ವಾಷಿಂಗ್ಟನ್: ಕ್ಯಾನ್ಸರ್ ರೋಗಿಯೊಬ್ಬರು ನನಗೆ ಈ ಖಾಯಿಲೆ ವಾಸಿಯಾಗುವುದಿಲ್ಲ ಎಂದು ಮನನೊಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಗುಂಡು ಹಾರಿಸಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಡಾಕ್ಟರ್‍ನನ್ನು ಭರತ್ ನರುಮಂಚಿ ಎಂದು ಗುರುತಿಸಲಾಗಿದೆ. ಕ್ಯಾನ್ಸರ್ ರೋಗಿ ಕೂಡ ಒಬ್ಬ ಶಿಶು ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು ತನಗೆ ರೋಗ ವಾಸಿಯಾಗುವುದಿಲ್ಲ ಎಂದು ಮನನೊಂದು ಈ ಕೃತ್ಯಕ್ಕೆ ಕೈ ಹಾಕಿದ್ದಾರೆ.
ಭಾರತ ಮೂಲದ 43 ವರ್ಷದ ವೈದ್ಯೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಹೀಗಾಗಿ ಅವರು ಕೆಲವೇ ದಿನಗಳ ಕಾಲ ಮಾತ್ರ ಬದುಕಲಿದ್ದಾರೆ ಎಂದು ವೈದ್ಯಕೀಯ ವರದಿ ಬಂದಿದೆ. ಈ ವಿಚಾರ ವೈದ್ಯೆಯ ಗಮನಕ್ಕೆ ಬಂದಿದ್ದು, ಖಿನ್ನತೆಗೆ ಜಾರಿದ್ದರು. ನನ್ನ ಕ್ಯಾನ್ಸರ್ ರೋಗ ವಾಸಿಯಾಗುವುದಿಲ್ಲ, ನಾನು ಸಾಯುತ್ತೇನೆ ಎಂದು ವೈದ್ಯರ ಮೇಲೆ ಗುಂಡು ಹಾರಿಸಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.