ಹೈದರಾಬಾದ್: ಗಂಡ ಪತ್ನಿಯ ಮಡಿಲಿನಲ್ಲಿಯೇ ಪ್ರಾಣ ಬಿಟ್ಟಿರುವ ಘಟನೆ ಆಂಧ್ರಪ್ರದೇಶದ ಕುಪ್ಪಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಮಿಡ್ಡೂರಿನ ಗುಡಿಪಲ್ಲೇ ಮಂಡಲದ ಚಂದ್ರಶೇಖರ್(60) ಮೃತರಾಗಿದ್ದಾರೆ. ದಂಪತಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದರು. ಆದರೆ ಕಳೆದ 15 ದಿನಗಳ ಹಿಂದೆ ಚಂದ್ರಶೇಖರ್‍ಗೆ ಕೊರೊನಾ ದೃಢವಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಂತೆ ದಂಪತಿ ತಮ್ಮ ಊರಿಗೆ ಹೊರಡಲು ಸಿದ್ದರಾಗಿದ್ದರು. ಚಂದ್ರಶೇಖರ್ ಈ ವೇಳೆ ಮೃತಪಟ್ಟಿದ್ದಾರೆ.
ಕುಪ್ಪಂ ರೈಲ್ವೆ ನಿಲ್ದಾಣದಲ್ಲಿ ಅನಾರೋಗ್ಯದಿಂದ ಪತಿ ಚಂದ್ರಶೇಖರ್ ಪತ್ನಿಯ ಮಡಿಲಿನಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಪತ್ನಿಯರೋದನೆ ಕರುಳು ಹಿಂಡುವಂತಿತ್ತು.