ಬೆಂಗಳೂರು: ಮಾಜಿ ಬಿಜೆಪಿ ಪಾಲಿಕೆ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಸೂತ್ರಧಾರನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಸೆಲ್ವರಾಜ್ ಪೂಬಾಳನ್ ಅಲಿಯಾಸ್ ಮಾಸ್ಟರ್ ಉರುಫ್ ಕ್ಯಾಪ್ಟನ್ ಬಂಧಿತ ಆರೋಪಿ. ಆರೋಪಿಯನ್ನು ಈಜಿಪುರದ ಸರ್ಕಾರಿ ಶಾಲೆಯ ಬಳಿ ಪೊಲೀಸರು ಬಂಧಿಸಿದ್ದಾರೆ.
Advertisement
ಸೆಲ್ವರಾಜ್ ಪೀಟರ್ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ. ರೇಖಾ ಕೊಲೆ ಸಂಬಂಧ ಮಾರ್ಚ್ ನಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದ. ರೇಖಾ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಲಾ ಮನೆಯಲ್ಲಿ ನಡೆದಿದ್ದ ಸಭೆಯಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಬಹಿರಂಗವಾಗಿದೆ.
Advertisement
Advertisement
ರೇಖಾ ಕದಿರೇಶ್ ಹತ್ಯೆಗೆ ಹೋದಾಗ ಯಾರು ಏನೇನು ಮಾಡಬೇಕು? ಹತ್ಯೆ ಮಾಡಿದ ಬಳಿಕ ಆರೋಪಿಗಳು ಪರಾರಿಯಾಗಲು ಏನು ಮಾಡಬೇಕು ಎಂಬುದರ ಬಗ್ಗೆ ಪ್ಲಾನ್ ಕೊಟ್ಟಿದ್ದ. ಇದನ್ನೂ ಓದಿ: ಬೇರೆ ಬೇರೆಯವರ ಜೊತೆ ಮದ್ವೆಗೆ ಸಿದ್ಧತೆ – ಅವಳಿ ಸಹೋದರಿಯರು ಆತ್ಮಹತ್ಯೆ
Advertisement
ಐದು ಜನ ಆರೋಪಿಗಳು ಎರಡು ತಂಡಗಳಾಗಿ ಹೋಗಿ ಕೃತ್ಯ ಎಸಗಬೇಕು. ಪರಾರಿಯಾದ ಬಳಿಕ ಹಣಕಾಸಿನ ನೆರವು ಪಡೆಯಲು ಯಾರನ್ನು ಸಂಪರ್ಕಿಸಬೇಕು ಎಂಬುದರ ಬಗ್ಗೆ ಆರೋಪಿಗಳಿಗೆ ಮಾಹಿತಿ ಕೊಟ್ಟ ವಿಚಾರ ತನಿಖೆಯ ವೇಳೆ ಬಹಿರಂಗವಾಗಿದೆ.
ಈ ಹಿಂದೆ ಪೀಟರ್ ಮತ್ತು ಸೆಲ್ವರಾಜ್ ಮಾಸ್ಟರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಆರೋಪಿ ಸೆಲ್ವರಾಜ್ ಗೆ ಕಾಟನ್ ಪೇಟೆ, ಶ್ರೀರಾಮಪುರ, ಈಜಿಪುರ, ಆಸ್ಟಿನ್ ಟೌನ್ ನಲ್ಲಿ ನಡೆಯುವ ಕ್ರೈಮ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತಿತ್ತು.