ದಾವಣಗೆರೆ: ಕೋವಿಡ್ ಕೇರ್ ಸೆಂಟರ್ ನಲ್ಲಿ ವಾಸ್ತವ್ಯ ಹೂಡಿ ಸೋಂಕಿತರ ಜೊತೆ ಕಾಲ ಕಳೆದಿದ್ದ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಆರೋಗ್ಯ ಸಚಿವರಾಗಬೇಕೆಂದು ಕೊರೊನಾ ಸೋಂಕಿತನೊಬ್ಬ ಪಟ್ಟು ಹಿಡಿದ ಘಟನೆ ದಾವಣಗೆರೆಯ ಹೊನ್ನಾಳಿ ಪಟ್ಟಣದ ಅರಬಗಟ್ಟೆ ಕೊವೀಡ್ ಕೇರ್ ಸೆಂಟರ್ ನಲ್ಲಿ ನಡೆದಿದೆ.
Advertisement
ಹೊನ್ನಾಳಿ ತಾಲೂಕಿನಲ್ಲಿ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ರೇಣುಕಾಚಾರ್ಯರವರೇ ಆರೋಗ್ಯ ಸಚಿವರಾಗಬೇಕೆಂದು ಸೋಂಕಿತನೋರ್ವ ಪಟ್ಟು ಹಿಡಿದಿದ್ದಾನೆ. ಕೊರೊನಾ ಬಂದ ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಇದ್ದು ಸೋಂಕಿತರಿಗೆ ಧೈರ್ಯ ತುಂಬಿದ್ದೀರಿ, ನಿಮ್ಮನ್ನು ಆರೋಗ್ಯ ಸಚಿವರನ್ನಾಗಿ ಮಾಡಿದರೆ ಇಡೀ ರಾಜ್ಯಕ್ಕೆ ಒಳ್ಳೆಯ ಸೇವೆ ಸಿಗುತ್ತದೆ ಎಂದು ಸೋಂಕಿತ ಅಭಿಪ್ರಯಾಪಟ್ಟಿದ್ದಾರೆ. ಇದನ್ನೂ ಓದಿ: ಕೆಲವರು ಸೂಟು ಹೊಲಿಸಿ ಸಿಎಂ ಆಗುವ ತಿರುಕನ ಕನಸು ಕಾಣ್ತಿದ್ದಾರೆ: ರೇಣುಕಾಚಾರ್ಯ
Advertisement
Advertisement
ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆದು ಸೋಂಕಿನಿಂದ ಗುಣಮುಖರಾದವರನ್ನು ಬೀಳ್ಕೋಡುಗೆ ನೀಡಿದ ರೇಣುಕಾಚಾರ್ಯರವರಿಗೆ ಮನೆಗೆ ತೆರಳುವ ಮುನ್ನ ಮಹಿಳೆಯರು ಒಂದು ದಿನ ನೀವು ಕೋವಿಡ್ ಕೇರ್ ಸೆಂಟರ್ ನಲ್ಲಿ ಇಲ್ಲ ಎಂದರೆ ಮನೆಯಲ್ಲಿ ಯಜಮಾನನಿಲ್ಲದಂತೆ ಆಗುತ್ತದೆ ಎಂದು ರೇಣುಕಾಚಾರ್ಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಗುಣಮುಖರಾದವರನ್ನು ತಮ್ಮ ಅಂಬ್ಯುಲೆನ್ಸ್ ನಲ್ಲೇ ಕಳುಹಿಸಿಕೊಟ್ಟ ರೇಣುಕಾಚಾರ್ಯರವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕೋವಿಡ್ ಕೇರ್ ಸೆಂಟರ್ ಬಿಟ್ಟು ಹೋಗುತ್ತಿರುವಾಗ ಗುಣಮುಖರಾದವರು ಕಣ್ಣೀರು ಹಾಕುತ್ತಾ ಮನೆಯತ್ತ ತೆರಳಿದ ಪ್ರಸಂಗವೂ ನಡೆದಿದೆ.
Advertisement