ಬೆಂಗಳೂರು: ಹಲವರು ರೆಮ್‍ಡಿಸಿವಿರ್ ಸಿಗುತ್ತಿಲ್ಲ ಎಂದು ಪರದಾಡುತ್ತಿದ್ದಾರೆ. ಇದರ ಮಧ್ಯೆಯೇ ಮೋಸ ಮಾಡುವವರು ಸಹ ಹೆಚ್ಚಾಗಿದ್ದು, ನಕಲಿ ಔಷಧಿ ಕಂಪನಿ ಹೆಸರು ಹೇಳಿ, ರೆಮ್‍ಡಿಸಿವಿರ್ ಸೇರಿದಂತೆ ಇತರೆ ಔಷಧಿಗಳನ್ನು ನೀಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಕೇಂದ್ರ ವಿಭಾಗದ ಸಿಇಎನ್ ಪೊಲೀಸರಿಂದ ಆಫ್ರಿಕನ್ ಪ್ರಜೆ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಮೊಹಮ್ಮದ್ ಇಸ್ಮಾಯಿಲ್ ಖಾದ್ರಿ ಹಾಗೂ ಅಳದೆ ಅಬ್ದುಲ್ಲಾ ಯೂಸುಫ್ ಬಂಧಿತರು. ಆರೋಪಿಗಳಿಂದ 4 ಮೊಬೈಲ್ಸ್, 1 ಹಾರ್ಡ್ ಡಿಸ್ಕ್, ಸಿಮ್ ಕಾರ್ಡ್ ಹಾಗೂ 4 ಲಕ್ಷ ರೂ. ನಗದು ವಶಕ್ಕೆ ಪಡೆಲಾಗಿದೆ.
ರೆಮ್‍ಡಿಸಿವಿರ್ ಸೇರಿದಂತೆ ಕೋವಿಡ್-19ಗೆ ಸಂಬಂಧಿಸಿದ ಔಷಧಿಗಳ ಮಾರಾಟ ಮಾಡುವುದಾಗಿ ನಂಬಿಸಿ ಆರೋಪಿಗಳು ವಂಚಿಸುತ್ತಿದ್ದರು. ನಕಲಿ ಔಷಧಿ ಕಂಪನಿ ಹೆಸರು ಹೇಳಿ ಆರೋಪಿಗಳು ಸಾರ್ವಜನಿಕರನ್ನು ಸಂಪರ್ಕಿಸುತ್ತಿದ್ದರು. ಬಳಿಕ ರೆಮ್‍ಡಿಸಿವಿರ್ ಮತ್ತಿತರ ಔಷಧಿಗಳನ್ನು ನೀಡುವುದಾಗಿ ಹಣ ಪಡೆಯುತ್ತಿದ್ದರು. ಹೀಗೆ ಸಾರ್ವಜನಿಕರನ್ನು ಸಂಪರ್ಕಿಸಿ ಔಷಧಿ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿಗಳನ್ನು ಆರೋಪಿಗಳು ವಂಚಿಸಿದ್ದಾರೆ.