– ಬೆಂಗಳೂರಿನಲ್ಲಿ ಕೊರೊನಾ ಸೀಲ್‍ಡೌನ್ ಹೈಡ್ರಾಮಾ
ಬೆಂಗಳೂರು: ಸೀಲ್‍ಡೌನ್ ಮಾಡಿದ್ದ ಹಾಸ್ಟೆಲ್ ಮುಂಭಾಗ ಅಧಿಕಾರಿಗಳು ರೆಡ್ ಟೇಪ್ ಹಾಕಿದ್ದರು. ಆದ್ರೆ ಸೋಂಕಿತರ ಸಂಪರ್ಕಿತರು ರೆಡ್ ಟೇಪ್ ಕಿತ್ತು ಹಾಕಿದ್ದರಿಂದ ಬಿಬಿಎಂಪಿ ಅಧಿಕಾರಿಗಳು ಹಾಸ್ಟೆಲ್ ಗೇಟ್‍ಗೆ ಬೀಗ ಹಾಕಿ ಕೀ ತೆಗೆದುಕೊಂಡು ಹೋಗಿದ್ದಾರೆ.
ಬೆಂಗಳೂರಿನ ಅಟ್ಟೂರು ಲೇಔಟ್ ನಲ್ಲಿ ಹಾಸ್ಟೆಲ್ ಕಂ ಕೋಚಿಂಗ್ ಸೆಂಟರ್ ನ ಇಬ್ಬರು ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಸಂಪರ್ಕಿತರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಎಂಟು ಜನರಿಗೆ ಸೋಂಕು ತಗುಲಿದ್ದು ಪತ್ತೆಯಾಗಿದೆ. ಸದ್ಯ ಕೋವಿಡ್ ಸೋಂಕಿತ ವಿದ್ಯಾರ್ಥಿಗಳನ್ನು ಹಜ್ ಭವನದ ಕೋವಿಡ್ ಸೆಂಟರ್ ಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಕೇರಳದಲ್ಲಿ 20 ಸಾವಿರಕ್ಕೂ ಹೆಚ್ಚು ಕೇಸ್ – ಗಡಿ ಜಿಲ್ಲೆಗಳ ಡಿಸಿಗಳ ಜೊತೆ ಇಂದು ಸಿಎಂ ಸಭೆ
Advertisement
Advertisement
ಹಾಸ್ಟೆಲ್ ಕಟ್ಟಡವನ್ನು ಕಂಟೈನ್‍ಮೆಂಟ್ ಝೋನ್ ಎಂದು ಘೋಷಿಸಿ ಸೀಲ್‍ಡೌನ್ ಮಾಡಿದ್ದರು. ಹಾಸ್ಟೆಲ್ ನಲ್ಲಿದ್ದ ಸೋಂಕಿತರ ಸಂಪರ್ಕಿತರು ರೆಡ್ ಟೇಪ್ ತೆಗೆದುಕೊಂಡು ಓಡಾಡಿದ್ದಾರೆ. ಇದರಿಂದ ಅಧಿಕಾರಿಗಳು ಸೋಂಕು ಸಂಪರ್ಕಿತರನ್ನು ಗೃಹಬಂಧನದಲ್ಲಿಡಲು ಗೇಟ್ ಹೊರಗೆ ಲಾಕ್ ಮಾಡಿ ಕೀ ಎತ್ಕೊಂಡು ಹೋಗಿದ್ದಾರೆ. ಜೊತೆಗೆ ಆ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಕ್ಲೋಸ್ ಮಾಡಿದ್ದಾರೆ. ಇದನ್ನೂ ಓದಿ: ನಗರದಲ್ಲಿ ಕೋವಿಡ್ ಮೂರನೇ ಅಲೆ ಆರಂಭದ ಆತಂಕ- ಸೋಂಕಿತರ ಸಂಪರ್ಕಿತರಲ್ಲೂ ಹೆಚ್ಚಿದ ಪಾಸಿಟಿವ್ ಪ್ರಕರಣ