ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಕಾರ್ಯವೈಖರಿಯ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪ ಇದೀಗ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೂಪ ಸಮಾಜಿಕ ಜಾಲತಾಣದಲ್ಲಿ ರೋಹಿಣಿ ಸಿಂಧೂರಿ ಮೈಸೂರಿನಲ್ಲಿ ಡಿಸಿಯಾಗಿದ್ದ ಸಮಯದಲ್ಲಿ ಮಾಡಿದ ಕೆಲಸದ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.
Advertisement
ಕೊರೊನಾದಿಂದ ರಾಜ್ಯದ, ಜಿಲ್ಲೆಯ ಜನರು ಸಂಕಷ್ಟದಲ್ಲಿದ್ದಾಗ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿದ್ದ ಅಂದಿನ ಮೈಸೂರು ಡಿಸಿ ರೋಹಿಣಿ ಸಿಂಧೂರಿಯ ಪೂಲ್ ವಿವಾದ ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ. ಈ ಮೂಲಕ ರೋಹಿಣಿ ಸರ್ಕಾರದ ಹಾಗೂ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿ ಡಿಸಿ ಅವಧಿ ಮುಗಿಯುವುದಕ್ಕೆ ಮೊದಲೇ ಮೈಸೂರಿನಿಂದ ವರ್ಗಾವಣೆ ಆದರು. ಈ ಮಧ್ಯೆ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪ ರೋಹಿಣಿ ಸಿಂಧೂರಿ ಕಾರ್ಯವೈಖರಿ ಹಾಗೂ ಭೂಗಳ್ಳರ ವಿರುದ್ಧ ಸಮರ ಸಾರಿದ ದಾಟಿಯ ಬಗ್ಗೆ ಅಸಮಾಧಾನ ವ್ಯಕ್ತಡಿಸಿ ಸಾಮಾಜಿಕ ಜಾಲಾತಾಣದಲ್ಲಿ ನಿತ್ಯ ಬರೆದು ಪೋಸ್ಟ್ ಮಾಡುವ ಮೂಲಕ ರೋಹಿಣಿ ಸಿಂಧೂರಿಯ ಪೂಲ್ ವಿವಾದಕ್ಕೆ ಮರು ಜೀವ ಕೊಡುತ್ತಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ಸ್ವಿಮ್ಮಿಂಗ್ ಪೂಲ್ ವಿವಾದ – ಟ್ವಿಟ್ಟರ್‌ನಲ್ಲಿ ತಿವಿದ ಐಜಿಪಿ ರೂಪಾ
Advertisement
Advertisement
ಪೋಸ್ಟ್ ನಲ್ಲಿ ಏನಿದೆ?:
ಮೈಸೂರಿನ ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಹತ್ತು ತಿಂಗಳ ಅವಧಿಯಲ್ಲಿ ಒಂದು ಇಂಚು ಭೂಮಿಯನ್ನು ಕೂಡ ಭೂ ಮಾಫಿಯದಿಂದ ಪಡೆದುಕೊಳ್ಳಲಿಲ್ಲ. ಒತ್ತುವರಿ ಮಾಡಿದ್ದ ಭೂಗಳ್ಳರ ವಿರುದ್ಧ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲಿಲ್ಲ. ಮೈಸೂರಿನಲ್ಲಿ ಆಗಿದ್ದಂತಹ ಭೂ ಮಾಫಿಯದ ವಿಚಾರದಲ್ಲಿ ಮೈಸೂರು ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಏನೂ ಮಾಡಲಿಲ್ಲ. ರೋಹಿಣಿ ಸಿಂಧೂರಿ ತೋಳ ಬಂತು ತೋಳ ಕಥೆ ಹೇಳಿಕೊಂಡು ಕಾಲ ಕಳೆದ್ರೆ ವಿನಃ ತೋಳ ಹಿಡಿಯುವ ಕೆಲಸ ಆಗಲೇ ಇಲ್ಲ. ಸ್ವಿಮ್ಮಿಂಗ್ ಪೂಲ್ ವಿಚಾರ ಸಣ್ಣದಾಗಿದ್ರು ಅದನ್ನು ಮಾಡಲು ಅನುಮತಿ ಪಡೆದಿಲ್ಲಾ ಅನ್ನೋದು ರೀಜನಲ್ ಕಮೀಷನರ್ ವರದಿಯಲ್ಲಿ ಬಹಿರಂಗವಾಗಿದೆ. ಅಕ್ರಮ ಯಾರೇ ಮಾಡಿದರು ಅಕ್ರಮನೇ ಭೂಮಾಫಿಯಾ ಸೇರಿದಂತೆ ಹಲವು ಪ್ರಕರಣಗಳಲ್ಲಿ ಇನ್ನು ಕ್ರಮ ಆಗಿಲ್ಲ ಆಗಬೇಕು ಎಂದು ಒತ್ತಾಯಿಸಿದ್ದಾರೆ.
Advertisement