ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಸಚಿವ ವಿರುದ್ಧ ಎಫ್‍ಐಆರ್ ದಾಖಲಾಗುವ ಸಾಧ್ಯತೆಗಳಿವೆ.
ಕೆಪಿಟಿಸಿಎಲ್ ನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಬಹುತೇಕ ಇಂದು ಮಧ್ಯಾಹ್ನದೊಳಗೆ ಎಫ್‍ಐಆರ್ ದಾಖಲಾಗಬಹುದು. ಕೆಲ ಕಾನೂನು ತಜ್ಞರ ಸಲಹೆಯ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಾಗುವ ಸಾಧ್ಯತೆ ಇದೆ.
Advertisement
Advertisement
ಲೈಂಗಿಕ ದೌರ್ಜನ್ಯದಡಿ ಈ ಎಫ್‍ಐಆರ್ ದಾಖಲು ಮಾಡುವ ಸಾಧ್ಯತೆ ಇದ್ದು, ಸೆಕ್ಸ್ ಸ್ಕ್ಯಾಂಡಲ್‍ನಲ್ಲಿ ಜಾರಕಿಹೊಳಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ಕಾನೂನು ತಜ್ಞರು ಈಗಾಗಲೇ ನಿತ್ಯಾನಂದ ಪ್ರಕರಣದ ಉದಾಹರಣೆ ನೀಡಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಮುಜುಗರ ಆಗ್ಬಾರ್ದು ಅಂತ ರಾಜೀನಾಮೆ: ರಮೇಶ್ ಜಾರಕಿಹೊಳಿ
Advertisement
Advertisement
ನಿತ್ಯಾನಂದ ಕೇಸ್‍ನಲ್ಲಿ ಕಾರು ಚಾಲಕ ಲೆನಿನ್ ದೂರಿನ ಮೂಲಕ ಎಫ್‍ಐಆರ್ ದಾಖಲಾಗಿತ್ತು. ಲೆನಿನ್ ಕೂಡ ಅವತ್ತು ಮೂರನೇ ವ್ಯಕ್ತಿ ಆಗಿದ್ದ. ದೂರು ನೀಡಿದ ಬಳಿಕ ಅತ್ಯಾಚಾರ ಆಗಿಲ್ಲ ಎಂದು ಆ ನಟಿ ಹೇಳಿದ್ದರು. ಈಗ ಜಾರಕಿಹೊಳಿ ಕೇಸ್‍ನಲ್ಲೂ ಅದೇ ಮಾರ್ಗ ಅನುಸರಿಸಲು ಚಿಂತನೆ ನಡೆಸಲಾಗಿದೆ. ಹೀಗಾಗಿ ಪ್ರಕರಣ ದಾಖಲು ಮಾಡಿ ಯುವತಿಯ ಹೇಳಿಕೆ ಬಿಡಲು ಚಿಂತನೆ ನಡೆಸಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.