ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಹರಿಪ್ರಿಯಾ ಮಂತ್ರಾಲಯಕ್ಕೆ ಭೇಟಿಕೊಟ್ಟು ರಾಯರ ಸನ್ನಿಧಿಯಲ್ಲಿ ಕಳೆದ ದಿನ ತುಂಬಾ ವಿಶೇಷವಾಗಿದೆ ಎಂದು ಕೆಲವು ಸಾಲುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಂತ್ರಾಲಯಕ್ಕೆ ಹರಿಪ್ರಯಾ ಭೇಟಿಕೊಟ್ಟ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಹರಿಪ್ರಿಯಾ ಭಾಗಿಯಾಗಿದ್ದರು. ಇದೀಗ ಹರಿಪ್ರಿಯಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಚಾರವಾಗಿ ಹಂಚಿಕೊಂಡಿದ್ದಾರೆ.
ಮಂತ್ರಾಲಯದ ಶ್ರೀ ಸುಬುಧೇಂದ್ರ ಸ್ವಾಮಿ ಅವರಿಂದ ಸನ್ಮಾನ ಸ್ವೀಕರಿಸಿದ್ದು ಅಪಾರ ಹೆಮ್ಮೆ ಇದೆ. ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ದಿನದಂದು ಗೌರವ ಸಿಕ್ಕಿರುವುದು ಇನ್ನಷ್ಟು ವಿಶೇಷ. ಮಂತ್ರಾಲಯ ನನ್ನನ್ನು ವಿಸ್ಮಯಗೊಳಿಸುವುದನ್ನು ಎಂದಿಗೂ ಕಮ್ಮಿಯಾಗಿಲ್ಲ. ವಿಶೇಷವಾಗಿ ಅವರ ಆತಿಥ್ಯ ಮತ್ತು ಅಲ್ಲಿನ ಅದ್ಭುತ ವೈಬ್ಸ್ ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.
ಹರಿಪ್ರಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊಂಚ ಬಿಡುವು ಮಾಡಿಕೊಂಡು ರಾಘವೇಂದ್ರ ಸ್ವಾಮಿ ದರ್ಶನವನ್ನು ಮಾಡಿದ್ದಾರೆ.