ಮುಂಬೈ: ಮಹಾರಾಷ್ಟ್ರಾದ್ಯಂತ ಕೋವಿಡ್-19 ನಿರ್ಬಂಧಗಳು ಜಾರಿಯಲ್ಲಿರುವುದರಿಂದ ಕೆಲವು ಮಂಗಗಳು ಮನುಷ್ಯರು ನಡೆಸುತ್ತಿದ್ದ ಐಷಾರಾಮಿ ಜೀವನವನ್ನು ನಡೆಸುತ್ತಿದೆ. ಹೌದು ಮಹಾಬಲೇಶ್ವರದಲ್ಲಿರುವ ರೆಸಾರ್ಟ್ ನಲ್ಲಿರುವ ಸ್ವಿಮ್ಮಿಂಗ್ ಪೂಲ್‍ನಲ್ಲಿ ಕೋತಿಗಳು ಸ್ವಿಮ್ಮಿಂಗ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕೋತಿಗಳು ರೆಸಾರ್ಟ್ ನಲ್ಲಿ ಯಾರು ಇಲ್ಲದೇ ಇರುವುದನ್ನು ಕಂಡು ಈಜುಕೊಳಕ್ಕೆ ಜಿಗಿಯುವ ಮೂಲಕ ಬಿಸಿಲಿನ ಶಾಖದಿಂದ ತಂಪು ಮಾಡಿಕೊಂಡಿದೆ.
The monkeys have taken over a resort in Mahabaleshwar, India during lockdown… pic.twitter.com/8Gd4J3mNbN
— Rex Chapman???????? (@RexChapman) May 7, 2021
ವೀಡಿಯೋದಲ್ಲಿ ಕೋತಿಗಳು ಸ್ವಿಮ್ಮಿಂಗ್ ಪೂಲ್ ಬಳಿ ನೆರಳಿಗಾಗಿ ಹಾಕಿರುವ ದೊಡ್ಡದೊಂದು ಛತ್ರಿ ಮೇಲೆ ಏರಿ ಅದರ ಮೇಲಿಂದ ಈಜುಕೊಳಕ್ಕೆ ಜಿಗಿಯುತ್ತದೆ. ಮತ್ತೆ ಮೇಲೆ ಎದ್ದು ಬಂದು ಮತ್ತೆ ಸ್ವಿಮ್ಮಿಂಗ್ ಪೂಲ್ ಒಳಗೆ ಜಿಗಿದು ಆನಂದಿಸುತ್ತಿರುವುದನ್ನು ಕಾಣಬಹುದಾಗಿದೆ.
ಈ ವೀಡಿಯೋವನ್ನು ಎನ್‍ಬಿಇಎ ಸ್ಟಾರ್ ರೆಕ್ಸ್ ಚಾಪ್ಮನ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, 27 ಲಕ್ಷಕ್ಕಿಂತ ಹೆಚ್ಚು ವ್ಯೂವ್ ಆಗಿದೆ. 1 ಲಕ್ಷಕ್ಕೂ ಅಧಿಕ ಲೈಕ್ಸ್ ಮತ್ತು 21,000 ರಿಟ್ವೀಟ್‍ಗಳು ಆಗಿದೆ.