ರೌಡಿಯೇ ಬೇಕೆಂದು ತಾಳಿ ಕಟ್ಟಿಸಿಕೊಂಡ್ಳು – ಮದ್ವೆ ಬಳಿಕ ಮತ್ತೊಬ್ಬನೊಂದಿಗೆ ಮಂಚ ಏರಿದ್ಳು!

Public TV
2 Min Read
Mndya Half Murder 3

– ಪ್ರಿಯಕರನ ಬುರುಡೆ ಬಿಚ್ಚಿದ ರೌಡಿ ಗಂಡ

ಮಂಡ್ಯ: ಆಕೆಗೆ ರೌಡಿ ಶೀಟರ್ ಜೊತೆ ಲವ್ ಆಗಿತ್ತು. ಹೆತ್ತವರು ವಿರೋಧ ಮಾಡಿದ್ರಿಂದ ಮನೆ ಬಿಟ್ಟೋಗಿ ಮದುವೆಯಾಗಿದ್ದ ಆಕೆಗೆ 8 ವರ್ಷದ ಗಂಡು ಮಗುವೂ ಇತ್ತು. ಈ ನಡುವೆ ಗಂಡನ ಸ್ನೇಹಿತನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಳು. ಮೊದಲೇ ಆಕೆಯ ಬಗ್ಗೆ ಸಂಶಯಗೊಂಡಿದ್ದ ಗಂಡನಿಗೆ ರೆಡ್ ಹ್ಯಾಂಡ್ ಆಗಿ ಪ್ರಿಯಕರನೊಂದಿಗೆ ಸಿಕ್ಕಿಬಿದ್ದಿದ್ದು, ಪ್ರಿಯಕರನ ಬುರುಡೆಯನ್ನು ಗಂಡ ಬಿಚ್ಚಿದ್ದಾನೆ.

Mndya Half Murder 1

ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮ ಹರ್ಷಿತಾ ಶಾಲೆಯಲ್ಲಿ ಓದುವಾಗಲೇ ರೌಡಿ ಶೀಟರ್ ನಾಗೇಂದ್ರ ಅಲಿಯಾಸ್ ಕುಳ್ಳನಾಗ ಎಂಬಾತನ ಪ್ರೀತಯ ಬಲೆಗೆ ಬಿದ್ದಿದ್ದಳು. ಸುಮಾರು 6 ವರ್ಷ ಪ್ರೀತಿಯಲ್ಲಿ ತೇಲಾಡಿದ್ದ ಆ ಜೋಡಿಯ ಮದುವೆಗೆ ಹೆತ್ತವರು ವಿರೋಧ ವ್ಯಕ್ತಪಡಿಸಿದ್ರು. ಬಳಿಕ ಮನೆ ಬಿಟ್ಟೋಗಿ ಮದುವೆಯಾಗಿದ್ರು. ಆರಂಭದಲ್ಲಿ ಲೈಫು ಚೆನ್ನಾಗಿಯೇ ಇದ್ದ ಈ ಜೋಡಿಗೆ ಓರ್ವ ಮಗನೂ ಇದ್ದಾನೆ.

Mndya Half Murder 2

ಹೀಗಿದ್ದ ಸಂಸಾರದಲ್ಲಿ ಮತ್ತೋರ್ವನ ಎಂಟ್ರಿ ಆಗುತ್ತೆ. ಅವನೇ ಮಂಡ್ಯದ ಶಂಕರಮಠ ಬಡಾವಣೆಯ ನಿವಾಸಿ ಚೇತನ್. ಅಂದಹಾಗೆ ಚೇತನ್, ಹರ್ಷಿತಾ ಪತಿ ಕುಳ್ಳನಾಗನ ಸ್ನೇಹಿತ. ಓಡಿ ಬಂದಾಗ ಸಹಾಯ ಮಾಡಿದ್ದ ಈತ, ಕ್ರಮೇಣ ಹರ್ಷಿತಾ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದ. ಈ ವಿಚಾರ ನಾಗನಿಗೆ ತಿಳಿದು ಹರ್ಷಿತಾ ಜೊತೆ ಜಗಳ ಸಹ ಆಗಿತ್ತು. ಅಲ್ಲದೆ 2018ರಲ್ಲಿ ಚೇತನ್ ಮೇಲೆ ಮಾರಕಾಸ್ತ್ರಗಳಿಂದ ಹಲೆ ಮಾಡಿದ್ದ ನಾಗ ಒಂದು ವರ್ಷ ಜೈಲಿನಲ್ಲೂ ಇದ್ದ.

MND Golmal 4

ಇಷ್ಟಾದರೂ ಚೇತನ್ ಹಾಗೂ ಹರ್ಷಿತಾ ಲವ್ವಿಡವ್ವಿ ಬಿಟ್ಟಿರಲಿಲ್ಲ. ಏಪ್ರಿಲ್ 4ನೇ ತಾರೀಕು ಹರ್ಷಿತಾ ಮನೆಗೆ ಚೇತನ್ ಬಂದಿದ್ದ. ಈ ವೇಳೆ ಮನೆಗೆ ಬಂದ ಕುಳ್ಳ ನಾಗನಿಗೆ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ರು. ಇದ್ರಿಂದ ಕೋಪಗೊಂಡ ಕುಳ್ಳನಾಗ ತನ್ನ ಸ್ನೇಹಿತ ಯೋಗೇಶ್ ಜೊತೆ ಸೇರಿ ಚೇತನ್‍ಗೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಹೆಂಡತಿ ಮೇಲೂ ಹಲ್ಲೆ ನಡೆಸಿದ್ದು, ಅಷ್ಟರಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಹಲ್ಲೆ ಮಾಡುವುದನ್ನು ನಿಲ್ಲಿಸಿದ್ದಾರೆ.

vlcsnap 2021 04 08 18h20m02s980

ಘಟನೆ ಸಂಬಂಧ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಗಂಭೀರವಾಗಿ ಗಾಯಗೊಂಡಿರೊ ಚೇತನ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಹಲ್ಲೆ ನಡೆಸಿದ ಕುಳ್ಳನಾಗ ಹಾಗೂ ಆತನ ಸ್ನೇಹಿತ ಯೋಗೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *