ಮುಂಬೈ: ಬಾಲಿವುಡ್ ನಟ ಬಿಗ್-ಬಿ ಅಮಿತಾಬ್ ಬಚ್ಚನ್ ಕೋವಿಡ್-19 ಲಸಿಕೆಯ ಮೊದಲ ಡೋಸ್ ಸ್ವೀಕರಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ. ಅಭಿಷೇಕ್ ಬಚ್ಚನ್ ಹೊರತು ಪಡಿಸಿ ಇಡೀ ಕುಟುಂಬಸ್ಥರು ಲಸಿಕೆ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಫೋಟೋದಲ್ಲಿ ಆರೋಗ್ಯ ಸಿಬ್ಬಂದಿ ಅಮಿತಾಬ್ ಬಚ್ಚನ್‍ಗೆ ವ್ಯಾಕ್ಸಿನ್ ನೀಡುತ್ತಿದ್ದು, ಬಿಗ್-ಬಿ ಎಂದಿನಂತೆ ಬಿಳಿ ಪೈಜಾಮ ತೊಟ್ಟು ಕುಳಿತುಕೊಂಡಿರುವುದನ್ನು ಕಾಣಬಹುದಾಗಿದೆ.
ಈ ಕುರಿತಂತೆ ಅಮಿತಾಬ್ ಬಚ್ಚನ್, ಮುಗಿಯಿತು. ವ್ಯಾಕ್ಸಿನೇಷನ್ ತೆಗೆದುಕೊಂಡಾಯಿತು. ಎಲ್ಲರೂ ಚೆನ್ನಾಗಿದ್ದೇವೆ. ನಿನ್ನೆ ಕುಟುಂಬಸ್ಥರಿಗೆ ಕೋವಿಡ್ ಪರೀಕ್ಷೆ ಮಾಡಿಸಿದ್ದು ಇಂದು ವರದಿ ನೆಗೆಟಿವ್ ಬಂದಿದೆ. ಅಭಿಷೇಕ್ ಹೊರತು ಪಡಿಸಿ ಎಲ್ಲರೂ ವ್ಯಾಕ್ಸಿನ್ ಲಸಿಕೆ ಪಡೆದಿದ್ದೇವೆ. ಸದ್ಯ ಅಭಿಷೇಕ್ ಬೇರೆ ಸ್ಥಳದಲ್ಲಿದ್ದು, ಶೀಘ್ರವೇ ಹಿಂದಿರುಗಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ಅಮಿತಾಬ್ ಬಚ್ಚನ್ ಕೈನಲ್ಲಿ ಹಲವಾರು ಇಂಟ್ರೆಸ್ಟಿಂಗ್ ಸಾಲು ಸಾಲು ಸಿನಿಮಾಗಳಿದ್ದು, ರೂಮಿ ಜಾಫ್ರಿ ಅವರ ‘ಚೆಹ್ರೆ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಇದೇ ಮೊದಲ ಬಾರಿಗೆ ಇಮ್ರಾನ್ ಹಶ್ಮಿ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.
T 3861 –
Got it done !
My CoviD vaccination this afternoon ..
All well .. ????
— Amitabh Bachchan (@SrBachchan) April 1, 2021
ನಟ ರಣ್‍ಬೀರ್ ಕಪೂರ್ ಹಾಗೂ ಅಲಿಯಾ ಭಟ್ ಒಟ್ಟಾಗಿ ಅಭಿನಯಿಸುತ್ತಿರುವ ಬ್ರಹ್ಮಾಸ್ತ್ರ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಅಭಿನಯಿಸಿದ್ದಾರೆ. ಜೊತೆಗೆ ಮರಾಠಿ ನಿರ್ದೇಶಕ ನಾಗರಾಜ್ ಮಂಜುಲೆ ಅವರ ಬಾಲಿವುಡ್‍ನ ಚೊಚ್ಚಲ ಸಿನಿಮಾ ‘ಜುಂಡ್’ನಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ.