ನೆಲಮಂಗಲ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ಹಲವಾರು ಗ್ರಾಮಗಳ ಬಳಿ ತ್ಯಾಜ್ಯ ಸಂಗ್ರಹ ಹೆಚ್ಚಾಗುತ್ತಿದೆ. ರಾತ್ರಿ ವೇಳೆಯಲ್ಲಿ ಆಸ್ಪತ್ರೆ ತ್ಯಾಜ್ಯ, ಪ್ಲಾಸ್ಟಿಕ್, ಕೋಳಿ ತ್ಯಾಜ್ಯ, ಇನ್ನೀತರ ಅನುಪಯುಕ್ತ ವಸ್ತುಗಳನ್ನು ಎಸೆದು ಹೋಗುವವರ ಸಂಖ್ಯೆ ಏರಿಕೆಯಾಗಿ ಹೆದ್ದಾರಿ ಪಕ್ಕದಲ್ಲಿ ಮಲಿನ ವಾತಾವರಣವಿದ್ದು, ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ನೆಲಮಂಗಲ ಗ್ರಾಮಾಂತರ ಭಾಗದ ಬೇಗೂರು, ತಾಳೆಕೆರೆ ಗೇಟ್, ಹನುಮಂತಪುರ ಗೇಟ್, ಕುಲವನಹಳ್ಳಿ ಕೆರೆ ಹೀಗೆ ಹಲವೆಡೆ ತ್ಯಾಜ್ಯ ಸಂಗ್ರಹ ಒಂದೆಡೆ ಶೇಖರಣೆಯಾಗಿ ಪರಿಸರ ಮಾಲಿನ್ಯವಾಗುತ್ತಿದೆ. ಹೆದ್ದಾರಿ ಪಕ್ಕದಲ್ಲಿ ಗುಬ್ಬು ನಾರುವ ವಾಸನೆ ಕಂಡುಬಂದಿದ್ದು, ವಾಹನ ಸವಾರರು ಮತ್ತು ಸ್ಥಳೀಯರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಇಂದ್ರಜಿತ್ ಅಪ್ಪನಿಗೆ ಹುಟ್ಟಿದವರಾಗಿದ್ರೆ ದಾಖಲೆ ರಿಲೀಸ್ ಮಾಡಲಿ: ದರ್ಶನ್ ನೇರ ಸವಾಲ್
ರಾತ್ರಿ ವೇಳೆ ತ್ಯಾಜ್ಯ ತಂದು ಸುರಿಯುವ ಹಿನ್ನೆಲೆ ತಾಲೂಕಿನ, ಟಿ.ಬೇಗೂರು, ಕುಲವನಹಳ್ಳಿ, ಹನುಮಂತಪುರ ಕೆರೆಗಳಲ್ಲಿ, ಕೆರೆ ನೀರಿನ ಪಾತ್ರದಲ್ಲಿ ಉತ್ತಮ ಮಳೆಯಾಗದೆ, ಹಲವಾರು ವರ್ಷಗಳಿಂದ ನೀರಿಲ್ಲದೆ ಒಣಗುತ್ತಿದೆ. ಆದ್ದರಿಂದ ನೀರಿಗೆ ಈ ತ್ಯಾಜ್ಯದ ಸೇರುತ್ತಿಲ್ಲ, ಆದರೆ ಕೆರೆಗೆ ನೀರು ಬಂದರೆ ಕಲ್ಮಶ ಸೇರುವುದು ಕಟ್ಟಿಟ್ಟ ಬುತ್ತಿಯಾಗಿದೆ. ಕೆರೆ ಅಕ್ಕ-ಪಕ್ಕದಲ್ಲಿ ಕೋಳಿ ತ್ಯಾಜ್ಯ ಮತ್ತು ಆಸ್ಪತ್ರೆ ತ್ಯಾಜ್ಯದಿಂದ ರ್ದುವಾಸನೆ ಬರುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ, ಈ ಬಗ್ಗೆ ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ.