– 250 ಅಡಿಕೆ ಗಿಡಗಳ ನಾಶ
ತುಮಕೂರು: ಪ್ರೀತಿಸಿ ಮದುವೆಯಾಗಿದ್ದ ಯುವತಿ ಕುಟುಂಬಸ್ಥರು ಯುವಕನ ಅಡಿಕೆ ತೋಟ ನಾಶ ಮಾಡಿರುವ ಘಟನೆ ತುಮಕೂರು ತಾಲೂಕಿನ ಮಲ್ಲಸಂದ್ರಪಾಳ್ಯದಲ್ಲಿ ನಡೆದಿದೆ.
ಮಲ್ಲಸಂದ್ರಪಾಳ್ಯದ ರವಿಚಂದ್ರ ಮತ್ತು ಅನು ಇಬ್ಬರು ಪ್ರೀತಿಸಿ ಎರಡು ದಿನಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಮದುವೆಗೆ ಅನು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಮದುವೆ ಬಳಿಕ ಅನು ಸೋದರ ಸಂತೋಷ್ ಮತ್ತು ತಾಯಿ ಗಂಗಮ್ಮ ಅಡಿಕೆ ಗಿಡಗಳನ್ನ ನಾಶಪಡಿಸಿದ್ದಾರೆ ಎಂದು ರವಿಚಂದ್ರ ಕುಟುಂಬಸ್ಥರು ಆರೋಪಿಸಿದ್ದಾರೆ.
ಮದುವೆಗೆ ರವಿಚಂದ್ರ ಅವರಿಗೆ ಸೇರಿದ 250 ಅಡಿಕೆ ಗಿಡಗಳು ನಾಶವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.