ಲಸಿಕೆ ಕೊರತೆ ಮುಚ್ಚಿ ಹಾಕಲು ಸರ್ಕಾರ ಸುಳ್ಳು ಹೇಳುತ್ತಿದೆ: ರಾಹುಲ್ ಗಾಂಧಿ

Public TV
1 Min Read
RAHUL GANDHI

ನವದೆಹಲಿ: ಕೊವಿಶೀಲ್ಡ್ ಲಸಿಕೆ 2ನೇ ಡೋಸ್ ನಡುವಿನ ಅಂತರ ವಿಚಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರವನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ.

vaccine pakistan

ಲಸಿಕೆ ಕೊರತೆ ಮತ್ತು ನಿಷ್ಕ್ರಿಯತೆ ಮುಚ್ಚಿ ಹಾಕಲು ಮೋದಿ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಭಾರತಕ್ಕೆ ಶೀಘ್ರವಾಗಿ, ಸಂಪೂರ್ಣ ಲಸಿಕೆ ನೀಡಬೇಕು. ಹಲವರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್ ನಡುವಿನ ಅಂತರವನ್ನು 16 ವಾರಕ್ಕೆ ಹೆಚ್ಚಿಸಲು ಒಪ್ಪಿರಲಿಲ್ಲ ಎಂದು ರಾಷ್ಟ್ರೀಯ ಲಸಿಕಾ ತಾಂತ್ರಿಕ ತಜ್ಞರ ತಂಡದ ಮೂವರು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಎರಡನೇ ಡೋಸ್ ಲಸಿಕೆಯನ್ನ 12 ವಾರಕ್ಕೆ ಹೆಚ್ಚಿಸಲು ಮಾತ್ರ ಒಪ್ಪಿದ್ದೆವು ಎಂದು ತಿಳಿಸಿದ್ದಾರೆ. ಅವರ ಅಭಿಪ್ರಾಯಕ್ಕೆ ವಿರುದ್ಧವಾಗಿ 4-8 ವಾರದ ಅಂತರವನ್ನು 12-16 ವಾರಕ್ಕೆ ಹೆಚ್ಚಳವಾಗಿದೆ. ಈ ನಡುವೆ ಕೇಂದ್ರ ಸರ್ಕಾರ ತಜ್ಞರ ತಂಡದಲ್ಲಿ ಭಿನ್ನಾಭಿಪ್ರಾಯ ಇರಲಿಲ್ಲ ಎಂದು ತಿಳಿಸಿದೆ. ಕೇಂದ್ರ ಸರ್ಕಾರದ ಹೇಳಿಕೆ ಬಗ್ಗೆ ರಾಹುಲ್ ಗಾಂಧಿ ಇದೀಗ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

FotoJet 9 2

Share This Article
Leave a Comment

Leave a Reply

Your email address will not be published. Required fields are marked *