– ಮಹಿಳಾ ಅಧಿಕಾರಿಯ ಕಾರ್ಯಕ್ಕೆ ಭಾರೀ ಮೆಚ್ಚುಗೆ
ರಾಂಚಿ: ನಿಂತಿದ್ದ ರೈಲಿನಲ್ಲಿ ಅಳುತ್ತಿದ್ದ ಮಗುವಿಗೆ ಮಹಿಳಾ ಪೊಲೀಸೊಬ್ಬರು ತನ್ನ ಮನೆಯಿಂದಲೇ ಹಾಲು ತಂದುಕೊಟ್ಟಿದ್ದು, ಇದೀಗ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಹಿಳಾ ಪ್ರಯಾಣಿಕೆ ಮೆಹರುನ್ನಿಸಾ ಅವರು ತನ್ನ 4 ತಿಂಗಳ ಗಂಡು ಮಗುವಿನ ಜೊತೆ ಬೆಂಗಳೂರಿನಿಂದ ಗೊರಖ್ ಪುರಕ್ಕೆ ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಹೀಗೆ ಹೋಗುತ್ತಿದ್ದಾಗ ರೈಲು ಹಾತಿಯಾ ಪೊಲೀಸ್ ಠಾಣೆಯಲ್ಲಿ ನಿಲುಗಡೆಯಾಯಿತು. ಇದೇ ವೇಳೆ ಮಗು ಹಸಿವಿನಿಂದ ಜೋರಾಗಿ ಅಳುತ್ತಿತ್ತು. ಹೀಗಾಗಿ ರೈಲು ನಿಲ್ಲುತ್ತಿದ್ದಂತೆ ಮೆಹರುನ್ನಿಸಾ ಅವರು, ತನ್ನ ಮಗುವಿಗೆ ಹೇಗಾದರೂ ಮಾಡಿ ಸ್ವಲ್ಪ ಹಾಲು ತಂದು ಕೊಡಿ ಎಂದು ರೈಲ್ವೇ ನಿಲ್ದಾಣದಲ್ಲಿದ್ದ ಅಧಿಕಾರಿಗಳ ಬಳಿ ಕೇಳಿಕೊಂಡಿದ್ದಾರೆ. ಮೇಹರುನ್ನಿಸಾ ಅವರು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡ ಸಂದರ್ಭದಲ್ಲಿ ಎಎಸ್‍ಐ ಸುಶೀಲ ಬರೈಕ್ ಕೂಡ ಅಲ್ಲೇ ಇದ್ದರು.
Advertisement
दिनांक 14 जून 2020 को हटिया रेलवे स्टेशन पर ट्रेन संख्या 06563 बेंगलुरु से गोरखपुर जाने वाली श्रमिक स्पेशल ट्रेन का सुबह 06:00 बजे आगमन हुआ.
इस ट्रेन से यात्रा कर रही एक महिला यात्री (नाम- मेहरून्निसा )ने स्टेशन पर कार्यरत रेल सुरक्षा बल की महिला कर्मचारी ASI, श्रीमती 1/2 pic.twitter.com/KVj52XEYZp
— DRM Ranchi (@drmrnc) June 14, 2020
Advertisement
ಸುಶೀಲ ಅವರು ಮನೆ ರೈಲ್ವೇ ನಿಲ್ದಾಣದ ಪಕ್ಕದಲ್ಲೇ ಇದೆ. ಹೀಗಾಗಿ ಮೆಹರುನ್ನಿಸಾ ಅವರು ಮನವಿ ಮಾಡಿಕೊಂಡ ತಕ್ಷಣ ಎಎಸ್‍ಐ ಸುಶೀಲ ಅವರು ತಮ್ಮ ಮನೆಗೆ ಓಡಿದ್ದಾರೆ. ಅಲ್ಲದೆ ಒಂದು ಬಾಟ್ಲಿಯಲ್ಲಿ ಹಾಲು ತುಂಬಿಕೊಂಡು ತಂದುಕೊಟ್ಟಿದ್ದಾರೆ. ಎಎಸ್‍ಐ ಅವರು ಮಹಿಳೆಗೆ ಹಾಲು ತಂದು ಕೊಡುತ್ತಿರುವಾಗ ಅಲ್ಲೇ ಇದ್ದ ಇತರ ಪ್ರಯಾಣಿಕರು ಫೋಟೋ ಕ್ಲಿಕ್ಕಿಸಿದ್ದಾರೆ. ಈ ಫೋಟೋವನ್ನು ಡಿಆರ್‍ಎಂ ರಾಂಚಿ ಎಂಬ ಟ್ವಿಟ್ಟರ್ ಅಕೌಂಟಿನಿಂದ ಟ್ವೀಟ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಮಹಿಳಾ ಪೊಲೀಸ್ ಮಾನವೀಯತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Advertisement
Advertisement
ಇದೇ ವರ್ಷದ ಮೇ ತಿಂಗಳಲ್ಲಿ ಆರ್‍ಪಿಎಫ್ ಕಾನ್‍ಸ್ಟೇಬಲ್ ಒಬ್ಬರು ಚಲಿಸುತ್ತಿದ್ದ ಶ್ರಮಿಕ್ ರೈಲಿನ ಹಿಂದೆಯೇ ಓಡಿ 4 ತಿಂಗಳ ಮಗುವಿಗೆ ಹಾಲಿನ ಪ್ಯಾಕೆಟ್ ಕೊಟ್ಟಿದ್ದರು. ರೈಲು ಭೋಪಾಲ್ ನಿಲ್ದಾಣದಲ್ಲಿ ನಿಂತಿದ್ದಾಗ ಮಗುವಿನ ಫೋಷಕರು ಹಾಲು ನೀಡಿ ಮಗುವಿಗೆ ಸಹಾಯ ಮಾಡುವಂತೆ ಕಾನ್‍ಸ್ಟೇಬಲ್ ಬಳಿ ಕೇಳಿಕೊಂಡಿದ್ದರು. ಹೀಗೆ ಅಂಗಡಿಗೆ ತೆರಳಿ ಪ್ಯಾಕೆಟ್ ಹಾಲು ತೆಗೆದುಕೊಂಡು ಬರುತ್ತಿದ್ದಾಗ ರೈಲು ಚಲಿಸಲು ಆರಂಭಿಸಿದೆ.
ರೈಲು ಚಲಿಸುತ್ತಿರುವುದನ್ನು ಅರಿತ ಕಾನ್ಸ್ ಸ್ಟೇಬಲ್ ಅದರ ಹಿಂದೆ ಓಡಿ ಹೋಗಿ ಹೇಗೋ ಮಗುವಿನ ಪೋಷಕರಿಗೆ ಹಾಲನ್ನು ಒಪ್ಪಿಸಿದ್ದರು. ಈ ವೇಳೆ ಕಾನ್ಸ್ ಸ್ಟೇಬಲ್ ಧೈರ್ಯ ಹಾಗೂ ಮನವೀಯತೆಗೆ ಜನ ಪ್ರಶಂಸೆ ವ್ಯಕ್ತಪಡಿಸಿದ್ದರು.
2/2 सुशीला बड़ाईक से अपने 4 माह के पुत्र की भूखा होने की बात कही तथा बच्चे के लिए दूध मिलने हेतु अनुरोध किया. यह सुनते ही श्रीमती सुशीला बड़ाईक ने ममता, कर्तव्यनिष्ठा तथा समयसूचकता का परिचय देते हुए फौरन अपने घर जाकर उस बच्चे के लिए दूध लेकर आई एवं उस महिला यात्री को दिया.
— DRM Ranchi (@drmrnc) June 14, 2020