– ಬೆಂಗಳೂರಿಗೆ ಬರುವಂತಿಲ್ಲ, ಬೆಂಗಳೂರಿನಿಂದ ಹೋಗುವಂತಿಲ್ಲ
ಬೆಂಗಳೂರು: ರೈತ ವಿರೋಧಿ ಮಸೂದೆ ರಣಕಹಳೆಯನ್ನು ಮೊಳಗಿಸಿರುವ ಪರಿಣಾಮ ಇಂದು ಕೊರೊನಾ ಲಾಕ್‍ಡೌನ್ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ಬಂದ್ ಆಗುತ್ತಿದೆ. ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ರೈತ ಸಂಘಟನೆಗಳು ಬೀದಿಗೆ ಇಳಿದಿದ್ದು, ಬೆಂಗಳೂರು ಸೇರಿ ಇಡೀ ರಾಜ್ಯಾದ್ಯಂತ ಹೆದ್ದಾರಿಗಳನ್ನು ಬಂದ್ ಮಾಡಲಾಗುತ್ತಿದೆ.
Advertisement
ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಾಜ್ಯ ಹೆದ್ದಾರಿಗಳನ್ನು ರೈತರು ಬಂದ್ ಮಾಡಿ ಬೃಹತ್ ಪ್ರತಿಭಟನೆಗೆ ರೈತರು ಸಜ್ಜಾಗಿದ್ದಾರೆ. ಅಧಿಕೃತವಾಗಿ ರಾಜ್ಯದಲ್ಲಿ ಬಂದ್ ಸ್ಥಿತಿ ಇಲ್ಲಿದ್ದರೂ, ರಸ್ತೆಗಳು ಬಂದ್ ಆಗೋ ಕಾರಣ ಸಂಚಾರದಲ್ಲಿ ಭಾರೀ ವ್ಯತ್ಯಯ ನಿರೀಕ್ಷೆ ಇದೆ. ಇತ್ತ ರೈತರಿಂದ ಹೆಚ್ಚು ಸಮಯ ರಸ್ತೆ ಬಂದ್ ಆದರೆ ಉಂಟಾಗುವ ಸಂಚಾರ ವ್ಯತ್ಯಯವನ್ನು ತಡೆಯಲು ಬೀಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ.
Advertisement
Advertisement
ರಾಜ್ಯ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ಸೇರಿದಂತೆ ಮೈಸೂರು ಬ್ಯಾಂಕ್ ಸರ್ಕಲ್, ಏರ್‍ಪೋರ್ಟ್ ರಸ್ತೆ, ಗೊರಗುಂಟೆ ಪಾಳ್ಯ, ನೆಲಮಂಗಲ ಟೋಲ್, ತ್ತಿಬೆಲೆ ಟೋಲ್, ದೇವನಹಳ್ಳಿ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಟೋಲ್, ವಿಧಾನಸೌಧ ಅಸುಪಾಸು, ಚಿಕ್ಕಪೇಟೆ-ಕೆ.ಆರ್. ಮಾರುಕಟ್ಟೆ ಪ್ರದೇಶಗಳ ರಸ್ತೆಗಳು ಲಾಕ್ ಆಗುವ ಸಾಧ್ಯತೆ ಇದೆ. ಇದರೊಂದಿಗೆ ನಗರವನ್ನು ಸಂಪರ್ಕಿಸುವ ಹೆದ್ದಾರಿಗಳು ಬಂದ್ ಆಗಲಿದ್ದು, ಬೆಂಗಳೂರು- ಮೈಸೂರು ಹೆದ್ದಾರಿ, ಬೆಂಗಳೂರು- ತುಮಕೂರು ಹೆದ್ದಾರಿ, ಬೆಂಗಳೂರು- ಹೊಸೂರು ಹೆದ್ದಾರಿ, ಬೆಂಗಳೂರು- ಹಾಸನ ಹೆದ್ದಾರಿ, ಓಲ್ಡ್ ಮದ್ರಾಸ್ ರೋಡ್, ಬೆಂಗಳೂರು-ಹೊಸಕೋಟೆ, ರೋಡ್ ಹಾಗೂ ಬೆಂಗಳೂರು-ದೇವನಹಳ್ಳಿ ರೋಡ್ ಲಾಕ್ ಆಗಲಿದೆ.
Advertisement
ರಾಜ್ಯದಾದ್ಯಂತ ಮಸೂದೆ ವಿರೋಧಿಸಿ ರೈತರು ಪ್ರತಿಭಟನೆ ಮಾಡಲಿದ್ದು, ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಬಂದ್ ಆಗಲಿದೆ. ತಾಲೂಕು ಕೇಂದ್ರಗಳಲ್ಲೂ ರಸ್ತೆಗಳನ್ನು ಬಂದ್ ಮಾಡಲು ನಿರ್ಧಾರ ಮಾಡಲಿದ್ದು, ಗ್ರಾಮಗಳಲ್ಲೂ ರಸ್ತೆ ತಡೆದು ರೈತರಿಂದ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇತ್ತ ರೈತ ವಿರೋಧಿ ಮಸೂದೆ ವಿರುದ್ಧ ರೈತ ಮುಖಂಡರು ಗುಡುಗಿದ್ದು, ಕೋಡಿಹಳ್ಳಿ ಚಂದ್ರಶೇಖರ್ ಅವರು ರೈತರ ಹೋರಾಟ ಪ್ರಶ್ನಿಸುತ್ತಿರುವ ಸಚಿವ ಬಿಸಿ ಪಾಟೀಲ್, ಸಿಟಿ ರವಿ ಹಾಗೂ ಸೋಮಶೇಖರ್ ಮೇಲೆ ಫುಲ್ ಗರಂ ಆಗಿದ್ದಾರೆ. ನಿಮ್ಮ ಪ್ರಧಾನಿ ಹೇಳಿದ್ದನ್ನು ಸಮರ್ಥಿಸಿಕೊಳ್ಳಿ ಆದರೆ ರೈತರಿಗೆ ಅನುಕೂಲ ಅಂತ ಹೇಳಬೇಡಿ. ಸಿಟಿ ರವಿ ಅವರೇ ಪ್ರೊಫೆಸರ್ ನಂಜುಂಡ ಸ್ವಾಮಿ ಹೇಳಿದ್ದೇನು ಎಂಬುದೇ ನಿಮಗೆ ಅರ್ಥ ಆಗಿಲ್ಲ. ಎಲ್ಲರೂ ಸೇರಿಕೊಂಡು ರೈತರ ಕಥೆ ಮುಗಿಸಲು ಹೊರಟಿದ್ದೀರಿ ಎಂದು ಕಿಡಿಕಾರಿದ್ದರು. ಆದರೆ ನಾಳೆ ರಸ್ತೆ ನಡೆಸೋದಕ್ಕೆ ತಮ್ಮ ಬೆಂಬಲ ಇಲ್ಲ. ಸೋಮವಾರ ಬಂದ್‍ಗೆ ನಮ್ಮ ಬೆಂಬಲ ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿ ತರಲು ಉದ್ದೇಶಿಸಿರುವ ಕೃಷಿ ಮಸೂದೆ ವಿರೋಧಿಸಿ 2000ಕ್ಕೂ ಹೆಚ್ಚು ರೈತ ಸಂಘಟನೆಗಳು ದೇಶದ್ಯಾಂತ ಪ್ರತಿರೋಧ್ ದಿವಸ್ ಹಮ್ಮಿಕೊಂಡಿದ್ದಾರೆ. ರಾಜ್ಯದಲ್ಲಿಯೂ ಇದರ ಪರಿಣಾಮ ಇರಲಿದೆ.