– ನಮಗೆ ಯಾವುದೇ ರೀತಿಯ ಕ್ರೆಡಿಟ್ ಬೇಕಿಲ್ಲ, ನೀವೇ ಪಡೆಯಿರಿ
– ರೈತರ ಹೆಸರಿನಲ್ಲಿ ರಾಜಕೀಯ ಮಾಡಬೇಡಿ
ನವದೆಹಲಿ: ರೈತರ ಪ್ರತಿಭಟನೆ ಜೋರಾಗುತ್ತಿದ್ದಂತೆ ಈಗ ಕೃಷಿ ಕಾಯ್ದೆಯನ್ನು ಸಮರ್ಥಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರೇ ಅಖಾಡಕ್ಕೆ ಇಳಿದಿದ್ದಾರೆ. ಹಸಿ ಸುಳ್ಳುಗಳನ್ನು ಹೇಳುವ ಮೂಲಕ ರೈತರನ್ನು ದಾರಿ ತಪ್ಪಿಸಲಾಗುತ್ತಿದೆ. ಕಾನೂನುಗಳಲ್ಲಿ ಯಾವ ತೊಡಕಿದೆ ಹೇಳಿ, ಈ ಕುರಿತು ಚರ್ಚೆ ನಡೆಸೋಣ ಸುಖಾಸುಮ್ಮನೆ ಆರೋಪ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
With folded hands, PM Modi urges Opposition not to mislead farmers
Read @ANI Story | https://t.co/pCoIpnIq8G pic.twitter.com/AQsKZQ61px
— ANI Digital (@ani_digital) December 18, 2020
Advertisement
ವಿಡಿಯೋ ಕಾನ್ಫರೆನ್ಸ್ ಮೂಲಕ ಮಧ್ಯಪ್ರದೇಶ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರ ಕಾನೂನುಗಳನ್ನು ರಾತ್ರೋರಾತ್ರಿ ತರಲಾಗಿಲ್ಲ ಕಳೆದ 22 ವರ್ಷಗಳಿಂದ ಎಲ್ಲ ಸರ್ಕಾರಗಳು ಈ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿವೆ. ರೈತ ಸಂಘಟನೆಗಳು, ಕೃಷಿ ತಜ್ಞರು, ಆರ್ಥಿಕ ತಜ್ಞರು, ವಿಜ್ಞಾನಿಗಳು ಹಾಗೂ ರೈತರು ಈ ಕುರಿತು ಚರ್ಚೆ ನಡೆಸಿದ್ದಾರೆ. ಈಗ ಕಾನೂನುಗಳನ್ನು ವಿರೋಧಿಸುತ್ತಿರುವವರು ಹಿಂದೆ ಚುನಾವಣೆಯ ಸಂದರ್ಭದಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದರು ಎಂದು ಹೇಳಿ ವಿಪಕ್ಷಗಳಿಗೆ ತಿರುಗೇಟು ನೀಡಿದರು.
Advertisement
“The numbers I will provide you with, will clear everything up regarding the MSP,” says PM Modi at the Kisan Kalyan event pic.twitter.com/cvnYtXuHq9
— ANI (@ANI) December 18, 2020
Advertisement
ಈಗ ಆ ಪಕ್ಷಗಳಿಗೆ ತುಂಬಾ ನೋವಾಗುತ್ತಿದೆ. ನಾವು ಮಾಡದ್ದನ್ನು, ಮೋದಿ ಹೇಗೆ ಮಾಡಿದರು ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಆದರೆ ಈ ಕಾನೂನುಗಳನ್ನು ಜಾರಿಗೆ ತಂದಿದ್ದಕ್ಕೆ ನಮಗೆ ಯಾವುದೇ ಕ್ರೆಡಿಟ್ ಬೇಕಿಲ್ಲ. ಕ್ರೆಡಿಟ್ ನೀವೇ ಇಟ್ಟುಕೊಳ್ಳಿ. ನಿಮ್ಮ ಸ್ವಂತ ಪ್ರಣಾಳಿಕೆಗೆ ನಾನೇ ಕ್ರೆಡಿಟ್ ನೀಡುತ್ತೇನೆ. ನನಗೆ ಕ್ರೆಡಿಟ್ ಬೇಕಿಲ್ಲ. ನನಗೆ ರೈತರ ಬೆಳವಣಿಗೆ, ಅಭಿವೃದ್ಧಿ ಮುಖ್ಯ. ರೈತರನ್ನು ದಾರಿ ತಪ್ಪಿಸಬೇಡಿ ಎಂದು ಹರಿಹಾಯ್ದರು.
