ಚಾಮರಾಜನಗರ: ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರೊಬ್ಬರು ಸಾವನ್ನಪ್ಪಿದ್ದು ವೈದ್ಯರ ನಿರ್ಲಕ್ಷವೇ ಕಾರಣ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.
ಜ್ವರದಿಂದ ಬಳಲುತ್ತಿದ್ದ ಹನೂರು ತಾಲೂಕು ಬಸಪ್ಪನದೊಡ್ಡಿ ಗ್ರಾಮದ ಬಿಎಂಟಿಸಿ ನೌಕರ ರಾಜಪ್ಪ ಅವರು ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರಿಗೆ ಐಸಿಯುನಲ್ಲಿ ಕೇವಲ ಆಕ್ಸಿಜನ್ ಕೊಟ್ಟಿದ್ದಾರೆಯೇ ಹೊರತು ರೆಮ್‍ಡೆಸಿವಿರ್ ಚುಚ್ಚು ಮದ್ದು ಸೇರಿದಂತೆ ಸಮರ್ಪಕ ಚಿಕಿತ್ಸೆ ನೀಡಿಲ್ಲ. ಹೀಗಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರರು ಆರೋಪಿಸಿದ್ದಾರೆ.
Advertisement
Advertisement
ವೈದ್ಯರನ್ನು ಕೇಳಿದರೆ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಅವರು ವೈದ್ಯಾಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತ್ತ ಮೇಲೆ ಮೃತದೇಹವನ್ನು ಬೇಗನೆ ಕೊಟ್ಟಿಲ್ಲ ಹಾಗೂ ಲಗೇಜನ್ನು ಕೊಡದೆ ಸತಾಯಿಸುತ್ತಿದ್ದಾರೆ. ಯುವಕರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ನಿಮ್ಮ ಅಕ್ಕ, ತಂಗಿ, ತಂದೆ, ತಾಯಿ ಎಲ್ಲರನ್ನೂ ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಶವ ಕೇಳಿದರೆ ಪ್ರೋಟೊಕಾಲ್ ಅಂತಾರೆ ಎಂದು ಅಣ್ಣನನ್ನು ಕಳೆದುಕೊಂಡ ನಾಗಪ್ಪ ಆಕ್ರೋಶ ವ್ಯಕ್ತಪಡಿಸಿದರು.