ಲಕ್ನೋ: ಲಖೀಂಪುರ್ ಖೇರಿಯಲ್ಲಿ ರೈತರ ಮೇಲೆ ಕಾರು ಹರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಮಗ ಬಂಧನವಾದರೂ ಕೂಡ ಅವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸುತ್ತಿರುವುದು ಕೇಂದ್ರ ಬಿಜೆಪಿ ಸರ್ಕಾರಕ್ಕೆ ನಾಚಿಕೆಗೇಡು ಎಂದು ಕಾಂಗ್ರೆಸ್ ಕಿಡಿಕಾರಿದೆ.
ಲಖೀಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾನನ್ನು ಪೊಲೀಸರು ಬಂಧಿಸಿದ್ದಾರೆ. ಆದರೂ ಮೋದಿ ನೇತೃತ್ವದ ಸರ್ಕಾರ ಅವರನ್ನು ವಜಾಗೊಳಿಸದೆ ಸಂಪುಟದಲ್ಲಿ ಮುಂದುವರಿಸುತ್ತಿದೆ. ಇದು ಮೋದಿ ಸರ್ಕಾರದ ಅಹಂಕಾರದ ಮುಂದುವರಿದ ಭಾಗ ಎಂದು ಕಾಂಗ್ರೆಸ್ ವರ್ಕಿಂಗ್ ಕಮಿಟಿ (ಸಿಡಬ್ಲ್ಯೂಸಿ) ಟೀಕಿಸಿದೆ. ಇದನ್ನೂ ಓದಿ: ಲಖೀಂಪುರ್ ರೈತರ ಹತ್ಯಾಕಾಂಡ ಪ್ರಕರಣ- ಅಶೀಶ್ ಮಿಶ್ರಾ SIT ವಶಕ್ಕೆ
The CWC reviewed the political situation in the country. The CWC is deeply distressed to note the multiple challenges that face the country and the all-round failure of the Modi govt in dealing with these challenges.: Shri @kcvenugopalmp pic.twitter.com/eeEogsAbhh
— Congress (@INCIndia) October 16, 2021
ಬಿಜೆಪಿ ಸರ್ಕಾರದ ಜನ ವಿರೋಧಿ ನಡೆಯ ಬಗ್ಗೆ ಸಿಡಬ್ಲ್ಯೂಸಿ ನಿರ್ಣಯ ಅಂಗೀಕರಿಸಿದ್ದು, ಕಳೆದ ಏಳು ವರ್ಷಗಳಲ್ಲಿ ರೈತರು ಮತ್ತು ಭೂರಹಿತ ಕೃಷಿ ಕಾರ್ಮಿಕರ ಜೀವನೋಪಾಯದ ಮೇಲೆ ದಾಳಿ ಮಾಡಿದ ನೀಚ ಸರ್ಕಾರವಿದು. ಈ ಸರ್ಕಾರ ಬಂದ ಬಳಿಕ ಪ್ರಜಾಪ್ರಭುತ್ವ, ಆರ್ಥಿಕತೆ, ಭದ್ರತೆ ದೇಶದಲ್ಲಿ ಇಲ್ಲದಂತಹ ಪರಿಸ್ಥಿತಿ ಬಂದಿದೆ. ಇದಕ್ಕೆ ಸಾಕ್ಷಿ ಲಖೀಂಪುರ್ ಘಟನೆ. ಅಮಿತ್ ಮಿಶ್ರಾ ಅವರನ್ನು ವಜಾಗೊಳಿಸುವಂತೆ ಸಾರ್ವಜನಿಕ ವಲಯ ಮತ್ತು ಪ್ರತಿಪಕ್ಷ ಒತ್ತಾಯ ಮಾಡಿದರೂ ಸರ್ಕಾರ ನಾಚಿಕೆ ಇಲ್ಲದವರಂತೆ ವರ್ತಿಸುತ್ತಿದೆ ಎಂದು ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಲಖಿಂಪುರ್ ಸಂತ್ರಸ್ತ ಕುಟುಂಬಗಳಿಗೆ ಹಣ ಬೇಕಿಲ್ಲ, ನ್ಯಾಯ ಬೇಕು: ಪ್ರಿಯಾಂಕಾ ಗಾಂಧಿ