– ಸುಶಾಂತ್ ಸಾಯುವ 6 ದಿನದ ಮುಂಚೆ ಮನೆ ಬಿಟ್ಟು ಹೋಗಿದ್ದಾಳೆ
– ಆಕೆ ನನ್ನ ಮಗನನ್ನು ಬೆದರಿಸಿ ಸಾಯಿಸಿದ್ದಾಳೆ
ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ರಿಯಾ ಚಕ್ರವರ್ತಿ ಅವರ ವಿರುದ್ಧ ದೂರು ನೀಡಿದ್ದು, ಆಕೆ ನನ್ನ ಮಗನಿಗೆ ಓವರ್ ಡೋಸ್ ಮಾತ್ರೆ ನೀಡಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸುಶಾಂತ್ ಸಿಂಗ್ ಸಾವನ್ನಪ್ಪಿ ಒಂದು ತಿಂಗಳ ನಂತರ ಅವರ ತಂದೆ ಕೆಕೆ ಸಿಂಗ್ ಅವರು, ಇಂದು ಪೊಲೀಸರಿಗೆ ದೂರು ನೀಡಿದ್ದು, ರಿಯಾ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಜೊತೆಗೆ ಆಕೆ ನನ್ನ ಮಗನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ್ದಾಳೆ ಮತ್ತು ನನ್ನ ಮಗನನ್ನು ಬೆದರಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾಳೆ ಎಂದು ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
Advertisement
Advertisement
ರಿಯಾ ಕುಟುಂಬದವರು ಸುಶಾಂತ್‍ನನ್ನು ಹಳೆ ಮನೆ ಬಿಡಿಸಿ ರೆಸಾರ್ಟ್‍ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಆತನ ಮನಸ್ಥಿತಿ ಸರಿಯಿಲ್ಲ. ಆತ ಖಿನ್ನತೆಗೆ ಒಳಗಾಗಿದ್ದಾನೆ. ಅವನನ್ನು ವೈದ್ಯರಿಗೆ ತೋರಿಸಬೇಕು ಎಂದು ಹೇಳಿದ್ದರು. ಜೊತೆಗೆ ನನ್ನ ಮಗ ಸಿನಿಮಾ ರಂಗವನ್ನು ಬಿಟ್ಟು ಬಂದ ವ್ಯವಸಾಯ ಮಾಡಬೇಕು ಎಂದುಕೊಂಡಿದ್ದ. ಆದರೆ ಆಕೆ ಅದನ್ನು ತಡೆದಳು. ನಿನ್ನ ಹೆಲ್ತ್ ರೀಪೋರ್ಟ್ ಅನ್ನು ಮೀಡಿಯಾಗೆ ತೋರಿಸಿ ನಿನ್ನ ಮೆಂಟಲ್ ಹೆಲ್ತ್ ಸರಿಯಿಲ್ಲ ಎಂದು ಹೇಳುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ ಎಂದು ಸುಶಾಂತ್ ತಂದೆ ಆರೋಪ ಮಾಡಿದ್ದಾರೆ.
Advertisement
Advertisement
ರಿಯಾ ನನ್ನ ಮಗನನ್ನು ಆಕೆಯ ಮನೆಗೆ ಕರೆದುಕೊಂಡು ಹೋಗಿ, ಮಾನಸಿಕ ಆರೋಗ್ಯ ಚಿಕಿತ್ಸೆ ನೆಪದಲ್ಲಿ ಓವರ್ ಡೋಸ್ ಔಷಧಿಗಳನ್ನು ನೀಡಿದ್ದಾಳೆ. ಯಾರಾದರೂ ಅದನ್ನು ಪ್ರಶ್ನೆ ಮಾಡಿದರೆ ಸುಶಾಂತ್‍ಗೆ ಡೆಂಗ್ಯೂ ಇದೆ ಎಂದು ಹೇಳಿ ನಂಬಿಸಿದ್ದಾಳೆ. ಆಕೆ ನನ್ನ ಮಗ ಸಾಯುವ ಆರು ದಿನದ ಮುಂಚೆಯೇ ಆತನ ಮನೆ ಬಿಟ್ಟು ಹೋಗಿದ್ದಾಳೆ. ನನ್ನ ಮಗನ ಬಳಿ ಇದ್ದ ಹಣ, ಆಭರಣ, ಲ್ಯಾಪ್‍ಟಾಪ್, ಕ್ರೆಡಿಟ್ ಕಾರ್ಡ್ ಮತ್ತು ಸುಶಾಂತ್ ಮೆಡಿಕಲ್ ವರದಿಯನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಕೆಕೆ ಸಿಂಗ್ ದೂರು ನೀಡಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರು, ಕಳೆದ ಜೂನ್ 14ರಂದು ಮುಂಬೈನ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇತ್ತೀಚೆಗೆ ತನ್ನ ಪ್ರಿಯಕರನ ಸಾವಿನ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದ ರಿಯಾ ಚಕ್ರವರ್ತಿ, ಸುಶಾಂತ್ ಅವರ ಆಹ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನೀಡಬೇಕು. ಈ ಪ್ರಕರಣ ಯಾವುದೇ ಲೋಪದೋಷವಿಲ್ಲದೇ ತನಿಖೆ ಆಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಬೇಡಿಕೆ ಇಟ್ಟಿದ್ದರು.
ಸುಶಾಂತ್ ಸಿಂಗ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ, ನಿರ್ದೇಶಕ-ನಿರ್ಮಾಪಕ ಸಂಜಯ್ ಲೀಲಾ ಭನ್ಸಾಲಿ, ಚಲನಚಿತ್ರ ನಿರ್ಮಾಪಕ ಆದಿತ್ಯ ಚೋಪ್ರಾ, ನಿರ್ದೇಶಕ ಮುಖೇಶ್ ಛಬ್ರಾ, ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್, ಚಲನಚಿತ್ರ ವಿಮರ್ಶಕ ರಾಜೀವ್ ಮಸಂದ್ ಸೇರಿದಂತೆ ಸುಮಾರು 40 ಜನರು ತಮ್ಮ ಹೇಳಿಕೆಗಳನ್ನು ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಇತ್ತೀಚೆಗೆ ನಿರ್ದೇಶಕ ಮಹೇಶ್ ಭಟ್ ಮತ್ತು ಕರಣ್ ಜೋಹಾರ್ ಮ್ಯಾನೇಜರ್ ಅವರನ್ನು ವಿಚಾರಣೆ ಮಾಡಲಾಗಿದೆ.