ಲಸಿಕೆ ಕುರಿತು ಟೀಕಿಸುವ ಕಾಂಗ್ರೆಸ್ ನಿಮ್ಮ ಸೂಚನೆಯನ್ನು ಪಾಲಿಸಲಿ – ಮನಮೋಹನ್ ಸಿಂಗ್‍ಗೆ ಹರ್ಷವರ್ಧನ್ ಪತ್ರ

Public TV
1 Min Read
harshawardan singh

ನವದೆಹಲಿ: ಲಸಿಕೆ ಕುರಿತು ಟೀಕಿಸುವ ಕಾಂಗ್ರೆಸ್ ನಿಮ್ಮ ಸೂಚನೆಯನ್ನು ಪಾಲಿಸಲಿ ಎಂದು ಮನಮೋಹನ್ ಸಿಂಗ್‍ಗೆ ಹರ್ಷವರ್ಧನ್ ಪತ್ರ ಬರೆದಿದ್ದಾರೆ.

HARSHAWARDAN 2

ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸರ್ಕಾರದ ಕೊರೊನಾ ನಿರ್ವಹಣೆಯ ಕುರಿತು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಮರು ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ್ ಅವರು, ನೀವು ಮೊದಲು ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಿಗೆ ಮೊದಲು ಲಸಿಕೆ ಪಡೆಯುವಂತೆ ಸಲಹೆ ನೀಡಿ, ಲಸಿಕೆ ಕುರಿತು ಟೀಕಿಸುವುದನ್ನು ಕಾಂಗ್ರೆಸ್ ಇನ್ನು ಕೂಡ ಬಿಟ್ಟಿಲ್ಲ. ಅವರಿಗೆ ಸರಿಯಾಗಿ ಸಲಹೆ ನೀಡಿ ಎಂದು ಹೇಳಿದ್ದಾರೆ.

manmohan singh

ಮನಮೋಹನ್ ಸಿಂಗ್ ಅವರಿಗೆ ಪತ್ರಬರೆದು ಅದನ್ನು ಟ್ವಿಟ್ಟರ್‍ ನಲ್ಲಿ ಪೋಸ್ಟ್ ಮಾಡಿರುವ ಹರ್ಷವರ್ಧನ್ ಅವರು, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು, ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿಸುವ ಬದಲು ಲಸಿಕೆ ಬಗ್ಗೆ ಅನುಮಾನ ಪಡುವುದರಲ್ಲಿ ಕಾಲ ಕಳೆಯುತ್ತಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಲಸಿಕೆ ಮಹತ್ವವನ್ನು ಮನಮೋಹನ್ ಸಿಂಗ್ ಅವರು ಅರ್ಥಮಾಡಿಕೊಂಡಿರುವುದು ಸ್ವಾಗತಾರ್ಹ. ಆದರೆ ಇವರು ಇತರ ಕಾಂಗ್ರೆಸ್ ನಾಯಕರಿಗು ಅರ್ಥ ಮಾಡಿಸ ಬೇಕಾಗಿದೆ. ಕೆಲ ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಲ್ಲಿ ಹಿರಿಯ ನಾಗರಿಕರು, ಮುಂಚೂಣಿ ಕಾರ್ಯಕರ್ತರಿಗೂ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಕೊಡಲಿಲ್ಲ ಎಂದು ಟೀಕಿಸಿದ್ದಾರೆ.

ನೀವು ಕೊಟ್ಟಿರುವ ಅಮೂಲ್ಯವಾದ ಸಲಹೆಗಳನ್ನು ನಿಮ್ಮದೇ ಪಕ್ಷದವರಾದ ಕಾಂಗ್ರೆಸ್ ಮುಖಂಡರು ಪಾಲಿಸಿದರೆ ಅದು ಒಂದು ಇತಿಹಾಸದ ಭಾಗವಾಗಲಿದೆ. ನೀವು ಮೋದಿ ಅವರಿಗೆ ಪತ್ರ ಬರೆದು ವಾಕ್ಸಿನೇಷನ್ ಹೆಚ್ಚಳ ಸೇರಿದಂತೆ ಕೋವಿಡ್-19 ಬಿಕ್ಕಟ್ಟು ಹೋರಾಟದದ ಕುರಿತು ಹಲವು ಸಲಹೆ ನೀಡಿದ್ದೀರಿ. ಇದು ಒಳ್ಳೆಯದು. ಆದರೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಮೊದಲು ನೀವು ನೀಡಿರುವ ಸಲಹೆಯನ್ನು ಪಾಲನೆ ಮಾಡುವಂತೆ ಮಾಡಿ. ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *