ಬೆಂಗಳೂರು: ಲಂಡನ್ ನಿಂದ ಬೆಂಗಳೂರಿಗೆ ಆಗಮಿಸಿದ್ದ ತಾಯಿ ಮತ್ತು ಮಗಳಿಗೆ ಕೊರೊನಾ ಸೋಂಕು ತಗುಲಿರೋದು ಖಚಿತವಾಗಿದೆ. ಈ ಇಬ್ಬರು ಬೊಮ್ಮನಹಳ್ಳಿಯ ವಿಠಲನಗರದ ನಿವಾಸಿಗಳೆಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ 35 ವರ್ಷದ ಮಹಿಳೆ ಮತ್ತು 6 ವರ್ಷದ ಮಗಳು ಬೆಂಗಳೂರಿಗೆ ಬಂದಿದ್ದರು. ಸದ್ಯ ಕೊರೊನಾ ಹೊಸ ತಳಿಯ ರೂಪ ತಿಳಿಯಲು ಇಬ್ಬರ ಸ್ಯಾಂಪಲ್ ನ್ನು ಪುಣೆಗೆ ರವಾನಿಸಲಾಗಿದೆ. ಸದ್ಯ ಬೊಮ್ಮನಹಳ್ಳಿ ಇನ್ನು ಆರು ಜನರ ವರದಿಗಾಗಿ ಆರೋಗ್ಯಾಧಿಕಾರಿಗಳು ಕಾಯುತ್ತಿದ್ದಾರೆ. ಇನ್ನು ಸೋಂಕಿಗೆ ತುತ್ತಾಗಿರುವ ಇಬ್ಬರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನ ಪತ್ತೆ ಹೆಚ್ಚುವ ಕೆಲಸ ನಡೆತಯುತ್ತಿದೆ.
Advertisement
Advertisement
ಬ್ರಿಟನ್ ನಿಂದ ದೆಹಲಿಗೆ ಆಗಮಿಸಿದ್ದ 266 ಜನರನ್ನು ವಿಮಾನ ನಿಲ್ದಾಣದಲ್ಲಿಯೇ ಯುಕೆ ಹೊಸ ಕೊರೋನಾ ವೈರಸ್ ಹಿನ್ನೆಲೆ ಪರೀಕ್ಷೆಗೆ ಒಳಪಡಿಸಲಾಗಿತ್ತು. 266 ಜನರಲ್ಲಿ ಐವರಿಗೆ ಹೊಸ ಬಗೆಯ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆ ನಡೆಸಿದಾಗ ಐವರಿಗೆ ತಗುಲಿರುವುದು ಗೊತ್ತಾಗಿದೆ. ಇನ್ನೊಬ್ಬ ಪ್ರಯಾಣಿಕ ಲಂಡನ್‍ನಿಂದ ದೆಹಲಿಗೆ ಬಂದು ಅಲ್ಲಿಂದ ಚೆನ್ನೈಗೆ ಹೋಗಿದ್ದಾನೆ. ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ.
Advertisement
Advertisement
ಈ ಮೂಲಕವಾಗಿ ಯುಕೆ ಕೊರೊನಾ ವೈರಸ್ ಸೋಕು ಭಾರತಕ್ಕೂ ಕಾಲಿಟ್ಟಿದೆ. ಇದುವರೆಗೆ ಇಂಗ್ಲೆಂಡ್, ಬ್ರಿಟನ್ ನಿಂದ ಭಾರತಕ್ಕೆ ಬಂದ 6 ಜನರಲ್ಲಿ ಹೊಸ ಮಾದರಿಯ ಕೊರೊನಾ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಮೂಲಕವಾಗಿ ಯುಕೆಯಲ್ಲಿರುವ ಹೊಸ ವೈರಸ್ ಭಾರತಕ್ಕೂ ಕಾಲಿಟ್ಟಂತೆ ಆಗಿದೆ.
ರೂಪಾಂತರಗೊಂಡಿರುವ ವೈರಸ್ ವೇಗವಾಗಿ ಹಬ್ಬುತ್ತೆ: ಲಂಡನ್ ವೈದ್ಯ ಡಾ.ಚಿರನ್https://t.co/YnVLeKyTnw#CoronavirusStrain #london #Doctor #CoronaVirus #COVID19 #KannadaNews
— PublicTV (@publictvnews) December 22, 2020
ಸೋಮವಾರ ಡಿಸೆಂಬರ್ 23 ರಿಂದ 31ರ ತನಕ ಇಂಗ್ಲೆಂಡ್‍ನಿಂದ ಆಗಮಿಸುವ ಎಲ್ಲ ವಿಮಾನ ಸೇವೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿತ್ತು. ಇಂದು ಕೇಂದ್ರ ಸರ್ಕಾರ ಬ್ರಿಟನ್ ಮೂಲಕ ಭಾರತಕ್ಕೆ ಆಗಮಿಸಿದ ಪ್ರಯಾಣಿಕರಿಗೆ ಕೊರೊನಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
4 ವಾರದ ಹಿಂದೆ ಇಂಗ್ಲೆಂಡ್‌ನಿಂದ ಬಂದ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಕಡ್ಡಾಯ – ಮಾರ್ಗಸೂಚಿಯಲ್ಲಿ ಏನಿದೆ? https://t.co/mgMW9HUbBV#Corona #Covid19 #India #Kannadanews #UKcovid #UKVirus
— PublicTV (@publictvnews) December 22, 2020