– ಕಾವೇರಿಯನ್ನು ಕಣ್ಣಲ್ಲೇ ತುಂಬ್ಕೊಂಡಿದ್ದಾರೆ
– ಪತ್ನಿಯ ಕಾಲೆಳೆದ ಅಭಿಮನ್ಯು
ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಮದುವೆಯಾದ ನಂತರ ಸೋಶಿಯಲ್ ಮೀಡಿಯಾದಲ್ಲಿ ಪತ್ನಿಯೊಂದಿಗಿನ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಪತ್ನಿ ರೇವತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಇತ್ತೀಚೆಗಷ್ಟೆ ಅನುಶ್ರೀ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ನಿಖಿಲ್, ತಮ್ಮ ಪತ್ನಿ ರೇವತಿಯವರನ್ನು ಹೊಗಳಿದ್ದಾರೆ. ನನ್ನ ಪತಿ ನನಗೆ ಹೊಸಬರು ಎಂದು ಅನ್ನಿಸುತ್ತಿಲ್ಲ. ನಾವಿಬ್ಬರಿಗೂ ಸುಮಾರು ವರ್ಷಗಳ ಪರಿಚಯವಿದೆ ಎನ್ನಿಸುತ್ತದೆ. ನನ್ನ ಪತ್ನಿ ನನಗಿಂತಲೂ ನೂರು ಪಾಲು ಮಾನವೀಯತೆ ಉಳ್ಳವರು. ಅವರ ಮನಸ್ಸು ಮಗುತರ. ಅವರನ್ನು ಪತ್ನಿಯಾಗಿ ಪಡೆಯಲು ನಾನು ಪುಣ್ಯ ಮಾಡಿದ್ದೇನೆ ಎಂದರು.
ನನ್ನ ತಂದೆ-ತಾಯಿ ನನಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಅದೇ ರೀತಿ ನನ್ನ ತಂದೆ-ತಾಯಿಯೊಂದಿಗೆ ಚೆನ್ನಾಗಿ ಹೊಂದಿಕೆಯಾಗುವ ಹುಡುಗಿ ಸಿಕ್ಕರೆ ಸಾಕು ಎಂದುಕೊಂಡಿದ್ದೆ. ಆದರೆ ಅದಕ್ಕಿಂತಲೂ ಮಿಗಿಲಾದವರು ಸಿಕ್ಕಿದ್ದಾರೆ. ಯಾವುದೇ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ರೇವತಿ ಬಹಳ ಮೃದು ಹೃದಯಿ, ಆದರೆ ಸುಮ್ಮಸುಮ್ಮನೆ ಅಳುತಿರುತ್ತಾರೆ. ಕ್ಯೂಟ್ ಮಗುತರ ಅಳುತಿರುತ್ತಾರೆ. ಕಾವೇರಿಯನ್ನು ಕಣ್ಣಲ್ಲೇ ತುಂಬಿಕೊಂಡಿದ್ದಾರೆ ಎಂದು ನಿಖಿಲ್ ತಮ್ಮ ಪತ್ನಿ ರೇವತಿ ತಮಾಷೆಗಾಗಿ ಕಾಳೆದಿದ್ದಾರೆ.
ಕುರುಕ್ಷೇತ್ರ ಸಿನಿಮಾವನ್ನು ರೇವತಿ ನೋಡಿರಲಿಲ್ಲ. ಅವರ ತಂದೆ-ತಾಯಿ ನೋಡಿದ್ದರು. ಇತ್ತೀಚೆಗೆ ನಾನು ಕುರುಕ್ಷೇತ್ರ ಸಿನಿಮಾ ತೋರಿಸಿದೆ. ಈ ವೇಳೆ ಅಭಿಮನ್ಯು ಸಾವನ್ನಪ್ಪಿದ ನಂತರ ಜೋರಾಗಿ ಅತ್ತರು. ನನ್ನ ಪತ್ನಿ ನನ್ನ ಫ್ಯಾನ್ ಅಲ್ಲ, ನನ್ನ ಅತ್ತೆಯವರು ನನ್ನ ಫ್ಯಾನ್, ಅವರು ಸಿನಿಮಾಗಳನ್ನು ನೋಡಿದ್ದಾರೆ. ರೇವತಿ ಕೆಲವು ಸಿನಿಮಾಗಳನ್ನಷ್ಟೆ ನೋಡಿದ್ದಾರೆ ಎಂದು ನಿಖಿಲ್ ಹೇಳಿದರು.
ನನ್ನ ಪತ್ನಿಗೆ ಸ್ವಚ್ಛತೆಯ ಒಸಿಡಿ (ಸ್ವಚ್ಛತೆಯ ಗೀಳು), ಎಲ್ಲವೂ ಸ್ವಚ್ಛವಾಗಿರಬೇಕು ಎಂದುಕೊಳ್ಳುತ್ತಾರೆ. ನಾನು ನನ್ನ ರೂಮಿಗೆ ಬಂದರೆ ತುಂಬಾ ವಸ್ತುಗಳು ಹರಡುತ್ತಿದ್ದವು. ಮದುವೆಗೆ ಮುಂಚೆ ನನ್ನ ರೂಂ ಅನ್ನು ವರ್ಷಕ್ಕೆ ಒಮ್ಮೆ ಮಾತ್ರ ಕ್ಲೀನ್ ಮಾಡುತ್ತಿದ್ದೆ. ಆದರೆ ಈಗ ಸಾಕಷ್ಟು ಬದಲಾಗಿದ್ದೀನಿ. ಆದರೆ ನನ್ನ ಪತ್ನಿ ರೇವತಿ ಅವರಿಗೆ ಸಾಲದಂತೆ, ಇನ್ನೂ ಬದಲಾಗಬೇಕೆಂತೆ ಎಂದು ನಿಖಿಲ್ ನಕ್ಕರು.
ರೇವತಿ ಅವರು ಅಡುಗೆ ಮಾಡುತ್ತಾರಂತೆ, ಆದರೆ ನನಗೆ ಅದರ ಬಗ್ಗೆ ಗೊತ್ತಿಲ್ಲ. ಈವರೆಗೂ ಅವರು ಅಡುಗೆ ಮಾಡಿದ್ದು ನೋಡಿಲ್ಲ ನಾನು. ಒಮ್ಮೆ ಬಿರಿಯಾನಿ ಏನೋ ಮಾಡಿದ್ದರಂತೆ. ಆದರೆ ಆ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದು ಪತ್ನಿಯ ಬಗ್ಗೆ ನಿಖಿಲ್ ಮನಬಿಚ್ಚಿ ಮಾತನಾಡಿದ್ದಾರೆ.