ಬಿಗ್‍ಬಾಸ್ ಮನೆಯಲ್ಲಿ ಎಲ್ಲರೂ ಪ್ರೀತಿ ವಿಶ್ವಾಸದಿಂದ ಮಾತನಾಡುತ್ತಾರೆ. ಮೇಲ್ನೋಟಕ್ಕೆ ಮಾತ್ರ ಆ ನಗು, ಪ್ರೀತಿ, ಸಂತೋಷ ಪ್ರತಿಯೊಬ್ಬರ ಮನಸ್ಸಲ್ಲಿ ತಾನೂ ಗೆಲ್ಲಬೇಕು ಎನ್ನುವ ಆಸೆ ಇದೆ. ಆದರೆ ಅದನ್ನು ಯಾರು ಬಾಯಿ ಬಿಟ್ಟು ಹೇಳುತ್ತಿರಲಿಲ್ಲ. ಆದರೆ ಇದೀಗ ದೊಡ್ಡಮನೆ ಫಿಮೇಲ್ ಸ್ಪರ್ಧಿಗಳು ನಾವು ಗೆಲ್ಲಲೇ ಬೇಕು ಎಂದು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ.

ನಾವು ಯಾರಿಗೂ ಬಕೆಟ್ ಹಿಡಿಯಲ್ಲ. ನಾವು ಇರೋದನ್ನ ಹಾಗೇ ಹೇಳುತ್ತೇವೆ ಹಾಗಾಗಿ ಅವರ ನಮ್ಮ ಹೆಸರುಗಳನ್ನು ಸೂಚಿಸುವುದಿಲ್ಲ. ಮೂರು ಜನ ಹೆಣ್ಣು ಮಕ್ಕಳಾದರೂ ಫೈನಲ್ ನಲ್ಲಿ ಕುಳಿತುಕೊಳ್ಳಬೇಕು ಎಂದು ನಿಧಿ ಹೇಳಿದ್ದಾರೆ.
ಫೈನಲ್‍ನಲ್ಲಿ ಹೆಣ್ಣು ಮಕ್ಕಳು ಇರಬೇಕು ಹಾಗೇ ಆಡಬೇಕು!
ಹೌದು ನಾನು ಯೋಚನೆ ಮಾಡುತ್ತಿದ್ದೆ ಯಾವಾಗಲೂ ಯಾಕೆ ಹುಡುಗರೇ ಬಿಗ್‍ಬಾಸ್ ವೀನ್ ಆಗುತ್ತಾರೆ ಎಂದು. ನಾವು ಹೇಗೆ ಆಡಬೇಕು ಎಂದರೆ ಕೊನೆಯಲ್ಲಿ ಹೆಣ್ಣು ಮಕ್ಕಳು ಇರಬೇಕು. ಇಷ್ಟು ಸೀಸನ್ ಅಲ್ಲಿ ಶ್ರುತಿ ಮೇಡಂ ಒಬ್ಬರೆ ವಿನ್ ಆಗಿದ್ದು. ಅವರು ಗುಂಪಲ್ಲಿ ಗೋವಿಂದ ಆಗಲಿಲ್ಲ. ಹೀಗಾಗಿ ಅವರು ಬಿಗ್‍ಬಾಸ್ ಗೆದ್ದಿರುವುದು ಎಂದು ಶುಭ ಹೇಳುತ್ತಾ ಗೇಮ್ ಪ್ಲಾನ್ ಮಾಡಿದ್ದಾರೆ.



