ಹುಡುಗಿಯೊಬ್ಬಳು ಕೆಲಸಕ್ಕೆಂದು ಅರ್ಜಿಸಲ್ಲಿಸುವಾಗ ತನ್ನ ರೆಸ್ಯೂಮ್‍ನಲ್ಲಿ ಟೆಂಪ್ಲೇಟ್ ಫೋಟೋ ಹಾಕುವುದನ್ನು ಮರೆತು ಟ್ರೋಲ್ ಆಗಿದ್ದಾಳೆ.
ಪ್ರತಿಯೊಬ್ಬರು ಕೆಲಸಕ್ಕೆ ಸೇರುವ ಮೊದಲು ರೆಸ್ಯೂಮ್‍ನ್ನು ರೆಡಿ ಮಾಡಿಕೊಂಡು ಅದರಲ್ಲಿ ಯಾವುದೇ ರೀತಿಯ ದೋಷಗಳಿರದೇ ಕೆಲಸಕ್ಕೆ ಸೇರುವ ಸಂಸ್ಥೆಗೆ ಕಳುಹಿಸುವುದು ಮುಖ್ಯವಾದ ಅಂಶ. ಆದರೆ ಇಲ್ಲೊಬ್ಬಳು ಹುಡುಗಿ ತನ್ನೆಲ್ಲ ಸವಿವರವನ್ನು ದಾಖಲಿಸಿ ಮೊದಲ ಪುಟದಲ್ಲಿ ತನ್ನ ಫೋಟೋ ಹಾಕುವ ಬದಲು ಟೆಂಪ್ಲೇಟ್‍ನಲ್ಲಿದ್ದ ಚಿತ್ರವನ್ನೇ ಹಾಕಿ ಪೇಚಿಗೆ ಸಿಲುಕಿಕೊಂಡಿದ್ದಾಳೆ.
ಮರಿಸ್ಸಾ ಕೆಲಸಕ್ಕೆಂದು ರಿಸ್ಯೂಮ್ ಒಂದನ್ನು ತಯಾರಿಸಿದ್ದು ಅದರಲ್ಲಿ ತನ್ನೆಲ್ಲ ವಿವರವನ್ನು ಪೂರ್ತಿಯಾಗಿ ನಮೂದಿಸಿದ್ದಾಳೆ. ಆದರೆ ಮೊದಲ ಪುಟದಲ್ಲಿ ತನ್ನ ಛಾಯಚಿತ್ರದ ಬದಲು ಟೆಂಪ್ಲೇಟ್‍ನಲ್ಲಿದ್ದ ಹುಡುಗ ಡಾಕ್ಟರ್‍ನ ಚಿತ್ರವನ್ನೇ ಹಾಕಿ ಅರ್ಜಿ ಸಲ್ಲಿಸಿದ್ದಾಳೆ. ನಂತರ ತನ್ನ ತಪ್ಪನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ನೀವು ನಿಮ್ಮ ಕೆಟ್ಟ ದಿನಗಳನ್ನು ಒಮ್ಮೆ ಯೋಚಿಸಿ. ನಾನೂ ರೆಸ್ಯೂಮ್‍ನಲ್ಲಿ ಟೆಂಪ್ಲೇಟ್ ಫೋಟೋವನ್ನು ಬದಲಾಯಿಸದೆ ಕಳುಹಿಸಿದ್ದೆ ಎಂದಿದ್ದಾಳೆ.
ಮರಿಸ್ಸಾ ಈ ರೀತಿ ಪೋಸ್ಟ್ ಹಾಕುತ್ತಿದ್ದಂತೆ ನೆಟ್ಟಿಗರು ಆಕೆಯನ್ನು ಕಾಲೆಳೆದುಕೊಂಡಿದ್ದಾರೆ. ರೆಸ್ಯೂಮ್ ನೋಡಿದ ಹೆಚ್‍ಆರ್ ಒಮ್ಮೆ ಹುಡುಗಿ ಹುಡುಗನಾಗಿರುವ ಫೋಟೋ ನೋಡಿ ಗಲಿಬಿಲಿಯಾಗಿರಬಹುದು ಎಂದು ಒಬ್ಬ ಕಮೆಂಟ್ ಮಾಡಿದ್ದರೆ, ಇನ್ನೊಬ್ಬ ಈ ರೀತಿ ಆಗಬಾರದು, ನನಗೆ 10 ನಿಮಿಷ ನಗೆ ತಡೆಯಲು ಸಾಧ್ಯವಾಗಿಲ್ಲ ಎಂದು ಬರೆದುಕೊಂಡಿದ್ದಾನೆ.