– ಮನೆಯಲ್ಲಿಯೇ ನಡೀತಾ ಇತ್ತು ಡೀಲ್
ಲಕ್ನೋ: ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಯನ್ನು ಎಸಿಬಿ ಬೇಟೆಯಾಡಿದೆ. ಹಣ ಪಡೆಯುತ್ತಿರುವ ಸಮಯದಲ್ಲಿ ಎಂಟ್ರಿ ಕೊಟ್ಟ ಭ್ರಷ್ಟಾಚರ ನಿಗ್ರಹ ದಳ (ಎಸಿಬಿ) ತಂಡ ಟವೆಲ್, ಬನಿಯನ್ ಮೇಲೆಯೇ ಅಧಿಕಾರಿಯನ್ನು ಕಚೇರಿಗೆ ಕರೆ ತಂದಿದ್ದಾರೆ.
Advertisement
ಉತ್ತರ ಪ್ರದೇಶದ ಸಂತ ಕಬೀರ್ ನಗರದ ರಾಮ್ ಮಿಲನ್ ಯಾದವ್ 10 ಸಾವಿರ ರೂಪಾಯಿ ಲಂಚ ಪಡೆಯುತ್ತಿರುವಾಗ ತಗ್ಲಾಕೊಂಡ ದ್ವಿತೀಯ ದರ್ಜೆಯ ನೌಕರ. ಅಬ್ದುಲ್ ಖಾನ್ ಎಂಬವರ ವರದಿ ಸಿದ್ಧಪಡಿಸಲು ರಾಮ್ ಮಿಲನ್ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಮುಂದಿಟ್ಟಿದ್ದರಿಂದ ಎಸಿಬಿಗೆ ದೂರು ನೀಡಿದ್ದರು. ಇದನ್ನೂ ಓದಿ: ಸವಾಲುಗಳನ್ನು ಮೆಟ್ಟಿಲಾಗಿಸಿಕೊಂಡು ಕೆಲಸ ಮಾಡ್ತೇನೆ: ಸಿಎಂ ಬೊಮ್ಮಾಯಿ
Advertisement
Advertisement
ಸದ್ಯ ಆರೋಪಿಯನ್ನು ಠಾಣೆಗೆ ಕರೆ ತಂದಿರುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸಿಬಿ ಅಧಿಕಾರಿ ರಾಮಧಾರಿ ಮಿಶ್ರಾ, ದೂರು ಸಲ್ಲಿಕೆಯಾಗಿದ್ದರಿಂದ ಲಂಚ ಪಡೆಯುವ ವೇಳೆ ನಮ್ಮ ತಂಡ ದಾಳಿ ನಡೆಸಿತ್ತು. ಸದ್ಯ ಆರೋಪಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಡ್ಡ ಬಿಟ್ಟಾಗ ಶಿವಾಜಿ, ಈಗ ಬಸವಣ್ಣ: ಶಾಸಕ ಯತ್ನಾಳ್
Advertisement
ಉಪ ನಿರೀಕ್ಷಕರಾಗಿರುವ ರಾಮ್ ಯಾದವ್ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದರು. ಜಮೀನು ವಿಷಯವಾಗಿ ವರದಿ ಸಿದ್ಧಪಡಿಸಲು 10 ಸಾವಿರ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದ್ರೆ ನನಗೆ ಹಣ ನೀಡಲು ಇಷ್ಟವಿರಲಿಲ್ಲ. ಹಾಗಾಗಿ ಎಸಿಬಿಗೆ ದೂರು ನೀಡಿದ್ದೆ ಎಂದು ಅಬ್ದುಲ್ ಖಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಒಬ್ಬನೊಂದಿಗೆ ತಾಯಿ-ಮಗಳ ಅಕ್ರಮ ಸಂಬಂಧ – ಗೂಢಚಾರಿಕೆ ನಡೆಸ್ತಿದ್ದವನನ್ನ ಕೊಂದೇ ಬಿಟ್ರು!