ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ನಟಿ ಸುರೇಖಾ ಸಿಕ್ರಿ ಇನ್ನಿಲ್ಲ

Public TV
2 Min Read
surekha sikri

ಮುಂಬೈ: ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಖ್ಯಾತ ನಟಿ ಸುರೇಖಾ ಸಿಕ್ರಿ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಟಿ ಸುರೇಖಾ ಸಿಕ್ರಿ( 75) ವಯಸ್ಸಾಗಿತ್ತು. ಸುರೇಖಾ ಸಿಕ್ರಿಯವರು ಬಧಾಯಿ ಹೊ (Badhaai Ho) ಚಿತ್ರ ಹಾಗೂ ಬಾಲಿಕಾ ವಧು ಧಾರವಾಹಿಗಳ ಪಾತ್ರಗಳಿಂದ ಮನೆಮಾತಾಗಿದ್ದರು. ಸಿಕ್ರಿಯವರು ಕೆಲಕಾಲದಿಂದ ಅನಾರೋಗ್ಯಕ್ಕೀಡಾಗಿದ್ದರು. ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದನ್ನೂ ಓದಿ: ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆ – ಅಧಿಕಾರಿಗಳಿಂದ ಶೋಭಾ ಮಾಹಿತಿ ಕಲೆ

1978ರಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ ಅವರ ಮೊದಲ ಚಿತ್ರ- ಕಿಸ್ಸಾ ಕುರ್ಸಿ ಕಾ ನಂತರದಲ್ಲಿ ಅವರು ಹಿಂದಿ ಹಾಗೂ ಮಲಯಾಳಂ ಚಿತ್ರಗಳಲ್ಲಿ ಸತತವಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಹೋದರು. ಅದೇ ಸಮಯದಲ್ಲಿ ಅವರು ಹಿಂದಿಯ ಧಾರವಾಹಿಗಳಲ್ಲೂ ಕಾಣಿಸಿಕೊಂಡರು. ತಮಸ್, ಮಮ್ಮೂ, ಜುಬೈದಾ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿದ ಧಾರವಾಹಿ ಬಾಲಿಕಾ ವಧು ಸಿಕ್ರಿಯವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. 2018ರಲ್ಲಿ ಆಯುಷ್ಮಾನ್ ಖುರಾನಾ ನಟಿಸಿದ ಬಧಾಯಿ ಹೊ ಚಿತ್ರದಲ್ಲಿ ಅಜ್ಜಿಯಾಗಿ ನಟಿಸಿದ ಅವರ ಪಾತ್ರ ಅಪಾರ ಜನಮೆಚ್ಚುಗೆ ಪಡೆದಿತ್ತು. ಇದನ್ನೂ ಓದಿ: ಸಾಲ ತೀರಿಸಲು ಕಿಡ್ನಿ ಮಾರಾಟಕ್ಕೆ ಮುಂದಾದ ದಂಪತಿ- 40 ಲಕ್ಷ ಕಳೆದುಕೊಂಡ್ರು

ಸುರೇಖಾ ಸಿಕ್ರಿಯವರು 2019, 1995 ಹಾಗೂ1988ರಲ್ಲಿ ತಮ್ಮ ಅತ್ಯುತ್ತಮ ನಿರ್ವಹಣೆಗಾಗಿ ಉತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು. ಇದರೊಂದಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ತಮ್ಮ ಕಿರುತೆರೆ ವೃತ್ತಿ ಬದುಕಿನ ಸಾಧನೆಗಾಗಿಯೂ ಅವರು ಇಂಡಿಯನ್ ಟೆಲಿ ಜ್ಯೂರಿ ಅವಾರ್ಡ್ ಅನ್ನು ಹಲವು ಬಾರಿ ಪಡೆದಿದ್ದಾರೆ. ಇದನ್ನೂ ಓದಿ: ಕಾಲಿಗೆ ಮಾಸ್ಕ್ ಸಿಕ್ಕಿಸಿಕೊಂಡು ಟ್ರೋಲ್ ಆದ ಸಚಿವ

Share This Article
Leave a Comment

Leave a Reply

Your email address will not be published. Required fields are marked *