ಬೆಂಗಳೂರು: ನಕಲಿ ಸಿಡಿ ತಯಾರಿಸಿ ನಿಮ್ಮ ಸಿಡಿ ಇದೆ ಎಂದು ಯಾರಾದರೂ ಬ್ಲ್ಯಾಕ್ ಮೇಲ್ ಮಾಡಿರುತ್ತಾರೆ. ಹೀಗಾಗಿ ರಕ್ಷಣೆಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ.

ಈ ಹಿಂದೆ ಹಲವು ರೀತಿಯ ಆರೋಪಿಗಳು ಬಂದಿವೆ ಅವರೆಲ್ಲ ದೋಷ ಮುಕ್ತರಾಗಿದ್ದಾರೆ. ಹೀಗೆ ಈ ಪ್ರಕರಣದಿಂದಲೂ ಹೊರಗೆ ಬರುತ್ತಾರೆ. ಯಾರು ಬೇಕಾದರೂ ಸಿಡಿ ತಯಾರಿಸುತ್ತಾರೆ. ನಕಲಿ ಸಿಡಿ ಯಾರಾದರೂ ಮಾಡಿರಬಹುದುದು ಹೀಗಾಗಿ ಅವರ ರಕ್ಷಣೆಗೆ ಕೋರ್ಟ್ ಹೋಗಿದ್ದಾರೆ.
ಷಡ್ಯಂತ್ರ ಮಾಡುವವರು, ವಿರೋಧಿಗಳು ಇಂತಹ ಕೆಲಸ ಮಾಡುತ್ತಾರೆ. ಎಲ್ಲಾ ಕಾಲದಲ್ಲಿಯೂ ಸರ್ಕಾರದಲ್ಲಿ ಇಂತಹ ಆರೋಪಗಳು ಕೇಳಿಬಂದಿವೆ. ಆದರೆ ನಂತರ ಅವರೆಲ್ಲ ನಿರ್ದೋಷಿಗಳು ಎಂದು ಸಾಬೀತು ಪಡಿಸಿದ್ದಾರೆ. ಈ ಪ್ರಕರಣವು ಹಾಗೆ ಆಗುತ್ತದೆ ಎಂದು ಹೇಳಿದ್ದಾರೆ.



