ಧಾರವಾಡ/ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯ ಮತ್ತೊಂದ ಎಡವಟ್ಟು ಬಹಿರಂಗವಾಗಿದೆ. ಸ್ಟ್ಯಾಂಡ್ ಇಲ್ಲದಕ್ಕೆ ಗ್ಲೂಕೋಸ್ ಬಾಟಲಿಯನ್ನು ರೋಗಿಯ ಕೈಗೆ ಕೊಡುವ ಮೂಲಕ ಕಿಮ್ಸ್ ಸಿಬ್ಬಂದಿ ನಿಷ್ಕಾಳಜಿ ತೋರಿದ್ದಾರೆ.
ಸದಾ ಒಂದಿಲ್ಲೊಂಡು ಎಡವಟ್ಟುಗಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಸುದ್ದಿ ಆಗುತ್ತಿರುತ್ತದೆ. ಚಿಕಿತ್ಸೆಗೆಂದು ದಾಖಲಾಗಿರುವ ರೋಗಿಯ ಕೈಯಲ್ಲಿ ಗ್ಲೂಕೋಸ್ ಬಾಟಲ್ ನೀಡಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇಡೀ ರಾತ್ರಿ ತನ್ನ ಕೈಯಲ್ಲೆ ಗ್ಲೂಕೊಸ್ ಬಾಟಲಿ ಹಿಡಿದುಕೊಂಡು ರೋಗಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.
Advertisement
Advertisement
ಕಿಮ್ಸ್ ಸಿಬ್ಬಂದಿಯ ಅಮಾನವಿಯ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೆ ಆಸ್ಪತ್ರೆಯ ಕೆಲ ಸಿಬ್ಬಂದಿ ಕೋವಿಡ್ ವಾರ್ಡ್ ಪಕ್ಕದಲ್ಲಿಯೇ ಡ್ಯಾನ್ಸ್ ಮಾಡಿದ್ದರು.
Advertisement