ರಾಯಚೂರು: ಕೋವಿಡ್ ಎರಡನೇ ಅಲೆ ಹಿನ್ನೆಲೆ ನಗರದ ರಿಮ್ಸ್ ವೈದ್ಯಕೀಯ ಬೋಧಕ ಆಸ್ಪತ್ರೆಗೆ ಕಳಪೆ ವೆಂಟಿಲೇಟರ್ ಪೂರೈಕೆಯಾಗಿರುವುದು ಬೆಳಕಿಗೆ ಬಂದಿದೆ. ತಾಂತ್ರಿಕ ದೋಷವುಳ್ಳ 26 ವೆಂಟಿಲೇಟರ್ ಗಳನ್ನು ವಾಪಸ್ ಕಳಿಸಲು ರಿಮ್ಸ್ ನಿರ್ಧಾರ ಮಾಡಿದೆ. ವೆಂಟಿಲೇಟರ್ ಗಳನ್ನ ಹಿಂಪಡೆದು ಬದಲಾಯಿಸಿಕೊಡುವಂತೆ ರಿಮ್ಸ್ ನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದಿಂದ ಸರಬರಾಜಾದ ವೆಂಟಿಲೇಟರ್ ಗಳು ತಾಂತ್ರಿಕ ದೋಷ ಹೊಂದಿದ್ದು ಬಳಕೆಗೆ ಅನುಕೂಲವಾಗಿಲ್ಲ. ಕೆಎಸ್ ಎಂಎಸ್ ಎಲ್ ನಿಂದ ಪೂರೈಸಿರುವ ಆಗ್ವಾ ಮೆಕ್ ಕಂಪನಿಯ ವೆಂಟಿಲೇಟರ್‍ಗಳು ಸಾಫ್ಟ್‍ವೇರ್ ದೋಷ ಹೊಂದಿದ್ದು ಇಂತಹ ತುರ್ತು ಸಮಯದಲ್ಲಿ ಕೆಲಸಕ್ಕೆ ಬಾರದಂತಾಗಿವೆ.
ಕೋವಿಡ್ ನಿಯಂತ್ರಣ ಮಾಡಬೇಕಾದ ವೇಳೆಯಲ್ಲೂ ಕಳಪೆ ವೆಂಟಿಲೇಟರ್ ಪೂರೈಕೆ ಮಾಡಿದ್ದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇರೆ ವೆಂಟಿಲೇಟರ್ ಗಳು ಬಂದಿದ್ದು ಶೀಘ್ರದಲ್ಲೇ ವೆಂಟಿಲೇಟರ್ ಬದಲಾವಣೆಯಾಗಲಿದ್ದು ಸಮಸ್ಯೆ ಬಗೆಹರಿಯಲಿದೆ ಅಂತ ಜಿಲ್ಲಾಧಿಕಾರಿ ಆರ್ .ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.