Advertisement
Political parties should stop misguiding farmers. It’s been 6-7 months since Farm laws were implemented. But now suddenly, games are being played to plough one’s own political land through a web of lies: PM Modi addressing Kisan Kalyan event in MP through video-conferencing https://t.co/CUsXWvFVGu pic.twitter.com/BzyumYLLo0
— ANI (@ANI) December 18, 2020
ನಮ್ಮ ಸರ್ಕಾರ ಬಂದಮೇಲೆ ವಿವಿಧ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತರಲಾಗಿದೆ. ಅಲ್ಲದೆ ಯೂರಿಯಾ ಗೊಬ್ಬರಕ್ಕಾಗಿ ರೈತರು ಸರತಿಯಲ್ಲಿ ನಿಂತು ಲಾಠಿ ಏಟು ತಿಂತಿದ್ದರು. ಈಗ ಯೂರಿಯಾ ನೇರವಾಗಿ ರೈತರ ಹೊಲಗಳಿಗೆ ತಲುಪುತ್ತಿದೆ. ವ್ಯವಸ್ಥಿತವಾಗಿ ಯೂರಿಯಾ ಗೊಬ್ಬರ ವಿತರಿಸಲು ಹಾಗೂ ಭ್ರಷ್ಟಾಚಾರ ತೊಲಗಿಸಲು ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
Those who’ve started this movement in the name of farmers, when they had a chance to run the govt or become part of govt, what they did back then, the country needs to remember. Today, I want to bring their deeds in front of countrymen & farmers: PM Modi at Kisan Kalyan event https://t.co/sTfBflW1BA pic.twitter.com/mFJJ1BoRpd
— ANI (@ANI) December 18, 2020
ರೈತರ ಕಾನೂನುಗಳನ್ನಿಟ್ಟುಕೊಂಡು ಅವರನ್ನು ದಾರಿ ತಪ್ಪಿಸಿ, ಪ್ರಚೋದಿಸಲಾಗುತ್ತಿದೆ. ಕಾನೂನುಗಳ ಬಗ್ಗೆ ನಿಮ್ಮಲ್ಲಿ ಯಾವುದೇ ರೀತಿಯ ಸಂಶಯ ಸಮಸ್ಯೆ ಇದ್ದರೆ ಚರ್ಚಿಸೋಣ. ಯಾವುದೇ ವಿಚಾರದ ಕುರಿತು ಚರ್ಚಿಸಲು ನಾವು ಸಿದ್ಧ. ಆದರೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ರೈತರ ದಾರಿ ತಪ್ಪಿಸಿ ನಿಮ್ಮ ಬೇಳೆ ಬೇಯಿಸಿಕೊಳ್ಳಲು ನೋಡಬೇಡಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
If we’d to remove MSP, why would we implement Swaminathan Commission report? Our govt is serious about the MSP, that’s why we declare it before sowing season every year. This makes it easy for farmers to make calculations: PM Modi virtually addressing Kisan Kalyan event in Raisen https://t.co/Y6s3GG1f3H pic.twitter.com/kiniQGKtVS
— ANI (@ANI) December 18, 2020
ಈ ದಿನದವರೆಗೆ ತಮ್ಮ ವೈಯಕ್ತಿಕ ಲಾಭಕ್ಕಾಗಿ ರೈತರನ್ನು ಬಳಸಿಕೊಳ್ಳುತ್ತಿದ್ದಾರೆ. ರಾಜಕೀಯ ನೆಲೆಯನ್ನು ಕಳೆದುಕೊಂಡ ಬಳಿಕ ಕೇವಲ ರಾಜಕೀಯಕ್ಕಾಗಿ ಮಾತ್ರ ನಿಮ್ಮನ್ನು ಅವರು ಬಳಸಿಕೊಳ್ಳುತ್ತಿದ್ದಾರೆ. ನಿಮ್ಮ ಬಗ್ಗೆ ಯಾವುದೇ ನಿಜವಾದ ಕಾಳಜಿ ಅವರಿಗಿಲ್ಲ. ಸ್ವಾಮಿನಾಥನ್ ಸಮಿತಿಯ ವರದಿ ಜಾರಿಯಾಗದಿರುವುದೇ ಇದಕ್ಕೆ ಉದಾಹರಣೆ ಎಂದರು.
Swaminathan Commission report is biggest proof of how ruthless these people can be. These people sat on Swaminathan Commission report recommendations for 8 long years…They ensured that their govt doesn’t have to spend much on farmers, so they kept report under wraps: PM Modi https://t.co/Y6s3GG1f3H pic.twitter.com/MJABl3onlj
— ANI (@ANI) December 18, 2020
ಮಧ್ಯಪ್ರದೇಶದ ಚುನಾವಣೆ ವೇಳೆ ದೊಡ್ಡ ಭರವಸೆಗಳನ್ನು ನೀಡಿದ್ದರು. ರೈತರ ಸಾಲ ಮನ್ನಾ ಮಾಡುವುದಾಗಿ ಸಹ ತಿಳಿಸಿದ್ದರು. ಆದರೆ ಚುನಾವಣೆ ನಂತರ ಏನಾಯಿತು? ಮತದಾನದ ಬಳಿಕ ಯಾವ ರೀತಿಯ ನೆಪಗಳನ್ನು ಒಡ್ಡಿದರು. ಎಲ್ಲರಿಗಿಂತ ಮಧ್ಯಪ್ರದೇಶದ ರೈತರೇ ಅವರ ಬಗ್ಗೆ ಚೆನ್ನಾಗಿ ತಿಳಿದಿದ್ದೀರಿ. ಸುಳ್ಳು ಹೇಳುವುದು ಹೊರತುಪಡಿಸಿ ಅವರು ಏನನ್ನೂ ಮಾಡುವುದಿಲ್ಲ. ಭಯಪಡಿಸುವ ಮೂಲಕ ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.