂದ್ರಕ್ಕೆ ನೀಡಲು ಡೆಡ್ ಲೈನ್ ಹಾಕಲಾಗಿದೆ.
ಫ್ರಂಟ್‌ಲೈನ್ ವರ್ಕರ್ಸ್ ಲಿಸ್ಟ್ ಕೊಡಲು ಮೂರು ದಿನವಷ್ಟೇ ಬಾಕಿ ಉಳಿದಿದೆ. ಮೊದಲ ಹಂತದ ಲಸಿಕೆ ಟಾರ್ಗೆಟ್ ಶೇ.30 ರಷ್ಟು ಮಾತ್ರ ರೀಚ್ ಆಗಿದೆ. ಉಳಿದ ಶೇ.70 ರಷ್ಟು ರೀಚ್ ಮಾಡಲು ಪಾಲಿಕೆ ಹರಸಾಹಸ ಪಡಬೇಕಿದೆ.