ಬೆಂಗಳೂರು: ಕೊರೊನಾ ಲಸಿಕೆ ಉತ್ಸವಕ್ಕೆ ಕರೆ ಕೊಟ್ಟ ವೇಳೆಯೇ ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಉಂಟಾಗಿದೆ. ಬೆಂಗಳೂರಿನನ ಹಲವು ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಕೊರತೆಯಾಗಿದ್ದು, ನಾಳೆ ಬನ್ನಿ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಲ್ಪ ಪ್ರಮಾಣದ ಲಸಿಕೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಆದ್ರೆ ದೇಶದಲ್ಲಿ ಲಸಿಕೆಯ ಕೊರತೆ ಇಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಹೇಳುತ್ತಿವೆ.
Advertisement
ವಿಜಯಪುರ ಜಿಲ್ಲೆ ಸದ್ಯ 980 ಡೋಸ್ ಲಸಿಕೆ ಲಭ್ಯವಿದ್ದು, ಇವತ್ತಿಗೂ ಕೂಡ ಸಾಕಾಗಲ್ಲ. ಜಿಲ್ಲೆಯ ಬಹುತೇಕ ಕಡೆ ನೋ ಸ್ಟಾಕ್ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಇತ್ತ ಕಲಬುರಗಿಯಲ್ಲಿ 2,699 ಡೋಸ್ ಇದ್ದು, ಇಂದು ಖಾಲಿಯಾಗಲಿದೆ. ಕಲಬುರಗಿಯ ಕೆಲ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಿಲ್ಲ. ಯಾದಗಿರಿಯಲ್ಲಿ 5 ಸಾವಿರ ಮತ್ತು ಹಾಸನದಲ್ಲಿ 8 ಸಾವಿರ ಲಸಿಕೆ ಇದೆ. ಆದ್ರೆ ಮತ್ತೆ ಲಸಿಕೆ ಯಾವಾಗ ಸಿಗುತ್ತೆ ಅನ್ನೋದರ ಬಗ್ಗೆ ಯಾರಿಗೂ ತಿಳಿದಿಲ್ಲ.
Advertisement
Advertisement
ವ್ಯಾಕ್ಸಿನ್ ಜೊತೆಯಲ್ಲಿ ರೆಮ್‍ಡೆಸಿವರ್ ಗೂ ಕೊರತೆ ಸಹ ಉಂಟಾಗಿದೆ. 49 ಖಾಸಗಿ ಆಸ್ಪತ್ರೆಗಳಲ್ಲಿ 1,223 ಸೋಂಕಿತರಿಗೆ ರೆಮ್‍ಡೆಸಿವರ್ ಅಗತ್ಯತೆ ಇದೆ. 4,932 ರೆಮ್‍ಡೆಸಿವರ್ ಡೋಸ್ ಅಗತ್ಯವಿರುವ ಕಡೆ ಇರೋದು 535 ಡೋಸ್ ಇದೆ.
Advertisement
ಕೋವಿಡ್ ಟ್ರೀಟ್ಮೆಂಟ್‍ನಲ್ಲಿ ರೆಮ್‍ಡೆಸಿವರ್ ಔಷಧ ತುಂಬಾ ಮುಖ್ಯ. ಮೊದಲ 3 ದಿನದಲ್ಲೇ ಈ ಔಷಧ ನೀಡಿದ್ರೆ ಸೋಂಕಿನಿಂದ ಬಚಾವ್ ಆಗಬಹುದು. ಶ್ವಾಸಕೋಶಕ್ಕೆ ಹಾನಿ ತಡೆಯಲು ರೆಮ್‍ಡೆಸಿವರ್ ಪ್ರಮುಖ ಔಷಧವಾಗಿದೆ. ಕೂಡಲೇ ರೆಮ್‍ಡೆಸಿವರ್ ಕೊರತೆ ನೀಗಿಸಬೇಕು. ಇಲ್ಲದಿದ್ರೆ ಭವಿಷ್ಯ ಭೀಕರ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.