ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದಾಗಿ ಹಲವಾರು ಮಂದಿ ಸಂಕಷ್ಟಕ್ಕೆ ಸಿಲುಕಿಕೊಂಡು ಪರದಾಡುರತ್ತಿದ್ದಾರೆ. ಕೆಲವರು ಆಕ್ಸಿಜನ್, ಬೆಡ್ ಸಿಗದೇ ಕಂಗಲಾಗಿದ್ದರೆ, ಮತ್ತೆ ಕೆಲವರು ಒಂದು ಹೊತ್ತಿನ ಊಟಕ್ಕೂ ಕೂಡ ಒದ್ದಾಡುತ್ತಿದ್ದಾರೆ. ಇಂತಹ ಜನರಿಗೆ ಸಹಾಯ ಮಾಡಲು ಅನೇಕ ಮಂದಿ ಮುಂದೆ ಬಂದಿದ್ದಾರೆ. ಅವರಲ್ಲಿ ಸ್ಯಾಂಡಲ್‍ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಕೂಡ ಒಬ್ಬರು.
Advertisement
ಹೀಗೆ ಅನೇಕ ಮಂದಿಯ ಕಷ್ಟಕ್ಕೆ ಸ್ಪಂದಿಸುತ್ತಿರುವ ಸ್ಯಾಂಡಲ್‍ವುಡ್ ನಟ ಉಪೇಂದ್ರರವರು ರುಪ್ಪೀಸ್ ರೆಸಾರ್ಟ್‍ನನ್ನು ರೈತರ ಭೂಮಿಯನ್ನು ಕಿತ್ತುಕೊಂಡು ನಿರ್ಮಿಸಿದ್ದಾರೆ ಎಂದು ನೆಟ್ಟಿಗರೊಬ್ಬರು ವೀಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಗಂಭೀರ ಆರೋಪ ಮಾಡಿದ್ದರು.
Advertisement
Advertisement
ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಉಪೇಂದ್ರರವರು, ದಯವಿಟ್ಟು ತಾವು ಏನಾದರೂ ಹೇಳುವ ಮುನ್ನ ದಾಖಲೆಗಳನ್ನು ಪರಿಶೀಲಿಸಿ ಮಾತನಾಡಿ, ಸರ್ಕಾರ ನಡೆಸಿದ್ದ ಹರಾಜು ಪ್ರಕ್ರಿಯೆಯಲ್ಲಿ ವಿಲೇಜ್ ಎಂಬ ಹೆಸರಿನ ರೆಸಾರ್ಟ್‍ನನ್ನು 13-14 ವರ್ಷಗಳ ಹಿಂದೆ ಖರೀಸಿದ್ದು, ಅದನ್ನು ಖರೀದಿಸುವ ಮುನ್ನವು ರೆಸಾರ್ಟ್ ಆಗಿಯೇ ಇತ್ತು. ಅದನ್ನೇ ನಂತರ ರುಪ್ಪೀಸ್ ರೆಸಾರ್ಟ್ ಆಗಿ ಹೆಸರನ್ನು ಬದಲಿಸಿದ್ದೇವೆ ಎಂದು ಹೇಳಿದ್ದಾರೆ.
Advertisement
View this post on Instagram
ಜಮೀನಿನ ವಿಚಾರಕ್ಕೆ ಬಂದರೆ ಶಿವಣ್ಣನವರಿಂದ ಜಮೀನನ್ನು ಖರೀದಿಸಿದ್ದು, ಇಂದಿಗೂ ಅಲ್ಲಿ ವ್ಯವಸಾಯ ಮಾಡುತ್ತಿದ್ದೇವೆ. ಅಲ್ಲದೇ ಆ ಸ್ಥಳದಲ್ಲಿ ತರಕಾರಿ ಬೆಳೆಯುತ್ತಿರುವುದನ್ನು ಕೂಡ ನಾನು ಹಂಚಿಕೊಂಡಿದ್ದೇನೆ. ನಿಮಗೇನಾದರೂ ಅನುಮಾನ ವಿದ್ದರೆ ರೆಸಾರ್ಟ್ ಹಾಗೂ ಜಮೀನಿಗೆ ಬಂದು ನೋಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮೂಲಕ ಖಡಕ್ ಆಗಿ ಉತ್ತರಿಸಿದ್ದಾರೆ.