ಹುಬ್ಬಳ್ಳಿ: ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ಲಂಡನ್ ಮೂಲದ ಯುವತಿ ಮದುವೆಯಾಗುವುದಾಗಿ ನಂಬಿಸಿ ಹುಬ್ಬಳ್ಳಿಯ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ಹಣ ವಂಚಿಸಿದ್ದಾಳೆ.
ಹುಬ್ಬಳ್ಳಿಯ ನವನಗರದ ನಿವಾಸಿ ಗುತ್ತಿಗೆದಾರ ಪ್ರಮೋದ್ ಕುಲಕರ್ಣಿ ಮೋಸ ಹೋಗಿದ್ದು ಈಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement
Advertisement
ವಧು ಹುಡುಕಾಟದಲ್ಲಿದ್ದ ಪ್ರಮೋದ್‌ಗೆ ‘ಸಂಗಮ’ ಹೆಸರಿನ ಮ್ಯಾಟ್ರಿಮೋನಿಯಲ್ಲಿ ಲಂಡನ್ ಮೂಲದ ಯುವತಿ ಅನ್ನಾ ಮೊಹಮ್ಮದ್ ಪರಿಚಯವಾಗಿದ್ದಾಳೆ. ಮೊದ ಮೊದಲು ವಾಟ್ಸಪ್‌ನಲ್ಲಿ ಮೆಸೇಜ್ ಮಾಡುತ್ತಿದ್ದ ಯುವತಿ ಬಳಿಕ ಪ್ರತಿನಿತ್ಯ ಚಾಟ್ ಮಾಡಿ ಪ್ರಮೋದರನ್ನ ನಂಬಿಸಿದ್ದಳು.
Advertisement
ನಂತರ ಲಂಡನ್‌ನಿಂದ ದುಬಾರಿ ಬೆಲೆಯ ಗಿಫ್ಟ್ ಕಳುಹಿಸಿರುವುದಾಗಿ ತಿಳಿಸಿದ್ದಳು. ಗಿಫ್ಟ್ ನಂಬಿಕೊಂಡಿದ್ದ ಪ್ರಮೋದ್ ಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಲಂಡನಿಂದ ನಿಮಗೆ ಗಿಫ್ಟ್ ಬಂದಿದೆ ಎಂದು ಹೇಳಿ ʼಪಾರ್ಸೆಲ್ ಶುಲ್ಕ’ ದ ಹೆಸರಿನಲ್ಲಿ ಹಂತಹಂತವಾಗಿ ಹಣ ಪಡೆದುಕೊಂಡಿದ್ದ.
Advertisement
ದುಬಾರಿ ಬೆಲೆಯ ಗಿಫ್ಟ್ ನಂಬಿ ಆನಲೈನ್ ಮೂಲಕ ಹಂತಹಂತವಾಗಿ ಬರೋಬ್ಬರಿ 5,15,549 ಹಣವನ್ನ ಪ್ರಮೋದ್ ವರ್ಗಾವಣೆ ಮಾಡಿದ್ದರು.
ಹಣ ವರ್ಗಾವಣೆ ಮಾಡಿದರೂ ಪಾರ್ಸೆಲ್ ಬಾರದ ಕಾರಣ ಕೊನೆಗೆ ತಾನು ಮೋಸ ಹೋಗಿರುವುದು ಪ್ರಮೋದ್ ಅವರಿಗೆ ಗೊತ್ತಾಗಿದೆ. ಈಗ ಆನಲೈನ್ ವಂಚಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.