ಮುಂಬೈ: ನಟಿ ರಿಯಾ ಚಕ್ರವರ್ತಿ ಡ್ರಗ್ಸ್ ಸೇವನೆ ಮತ್ತು ಮಾರಾಟದ ತನಿಖೆ ನಡೆಸುತ್ತಿರುವ ಎನ್‍ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ)ಗೆ ಮಹತ್ವದ ಸುಳಿವು ಲಭ್ಯವಾಗಿರುವ ಕುರಿತು ವರದಿಗಳು ಪ್ರಕಟವಾಗಿವೆ. ನಟಿ ರಿಯಾ ಡಾರ್ಕ್ ನೆಟ್ ಜೊತೆ ಸಂಪರ್ಕ ಹೊಂದಿದ್ದು, ಅಲ್ಲಿಂದಲೇ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿರುವ ಬಗ್ಗೆ ವರದಿಯಾಗಿದೆ.
ರಿಯಾ ಡಾರ್ಕ್ ನೆಟ್ ಮೂಲಕ ವಿದೇಶದಿಂದ ಡ್ರಗ್ಸ್ ಆಮದು ಮಾಡಿಕೊಳ್ಳುತ್ತಿದ್ದರು. ಕೆಲ ದಿನಗಳ ಹಿಂದೆ ರಿವೀಲ್ ಆಗಿರುವ ರಿಯ ವಾಟ್ಸಪ್ ಚಾಟ್ ಈ ಬಗ್ಗೆ ಸುಳಿವು ನೀಡಿತ್ತು. ರಿಯಾ ಡ್ರಗ್ಸ್ ಖರೀದಿ ಮತ್ತು ಬಳಸುವುದರ ಬಗ್ಗೆ ಚಾಟ್ ನಡೆಸಿದ್ದರು.
ಮೂರನೇ ದಿನವೂ ಸಹ ಸಿಬಿಐ ಅಧಿಕಾರಿಗಳ ಮುಂದೆ ರಿಯಾ ವಿಚಾರಣೆಗೆ ಹಾಜರಾಗಿದ್ದಾರೆ. ಶುಕ್ರವಾರ 10 ಗಂಟೆ, ಶನಿವಾರ 7 ಗಂಟೆಗಳ ಕಾಲ ರಿಯಾ ವಿಚಾರಣೆ ಎದುರಿಸಿದ್ದಾರೆ. ಮೂರನೇ ದಿನವಾದ ಇಂದು ಸಹ ಡಿಆರ್ ಡಿಓ ಗೆಸ್ಟ್ ಹೌಸ್ ನಲ್ಲಿ ರಿಯಾ ವಿಚಾರಣೆಗೆ ಹಾಜರಾಗಿದ್ದಾರೆ.
ಏನಿದು ಡಾರ್ಕ್‍ನೆಟ್?: ಅಪರಾಧದ ವಿಶ್ವದ ದೊಡ್ಡ ವೇದಿಕೆ ಎಂದು ಡಾರ್ಕ್ ನೆಟ್‍ನ್ನು ಕರೆಯಲಾಗುತ್ತದೆ. ಇಲ್ಲಿ ಡ್ರಗ್ಸ್ ಸಂಬಂಧಿಸಿದ ಔಷಧಿಗಳು, ಅಪರಾಧ ಪ್ರಕರಣಗಳಿಗೆ ಬೇಕಾದ ವಸ್ತುಗಳು ಇಲ್ಲಿ ಡಾರ್ಕ್‍ನೆಟ್ ನಲ್ಲಿ ಲಭ್ಯವಾಗುತ್ತವೆ. ವಿಶ್ವದ ಶೇ.4ರಷ್ಟು ಜನರು ಇಂಟರ್‍ನೆಟ್ ಮೂಲಕ ಈ ವೆಬ್‍ಸೈಟ್ ಸಂಪರ್ಕಿಸುತ್ತಾರೆ. ಶೇ.94 ಜನರು ಸ್ಪೇಸ್ ಇಂಟರ್ ನೆಟ್ ಮೂಲಕ ಡೀಪ್ ಡಾರ್ಕ್‍ನೆಟ್ ಬಳಕೆ ಮಾಡುತ್ತಾರೆ. ನಕಲಿ ಐಡಿ ತಯಾರಿಸುವ ಮೂಲಕ ಇಲ್ಲಿ ವ್ಯವಹರಿಸಲಾಗುತ್ತದೆ. ಹೀಗಾಗಿ ಆರೋಪಿಗಳನ್ನು ಪತ್ತೆ ಹಚ್ಚೋದು ಕಷ್ಟದ ಕೆಲಸ.