ಬೆಳಗಾವಿ: ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ಟಾಕ್‍ಫೈಟ್ ಮುಂದುವರಿದಿದೆ. ಲಕ್ಷ್ಮಿ ಹೆಬ್ಬಾಳ್ಕರ್‍ರನ್ಬು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗೆಲ್ಲಿಸಿದ್ದು ನಾನೇ ಎಂದು ಪದೇಪದೇ ಹೇಳುತ್ತಿದ್ದ ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದ್ದ, ಲಕ್ಷ್ಮಿ ಹೆಬ್ಬಾಳ್ಕರ್ ರಮೇಶ್ ಜಾರಕಿಹೊಳಿಯನ್ನು ಮಂತ್ರಿ ಮಾಡಿಸಿದ್ದು ನಾನೇ ಅಂತಾ ಹೇಳಿದ್ದರು. ಈ ವಿಚಾರಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ ಲಕ್ಷ್ನೀ ಹೆಬ್ಬಾಳ್ಕರ್ ಮಾರ್ಕೆಟಿಂಗ್ ವುಮೆನ್ ಅಂತಾ ಲೇವಡಿ ಮಾಡಿದ್ರು.
Advertisement
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಜಮನಾಳ ಗ್ರಾಮದ ಬಳಿ ಡ್ಯಾಂ ನಿರ್ಮಾಣ ಕಾಮಗಾರಿ ವೀಕ್ಷಣೆಗೆ ಬಂದಿದ್ದ ರಮೇಶ್ ಜಾರಕಿಹೊಳಿ ಮುಳುಗಡೆಯಾಗುವ ಜಮೀನಿನ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ರಮೇಶ್ ಜಾರಕಿಹೊಳಿ ಮಂತ್ರಿ ಮಾಡಿದ್ದು ನಾನೇ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ವಿಚಾರವಾಗಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ‘ನನ್ನ ಹಿತೈಷಿಗಳು ಆಕೆ ಬಗ್ಗೆ ಮಾತನಾಡದಂತೆ ನನಗೆ ವಾರ್ನಿಂಗ್ ಮಾಡಿದ್ದಾರೆ. ಆಕೆ ಮಾರ್ಕೆಟಿಂಗ್ ವುಮೆನ್, ಏನೇ ಮಾಡಿದರೂ ಮಾರ್ಕೆಟಿಂಗ್ ಮಾಡಿಕೊಳ್ಳುತ್ತಾಳೆ. ನನ್ನ ಯಾರ ಮಂತ್ರಿ ಮಾಡಿದ್ದಾರೆ ಅಂತಾ ಮುಂದೆ ಹೇಳ್ತೇನೆ. ಸಿದ್ದರಾಮಯ್ಯರನ್ನ ಕೇಳಿ ನನ್ನ ಯಾರು ಮಂತ್ರಿ ಮಾಡಿದ್ದು ಅಂತಾ. ನನ್ನ ಹಿತೈಷಿಗಳು ಆಕೆ ಬಗ್ಗೆ ಮಾತನಾಡದಂತೆ ಬಹಳಷ್ಟು ಮನವಿ ಮಾಡಿದ್ದಾರೆ ಎಂದರು. ಇನ್ನು ಗೋಕಾಕ್‍ನಲ್ಲಿ ರಮೇಶ್ ಜಾರಕಿಹೊಳಿ ಸೋಲಿಸಲು ಸತೀಶ್ ಜಾರಕಿಹೊಳಿ, ನನ್ನದು ಜಾಯಿಂಟ್ ವೆಂಚರ್ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಮೋಸ್ಟ್ ವೆಲಕಮ್.. ಯಾರ ಬಂದರೂ ಹೃದಯಪೂರ್ವಕ ಸ್ವಾಗತ ಮಾಡ್ತೇನೆ ಎಂದರು.
Advertisement
Advertisement
ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಾಗೂ ದೇಶದ ವಿವಿಧ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ಪ್ರತ್ಯೇಕ ಅಧಿಸೂಚನೆ ಪ್ರಕಟಿಸುವುದಾಗಿ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೇ 2ರಂದು ರಾಜ್ಯದ 3 ವಿಧಾನಸಭಾ, ಲೋಕಸಭಾ ಉಪಚುನಾವಣೆ ಫಲಿತಾಂಶ ಬರುತ್ತೆ. ಯಾವ ಹಂತದಲ್ಲಿ ಚುನಾವಣೆ ಮಾಡ್ತಾರೆ ಅವರಿಗೆ ಬಿಟ್ಟ ವಿಷಯ ಎಂದರು. ಇನ್ನು ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಜಗದೀಶ್ ಶೆಟ್ಟರ್ ಸ್ಪರ್ಧಿಸಬೇಕೆಂಬ ಒತ್ತಡವಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಗದೀಶ್ ಶೆಟ್ಟರ್ ಸ್ಪರ್ಧೆ ಬಗ್ಗೆ ನನಗೆ ಮಾಹಿತಿ ಇಲ್ಲ. ವರಿಷ್ಠರು ಯಾರಿಗೆ ಟಿಕೆಟ್ ಕೊಡ್ತಾರೆ ಅವರ ಪರ ಕೆಲಸ ಮಾಡ್ತೇವೆ ಎಂದರು.
Advertisement
ಬೆಳಗಾವಿ ಲೋಕಸಭಾ ಉಪಚುನಾವಣೆ ಹೊಸ್ತಿಲಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಟಾಕ್ ಫೈಟ್ ಜೋರಾಗಿದ್ದು, ಚುನಾವಣೆ ವೇಳೆ ಯಾವ ಹಂತಕ್ಕೆ ಹೋಗುತ್ತೋ ಗೊತ್ತಿಲ್ಲ. ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜಗದೀಶ್ ಶೆಟ್ಟರ್ ಸ್ಪರ್ಧಿಸುತ್ತಾರಾ, ಸುರೇಶ್ ಅಂಗಡಿ ಪುತ್ರಿ, ಜಗದೀಶ್ ಶೆಟ್ಟರ್ ಸೊಸೆಗೆ ಟಿಕೆಟ್ ಸಿಗುತ್ತಾ ಅಥವಾ ಹೊಸಮುಖಕ್ಕೆ ಅವಕಾಶ ಕೊಡ್ತಾರಾ ಎಂಬುದನ್ನು ಕಾದು ನೋಡಬೇಕು.