– ತಡರಾತ್ರಿ ವರೆಗೆ ಅಂಗಡಿ ತೆರೆಯಬೇಡ ಅಂದಿದ್ದಕ್ಕೆ ದಾಳಿ
– ತಡರಾತ್ರಿ ವರೆಗೆ ಸಮೋಸ ಅಂಗಡಿ ತೆರೆಯಬೇಡ ಅಂದಿದ್ದ ಬಾಬು ಸಹಚರರು
ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯ ಮೇಲೆ ಅಪರಿಚಿತರು ಗುಂಡು ಹಾರಿಸಿರುವ ಆಘಾತಕಾರಿ ಘಟನೆ ಕೆ.ಆರ್.ಪುರದಲ್ಲಿ ನಡೆದಿದೆ.
ನಗರದ ಕೆ.ಆರ್.ಪುರ ಪೊಲೀಸ್ ಠಾಣೆಯ ಹತ್ತಿರದ ದರ್ಗಾ ಮಹಲಾ ಬಳಿ ಘಟನೆ ನಡೆದಿದ್ದು. ಉದ್ಯಮಿ ಆಟೋ ಬಾಬು ಮೇಲೆ ಸೋಹೆಲ್ ಅಂಡ್ ಗ್ಯಾಂಗ್ ಫೈರಿಂಗ್ ಮಾಡಿ ಎಸ್ಕೇಪ್ ಆಗಿದೆ. ರಿಯಲ್ ಎಸ್ಟೇಟ್ ಕಚೇರಿಯಲ್ಲಿದ್ದ ವೇಳೆ ಏಕಾಏಕಿ ಫೈರಿಂಗ್ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಉದ್ಯಮಿ ಆಟೋ ಬಾಬುನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.’
Advertisement
Advertisement
ರಿಯಲ್ ಎಸ್ಟೆಟ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಉದ್ಯಮಿ ಬಾಬು ಮೇಲೆ ರಾತ್ರಿ 9.15ಕ್ಕೆ ಇಬ್ಬರು ಯುವಕರು ಗುಂಡಿನ ದಾಳಿ ನಡೆಸಿದ್ದಾರೆ. ಒಬ್ಬ ಗನ್ ಫೈರ್ ಮಾಡಿದರೆ ಮತ್ತೊಬ್ಬ ಲಾಂಗ್ ನಿಂದ ಹಲ್ಲೆ ಮಾಡಿದ್ದಾನೆ. ಬಾಬು ಸ್ನೇಹಿತರೆಲ್ಲ ಗಣೇಶ ವಿಸರ್ಜನೆಗೆ ತೆರಳಿದ್ದು, ಕಚೇರಿಯಲ್ಲಿ ಒಬ್ಬರೆ ಇದ್ದದ್ದನ್ನು ಕಂಡು ದಾಳಿ ಮಾಡಿದ್ದಾರೆ. ಈ ವೇಳೆ ಗನ್ ಫೈರಿಂಗ್ ನಿಂದ ಬಾಬು ತಪ್ಪಿಸಿಕೊಂಡಿದ್ದು, ಕಚೇರಿ ಗಾಜಿಗೆ ಬುಲೆಟ್ ತಾಗಿದೆ. ನಂತರ ಇಬ್ಬರ ದಾಳಿಯಿಂದಲೂ ಬಾಬು ತಪ್ಪಿಸಿಕೊಂಡು ಹೊರ ಓಡಿದ್ದಾರೆ.
Advertisement
ಗುಂಡಿನ ಶಬ್ದ ಕೇಳಿ ಸ್ಥಳೀಯ ಜನರು ಓಡಿ ಬಂದಿದ್ದು, ಅಷ್ಟರಲ್ಲಿ ಆರೋಪಿಗಳು ಕಾಲ್ಕಿತ್ತಿದ್ದಾರೆ. ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಡಿಸಿಪಿ, ಎಸಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement
ಸೋಹೆಲ್ ಸ್ನೇಹಿತ ಮಿರ್ಜಿ ತಡರಾತ್ರಿ ವರೆಗೂ ಸಮೋಸ ಅಂಗಡಿ ತೆರೆಯುತ್ತಿದ್ದ. ಇದನ್ನು ನೋಡಿದ ಆಟೋ ಬಾಬು ಮತ್ತವರ ಕಡೆಯವರು ಅಂಗಡಿ ಮುಚ್ಚುವಂತೆ ಎಚ್ಚರಿಕೆ ನೀಡಿದ್ದರು. ಇದೇ ವಿಚಾರಕ್ಕೆ ಎರಡು ಗ್ಯಾಂಗ್ ನಡುವೆ ಗಲಾಟೆ ನಡೆದು ವೈಮನಸ್ಸು ಉಂಟಾಗಿತ್ತು. ನಿನ್ನೆ ತಡರಾತ್ರಿ ಆಟೋ ಬಾಬು ಆಫೀಸ್ ನಲ್ಲಿದ್ದ ವೇಳೆ ಹೊಂಚು ಹಾಕಿ ಸೋಹೆಲ್ ಹಾಗೂ ಗ್ಯಾಂಗ್ ದಾಳಿ ಮಾಡಿದ್ದು, ಎರಡು ಸುತ್ತು ಗುಂಡು ಹಾರಿಸಿದ್ದಾರೆ. ನಂತರ ಲಾಂಗ್ ನಲ್ಲಿ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲೇ ಆಟೋ ಬಾಬು ಎಸ್ಕೇಪ್ ಆಗಿದ್ದಾರೆ. ಐವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಆಟೋ ಬಾಬು ಸಚಿವ ಭೈರತಿ ಬಸವರಾಜ್ ಗೆ ಅಪ್ತರಾಗಿದ್ದು, ತಡರಾತ್ರಿ ಆಟೋ ಬಾಬು ಮತ್ತು ಸೋಹೆಲ್ ಗ್ಯಾಂಗ್ ನಡುವೆ ಗಲಾಟೆಯಾಗಿದೆ. ಇದೇ ವಿಚಾರಕ್ಕೆ ಐವರ ಗುಂಪಿನಿಂದ ಆಟೋ ಬಾಬು ಮೇಲೆ ಫೈರಿಂಗ್ ಮಾಡಲಾಗಿದೆ. ನಂತರ ಲಾಂಗ್, ಮಚ್ಚುಗಳಿಂದ ಆಟೋ ಬಾಬು ಆಫೀಸ್ ಧ್ವಂಸ ಮಾಡಿ ಪರಾರಿಯಾಗಿದ್ದಾರೆ.